ಮಸೀದಿ
ಮಸೀದಿ TNIE
ದೇಶ

ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ: ಹೋಳಿ ಹಿನ್ನಲೆ ಅಲಿಘರ್‌ನಲ್ಲಿ ಮಸೀದಿಗಳನ್ನು ಕಪ್ಪು ಟಾರ್ಪಾಲ್‌ನಿಂದ ಮುಚ್ಚಲಾಗಿದೆ, ವಿಡಿಯೋ!

Vishwanath S

ಅಲಿಗಢ: ಹೋಳಿ ಹಿನ್ನೆಲೆಯಲ್ಲಿ ಅಲಿಘರ್‌ನ ಸೂಕ್ಷ್ಮ ಪ್ರದೇಶಗಳಲ್ಲಿರುವ ನಾಲ್ಕು ಮಸೀದಿಗಳಿಗೆ ಟಾರ್ಪಾಲ್ ಹಾಕಲಾಗಿದೆ.

ಮಸೀದಿಗಳನ್ನು ಬಣ್ಣದಿಂದ ರಕ್ಷಿಸಲು ಮಸೀದಿ ವ್ಯವಸ್ಥೆ ಸಮಿತಿ ಈ ಕ್ರಮ ಕೈಗೊಂಡಿದೆ. ಹೋಳಿ ಹಬ್ಬದಂದು ನಗರದ ವಾತಾವರಣ ಹದಗೆಡದಂತೆ ಹಾಗೂ ಶಾಂತಿ ಕಾಪಾಡಲು ಮಸೀದಿಗಳಿಗೆ ಕಪ್ಪು ಟಾರ್ಪಲ್ ಹೊದಿಸಲಾಗಿದೆ. ಈ ಮಸೀದಿಯು ಸೂಕ್ಷ್ಮ ಪ್ರದೇಶದಲ್ಲಿದೆ. ಹೋಳಿ ಹಬ್ಬಕ್ಕೆ ಪೊಲೀಸರು ಹಾಗೂ ಆಡಳಿತ ಮಂಡಳಿ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಹಲ್ವಾಯಿಯನ್ ಮಸೀದಿ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದು ಸೂಕ್ಷ್ಮ ಪ್ರದೇಶವಾಗಿದೆ. ಪ್ರತಿಬಾರಿಯೂ ಇಲ್ಲಿ ಹೋಳಿ ಆಡಲಾಗುತ್ತದೆ. ಈ ಕಾರಣಕ್ಕಾಗಿ ಮಸೀದಿಗೆ ಟಾರ್ಪಲ್ ಹೊದಿಸಲು ನಿರ್ಧರಿಸಲಾಯಿತು. ಹೋಳಿ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಯಾವುದೇ ಅಶಿಸ್ತಿನ ಶಕ್ತಿಗಳು ಶಾಂತಿ ಕದಡಲು ಪ್ರಯತ್ನಿಸದಂತೆ ನೋಡಿಕೊಳ್ಳಲು ಆಡಳಿತವು ಪ್ರದೇಶದಲ್ಲಿ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ನಾವು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಈ ಪ್ರದೇಶದಲ್ಲಿ ಗಸ್ತು ತಿರುಗಲಿದ್ದಾರೆ ಮತ್ತು ಡ್ರೋನ್‌ಗಳು ಈ ಪ್ರದೇಶದಲ್ಲಿನ ಮನೆಗಳ ಮೇಲ್ಛಾವಣಿಯ ಮೇಲೆ ಕಣ್ಣಿಟ್ಟಿವೆ. ಹೋಳಿ ಆಚರಣೆ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಸಾಕಷ್ಟು ಪಡೆಗಳನ್ನು ನಿಯೋಜಿಸಲಾಗುವುದು. ಕಿಡಿಗೇಡಿಗಳು ಮಸೀದಿಯ ಮೇಲೆ ಬಣ್ಣ ಎರಚದಂತೆ ಮಸೀದಿಯನ್ನು ಮುಚ್ಚಲಾಗಿದೆ.

SCROLL FOR NEXT