ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ 
ದೇಶ

ಜೈಲಿನಲ್ಲಿ ಪ್ರಿಂಟಿಂಗ್ ಕೌಶಲ್ಯ ಕಲಿತಿದ್ದ ವ್ಯಕ್ತಿಯಿಂದ ನಕಲಿ ನೋಟು ತಯಾರಿಕೆ!

Srinivas Rao BV

ನವದೆಹಲಿ: ಜೈಲಿನಲ್ಲಿದ್ದಾಗ ಮುದ್ರಣ ಕೌಶಲ್ಯ ಕಲಿತಿದ್ದ ವ್ಯಕ್ತಿಯೋರ್ವ ಬಿಡುಗಡೆಯಾದ ಬಳಿಕ ಆ ಕೌಶಲ್ಯವನ್ನು ನಕಲಿ ನೋಟುಗಳ ಮುದ್ರಣಕ್ಕೆ ಬಳಸಿಕೊಂಡಿದ್ದಾನೆ. ಮಧ್ಯಪ್ರದೇಶದ 35 ವರ್ಷದ ಭೂಪೇಂದ್ರ ಸಿಂಗ್ ಧಾಕತ್ ಎಂಬ ವ್ಯಕ್ತಿಯನ್ನು ನಕಲಿ ಕರೆನ್ಸಿ ನೋಟು ಮುದ್ರಣದ ಆರೋಪದ ಮೇಲೆ ಬಂಧಿಸಲಾಗಿದ್ದು 200 ರೂಪಾಯಿ ಮುಖಬೆಲೆಯ 95 ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ನೋಟುಗಳ ಹೊರತಾಗಿ ಕಲರ್ ಪ್ರಿಂಟರ್, 6 ಇಂಕ್ ಬಾಟಲ್ ಗಳು ಹಾಗೂ ನಕಲಿ ನೋಟುಗಳ ಮುದ್ರಣಕ್ಕೆ ಬಳಕೆ ಮಾಡುತ್ತಿದ್ದ ಪೇಪರ್ ಗಳನ್ನು ಪೊಲೀಸರು ಆತನ ಮನೆಯಿಂದ ವಶಕ್ಕೆ ಪಡೆದಿದ್ದಾರೆ ಎಂದು ಸಿರೊಂಜ್ ಉಪವಿಭಾಗಾಧಿಕಾರಿ ಉಮೇಶ್ ತಿವಾರಿ ಪಿಟಿಐಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ನಕಲಿ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಹರಿಬಿಡುತ್ತಿದ್ದೆ ಎಂದು ಢಾಕತ್ ತಪ್ಪೊಪ್ಪಿಕೊಂಡಿದ್ದಾನೆ.

SCROLL FOR NEXT