ಸಿಎಂ ಹಿಮಂತ ಬಿಸ್ವ ಶರ್ಮಾ  
ದೇಶ

'ಅಸ್ಸಾಂನಲ್ಲಿ ಸ್ಥಳೀಯರಾಗಬೇಕೆಂದರೆ...'; ಬಾಂಗ್ಲಾದೇಶ ಮೂಲದ ಬಂಗಾಳಿ ಮಾತನಾಡುವ ಮುಸ್ಲಿಮರಿಗೆ ಸಿಎಂ Himanta Biswa Sarma ಷರತ್ತು!

ಅಸ್ಸಾಂನಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶ ಮೂಲದ ಬಂಗಾಳಿ ಮಾತನಾಡುವ ವಲಸಿಗ ಮುಸ್ಲಿಮರಿಗೆ ಸಿಎಂ ಹಿಮಂತ ಬಿಸ್ವ ಶರ್ಮಾ ಕೆಲ ಷರತ್ತುಗಳನ್ನು ವಿಧಿಸಿದ್ದಾರೆ.

ಗುವಾಹತಿ: ಅಸ್ಸಾಂನಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶ ಮೂಲದ ಬಂಗಾಳಿ ಮಾತನಾಡುವ ವಲಸಿಗ ಮುಸ್ಲಿಮರಿಗೆ ಸಿಎಂ ಹಿಮಂತ ಬಿಸ್ವ ಶರ್ಮಾ ಕೆಲ ಷರತ್ತುಗಳನ್ನು ವಿಧಿಸಿದ್ದಾರೆ.

ಹೌದು.. ಕೇಂದ್ರದ ಮೋದಿ ಸರ್ಕಾರ ಪೌರತ್ವ ತಿದ್ದುಪಡೆ ಕಾಯ್ದೆ ಸಿಎಎ ಜಾರಿ ಬೆನ್ನಲ್ಲೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಲಸಿಗ ಬಾಂಗ್ಲಾದೇಶ ಮೂಲದ ಬಂಗಾಳಿ ಮಾತನಾಡುವ ಮುಸ್ಲಿಮರು ಅಸ್ಸಾಂನಲ್ಲಿ ಉಳಿದುಕೊಳ್ಳಲು ಕೆಲ ಷರತ್ತುಗಳನ್ನು ವಿಧಿಸಿದ್ದಾರೆ.

ಬಾಂಗ್ಲಾದೇಶ ಮೂಲದ ಬಂಗಾಳಿ ಮಾತನಾಡುವ ವಲಸಿಗ ಮುಸ್ಲಿಮರು ಅಸ್ಸಾಂನಲ್ಲಿ ಸ್ಥಳೀಯರಾಗಬೇಕು ಎಂದರೆ ಅವರು ಕಡ್ಡಾಯವಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದನ್ನು ನಿಲ್ಲಿಸಬೇಕು. ಬಹುಪತ್ನಿತ್ವವನ್ನು ತೊರೆಯಬೇಕು. ಬಹುಪತ್ನಿತ್ವ ಅಭ್ಯಾಸ ಮಾಡುವುದು ಅಸ್ಸಾಮಿ ಜನರ ಸಂಸ್ಕೃತಿಯಲ್ಲ. ಅವರು ಸ್ಥಳೀಯರಾಗಲು ಬಯಸಿದರೆ, ಅವರು ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಹಿಂದೆ ಬಾಂಗ್ಲಾದೇಶ ಮೂಲದ ಹೆಚ್ಚಿನ ಮುಸ್ಲಿಮರು ಇಂತಹ ಕೆಟ್ಟ ಆಚರಣೆ ಪದ್ಧತಿಗಳನ್ನು ಹೊಂದಿದ್ದರು. 'ಬಂಗಾಳಿ ಮಾತನಾಡುವ ಮುಸ್ಲಿಮರು (Miyas) 'ಸ್ಥಳೀಯರು' ಅಥವಾ ಅಲ್ಲವೇ ಎಂಬುದು ಬೇರೆ ವಿಷಯ. ಆದರೆ ನಾನು ಹೇಳುವುದು ಏನೆಂದರೆ, ನೀವು ಸ್ಥಳೀಯರಾಗುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಅದಕ್ಕಾಗಿ ಬಾಲ್ಯವಿವಾಹ ಮತ್ತು ಬಹುಪತ್ನಿತ್ವದಂತಹ ಪದ್ಧತಿಗಳನ್ನು ತ್ಯಜಿಸಬೇಕು. ಇದರ ಬದಲು ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸಬೇಕು' ಎಂದು ಹೇಳಿದ್ದಾರೆ.

