ತಮಿಳ್ಇಸೈ ಸೌಂದರರಾಜನ್ 
ದೇಶ

ತಮಿಳುನಾಡು: ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳ್ಇಸೈ ಸೌಂದರರಾಜನ್ ಬಿಜೆಪಿ ಸೇರ್ಪಡೆ

ತೆಲಂಗಾಣ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ತಮಿಳ್ಇಸೈ ಸೌಂದರರಾಜನ್ ಅವರು ತಮಿಳುನಾಡಿನಲ್ಲಿ ಇಂದು ಬಿಜೆಪಿಗೆ ಮರುಸೇರ್ಪಡೆಗೊಂಡಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಚೆನ್ನೈನಲ್ಲಿರುವ ಪಕ್ಷದ ಕೇಂದ್ರ ಕಚೇರಿ ‘ಕಮಲಾಲಯ’ದಲ್ಲಿ ಸೌಂದರರಾಜನ್ ಅವರಿಗೆ ಪಕ್ಷದ ಸದಸ್ಯತ್ವದ ಕಾರ್ಡ್ ನೀಡಿದರು.

ಚೆನ್ನೈ: ತೆಲಂಗಾಣ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ತಮಿಳ್ಇಸೈ ಸೌಂದರರಾಜನ್ ಅವರು ತಮಿಳುನಾಡಿನಲ್ಲಿ ಇಂದು ಬಿಜೆಪಿಗೆ ಮರುಸೇರ್ಪಡೆಗೊಂಡಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಚೆನ್ನೈನಲ್ಲಿರುವ ಪಕ್ಷದ ಕೇಂದ್ರ ಕಚೇರಿ ‘ಕಮಲಾಲಯ’ದಲ್ಲಿ ಸೌಂದರರಾಜನ್ ಅವರಿಗೆ ಪಕ್ಷದ ಸದಸ್ಯತ್ವದ ಕಾರ್ಡ್ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಮಿಳ್ಇಸೈ ಸೌಂದರರಾಜನ್, ತಮ್ಮ ಹುದ್ದೆ ತೊರೆಯುವುದು ಕಠಿಣ ನಿರ್ಧಾರವಾಗಿದ್ದರೂ, ಪಕ್ಷಕ್ಕಾಗಿ ಮತ್ತೆ ಕೆಲಸ ಮಾಡಲು ಸಂತೋಷವಾಗಿದೆ. ವನತಿ ಶ್ರೀನಿವಾಸನ್ ಇಲ್ಲಿ ಕುಳಿತುಕೊಳ್ಳುತ್ತಿದ್ದರು. ಅವರು ರಾಜಕೀಯದಲ್ಲಿ ಯಶಸ್ವಿಯಾದ ಮಹಿಳೆಗೆ ಉದಾಹರಣೆಯಾಗಿದ್ದಾರೆ. ಇದು ಅತ್ಯಂತ ಸಂತೋಷದ ದಿನ. ಇದು ಕಠಿಣ ನಿರ್ಧಾರವಾಗಿತ್ತು' ಎಂದು ಅವರು ಹೇಳಿದರು.

'ರಾಜ್ಯಪಾಲರಾಗಿ ನನಗೆ ಹಲವು ಸೌಲಭ್ಯಗಳು ಇದ್ದವು. ಆದರೆ, ನಾನು ಒಂದು ಪರ್ಸೆಂಟ್ ಕೂಡ ಪಶ್ಚಾತ್ತಾಪ ಪಡುವುದಿಲ್ಲ. ನಾನು ತೆಲಂಗಾಣದಲ್ಲಿ ಹಲವು ಸವಾಲುಗಳನ್ನು ಕಂಡಿದ್ದೇನೆ. ನಾನು ರಾಜ್ಯಪಾಲರಾಗಿದ್ದ ಸಮಯದಲ್ಲಿ ನಾಲ್ವರು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ತಮಿಳುನಾಡಿನಲ್ಲಿ ಕಮಲ ಅರಳುವುದು ಖಚಿತ' ಎಂದರು.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಮಾತನಾಡಿ, ರಾಜ್ಯಕ್ಕೆ ಕೊಡುಗೆ ನೀಡಲು ಬಯಸಿದ್ದರಿಂದ ತಮಿಳ್ಇಸೈ ಅವರು ತಮ್ಮ ಸ್ಥಾನವನ್ನು ತೊರೆದಿದ್ದಾರೆ ಎಂದು ಹೇಳಿದರು.

'ಇದು ಸುಲಭದ ನಿರ್ಧಾರವಾಗಿರಲಿಲ್ಲ. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಆದ್ದರಿಂದ ತಮಿಳಿಸೈ ರಾಜಕೀಯದಲ್ಲಿ ಇರಲು ಬಯಸುತ್ತಾರೆ ಮತ್ತು ಬಿಜೆಪಿಗೆ ಕೊಡುಗೆ ನೀಡಲು ಬಯಸುತ್ತಾರೆ. ನಿನ್ನೆ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಇಂದು ಅವರು ಮತ್ತೆ ಬಿಜೆಪಿ ಕೇಡರ್‌ಗೆ ಸೇರಿದ್ದಾರೆ' ಎಂದು ತಿಳಿಸಿದರು.

'ಇದು ಅವರು (ತಮಿಳಿಸೈ) ಜನರನ್ನು ಮತ್ತು ಬಿಜೆಪಿ ಪಕ್ಷವನ್ನು ಹೇಗೆ ಪ್ರೀತಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಕಿಶನ್ ರೆಡ್ಡಿ ಅವರು ಮೈತ್ರಿ ಮತ್ತು ಸೀಟು ಹಂಚಿಕೆ ಮಾತುಕತೆಗಾಗಿ ಐದು ದಿನಗಳಿಂದ ಚೆನ್ನೈನಲ್ಲಿದ್ದಾರೆ. ತಮಿಳಿಸೈ ಅವರು ಸಾಕಷ್ಟು ಆಡಳಿತಾತ್ಮಕ ಅನುಭವದೊಂದಿಗೆ ಬಂದಿದ್ದಾರೆ. ನಾವು ಅವರನ್ನು ನಮ್ಮ ಪಕ್ಷಕ್ಕೆ ಮರಳಿ ಸ್ವಾಗತಿಸುತ್ತೇವೆ' ಎಂದರು.

ಈಮಧ್ಯೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಸೌಂದರರಾಜನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಸದ್ಯ ಜಾರ್ಖಂಡ್‌ನ ರಾಜ್ಯಪಾಲರಾದ ಸಿಪಿ ರಾಧಾಕೃಷ್ಣನ್ ಅವರನ್ನು ಹೆಚ್ಚುವರಿಯಾಗಿ ತೆಲಂಗಾಣದ ಗವರ್ನರ್ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ.

ಇದಕ್ಕೂ ಮುನ್ನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಎಂಕೆ ಸ್ಟಾಲಿನ್ 2024ರ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು. ಸ್ಟಾಲಿನ್ ಪಕ್ಷದ ಪ್ರಣಾಳಿಕೆಯನ್ನು ಪ್ರಕಟಿಸಿದರು ಮತ್ತು ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ದೇಶವನ್ನು ನಾಶಪಡಿಸಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT