ಜೆಎನ್ ಯು ವಿವಿ (ಸಾಂದರ್ಭಿಕ ಚಿತ್ರ) online desk
ದೇಶ

JNU ವಿವಿ ಚುನಾವಣೆ: ಎಬಿವಿಪಿ ವಿರುದ್ಧ ಯುನೈಟೆಡ್ ಲೆಫ್ಟ್ ವಿದ್ಯಾರ್ಥಿಗಳ ಒಕ್ಕೂಟಕ್ಕೆ ಜಯ; AISA ಸದಸ್ಯ ಧನಂಜಯ್ ಅಧ್ಯಕ್ಷ

ಜವಾಹರ್ ಲಾಲ್ ನೆಹರು ವಿವಿ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯಲ್ಲಿ ಯುನೈಟೆಡ್ ಲೆಫ್ಟ್ ಎಬಿವಿಪಿ ವಿರುದ್ಧ ಜಯಗಳಿಸಿದೆ.

ನವದೆಹಲಿ: ಜವಾಹರ್ ಲಾಲ್ ನೆಹರು ವಿವಿ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯಲ್ಲಿ ಯುನೈಟೆಡ್ ಲೆಫ್ಟ್ ಎಬಿವಿಪಿ ವಿರುದ್ಧ ಜಯಗಳಿಸಿದೆ. 4 ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್ಎ) ಸಂಘಟನೆಯ ಧನಂಜಯ ಚುನಾವಣೆಯಲ್ಲಿ ಗೆದ್ದಿದ್ದು, ಎಬಿವಿಪಿಯಿಂದ ಸ್ಪರ್ಧಿಸಿದ್ದ ಎದುರಾಳಿ ಉಮೇಶ್ ಸಿ ಅಜ್ಮೀರಾ ವಿರುದ್ಧ 2,598 ಮತಗಳನ್ನು ಪಡೆದಿದ್ದಾರೆ ಪರಾಜಿತ ಅಭ್ಯರ್ಥಿ 1,676 ಮತಗಳನ್ನು ಪಡೆದಿದ್ದಾರೆ.

ಎಸ್ ಎಫ್ಐ ನ ಅವಿಜಿತ್ ಘೋಷ್ ಎಬಿವಿಪಿಯ ದೀಪಿಕಾ ಶರ್ಮಾ ವಿರುದ್ಧ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಬಿಎಪಿಎಸ್ಎ ಅಭ್ಯರ್ಥಿ ಪ್ರಿಯದರ್ಶಿನಿ ಆರ್ಯ ಎಡಪಕ್ಷಗಳ ಬೆಂಬಲದೊಂದಿಗೆ ಗೆದ್ದಿದ್ದು, ಎಬಿವಿಪಿಯ ಅರ್ಜುನ್ ಆನಂದ್ ಅವರನ್ನು ಮಣಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ABVP ಯಿಂದ ತನ್ನ ಅಭ್ಯರ್ಥಿ ಸ್ವಾತಿ ಸಿಂಗ್ ಅವರ ಉಮೇದುವಾರಿಕೆಯನ್ನು ಪ್ರಶ್ನಿಸಿದಾಗ ಚುನಾವಣಾ ಸಮಿತಿಯು ಆರ್ಯ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಿದ ನಂತರ ಯುನೈಟೆಡ್ ಲೆಫ್ಟ್ ಆರ್ಯ ಅವರಿಗೆ ಬೆಂಬಲವನ್ನು ನೀಡಿತು. ಎಡಪಕ್ಷದ ಮೊಹಮ್ಮದ್ ಸಾಜಿದ್ ಅವರು ಎಬಿವಿಪಿಯ ಗೋವಿಂದ್ ಅವರನ್ನು ಸೋಲಿಸುವ ಮೂಲಕ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಗೆದ್ದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!