ಅಂತೆಯೇ 'ಅಸ್ಸಾಂ ಜನರು ಹೆಣ್ಣು ಮಕ್ಕಳನ್ನು 'ಶಕ್ತಿ' (ದೇವತೆ)ಗೆ ಹೋಲಿಸುವ ಸಂಸ್ಕೃತಿಯನ್ನು ಹೊಂದಿದ್ದಾರೆ. ಆದರೆ ಎರಡು-ಮೂರು ಸಲ ಮದುವೆಯಾಗುವುದು ಅಸ್ಸಾಂನ ಸಂಸ್ಕೃತಿಯಲ್ಲ. ಬಂಗಾಳಿ ಮಾತನಾಡುವ ಮುಸ್ಲಿಮರು ಅಸ್ಸಾಂ ಸಂಪ್ರದಾಯವನ್ನು ಅನುಸರಿಸಿದರೆ, ಅವರನ್ನೂ ಸ್ಥಳೀಯರು ಎಂದು ಪರಿಗಣಿಸಲಾಗುತ್ತದೆ' ಎಂದು ಅವರು ಹೇಳಿದ್ದಾರೆ.

ಅಂತೆಯೇ ಬಂಗಾಳಿ ಮಾತನಾಡುವ ಮುಸ್ಲಿಮರು 'ಸತ್ರ' (ವೈಷ್ಣವ ಮಠಗಳು) ಭೂಮಿಯನ್ನು ಅತಿಕ್ರಮಿಸಿದರೆ ಸ್ಥಳೀಯರು ಎಂದು ಹೇಗೆ ಸಹಿಸಿಕೊಳ್ಳಬೇಕು? ಎಂದು ಹಿಮಂತ ಬಿಸ್ವ ಶರ್ಮಾ ಆಶ್ಚರ್ಯಪಟ್ಟರು. ಅಲ್ಲದೆ "ನಿಮ್ಮ ಮಕ್ಕಳನ್ನು ಮದರಸಾಗಳಿಗೆ ಕಳುಹಿಸುವ ಬದಲು, ನೀವು ಸ್ಥಳೀಯರು ಎಂದು ಕರೆಯಬೇಕಾದರೆ ಅವರಿಗೆ ವೈದ್ಯರು ಮತ್ತು ಇಂಜಿನಿಯರ್ ಆಗಲು ಶಿಕ್ಷಣ ನೀಡಿ. ಅವರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರಾರಂಭಿಸಬೇಕು ಮತ್ತು ಅವರ ತಂದೆಯ ಆಸ್ತಿಯ ಮೇಲೆ ಹಕ್ಕನ್ನು ನೀಡಬೇಕು ಎಂದರು.

ಅತೀ ಹೆಚ್ಚು ಮುಸ್ಲಿಮರು ಇರುವ 2ನೇ ರಾಜ್ಯ

ಅಂದಹಾಗೆ ಜಮ್ಮು ಮತ್ತು ಕಾಶ್ಮೀರ ನಂತರ ಅತೀ ಹೆಚ್ಚು ಮುಸ್ಲಿಮರನ್ನು ಹೊಂದಿರುವ 2ನೇ ರಾಜ್ಯ ಎಂಬ ಖ್ಯಾತಿ ಅಸ್ಸಾಂ ಹೊಂದಿದೆ. 2011 ರ ಜನಗಣತಿಯು ಅಸ್ಸಾಂನ ಒಟ್ಟು ಜನಸಂಖ್ಯೆಯ 34% ಕ್ಕಿಂತ ಹೆಚ್ಚು ಮುಸ್ಲಿಮರು ಎಂದು ಹೇಳುತ್ತದೆ. ಆದರೆ ರಾಜ್ಯದಲ್ಲಿ ಈ ಮುಸ್ಲಿಂ ಜನಸಂಖ್ಯೆಯು ಎರಡು ವಿಭಿನ್ನ ಜನಾಂಗಗಳನ್ನು ಹೊಂದಿದ್ದು, ಬಂಗಾಳಿ-ಮಾತನಾಡುವ ಮತ್ತು ಬಾಂಗ್ಲಾದೇಶ ಮೂಲದ ವಲಸಿಗ ಮುಸ್ಲಿಮರು ಮತ್ತು ಅಸ್ಸಾಮಿ-ಮಾತನಾಡುವ ಸ್ಥಳೀಯ ಮುಸ್ಲಿಮರು ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT