ಐಪಿಎಸ್ ಅಧಿಕಾರಿ ಸಂಜೀವ್ ಭಟ್ (ಸಂಗ್ರಹ ಚಿತ್ರ) 
ದೇಶ

1996 ರ ಡ್ರಗ್ಸ್ ಜಪ್ತಿ ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ದೋಷಿ

1996 ರಲ್ಲಿ ಡ್ರಗ್ಸ್ ಜಪ್ತಿ ಮಾಡಿದ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ದೋಷಿ ಎಂದು ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಪಾಲಂಪುರ ಟೌನ್ ನ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಅಹ್ಮದಾಬಾದ್: 1996 ರಲ್ಲಿ ಡ್ರಗ್ಸ್ ಜಪ್ತಿ ಮಾಡಿದ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ದೋಷಿ ಎಂದು ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಪಾಲಂಪುರ ಟೌನ್ ನ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಶಿಕ್ಷೆಯ ಪ್ರಮಾಣವನ್ನು ಗುರುವಾರ ಮಧ್ಯಾಹ್ನ ಪ್ರಕಟಿಸುವ ಸಾಧ್ಯತೆ ಇದೆ. 1996 ರಲ್ಲಿ ವಕೀಲರು ತಂಗಿದ್ದ ಪಾಲನ್‌ಪುರದ ಹೋಟೆಲ್ ಕೊಠಡಿಯಿಂದ ಪೊಲೀಸರು ಡ್ರಗ್ಸ್ ವಶಪಡಿಸಿಕೊಂಡಿದ್ದರು ಎಂದು ಹೇಳುವ ಮೂಲಕ ರಾಜಸ್ಥಾನ ಮೂಲದ ವಕೀಲರನ್ನು ತಪ್ಪಾಗಿ ಸಿಲುಕಿಸಿದ ಆರೋಪದ ಮೇಲೆ ಸೆಷನ್ಸ್ ನ್ಯಾಯಾಲಯ ಭಟ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ.

ಸಂಜೀವ್ ಭಟ್ ಅವರನ್ನು 2015 ರಲ್ಲಿ ಐಪಿಎಸ್ ನಿಂದ ವಜಾಗೊಳಿಸಲಾಗಿತ್ತು. ವಜಾಗೊಳ್ಳುವುದಕ್ಕೂ ಮುನ್ನ ಸಂಜೀವ್ ಭಟ್ ಬನಸ್ಕಾಂತ ಜಿಲ್ಲೆಯ ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ನೇತೃತ್ವದ ಜಿಲ್ಲಾ ಪೊಲೀಸರು ರಾಜಸ್ಥಾನದ ವಕೀಲ ಸುಮೇರ್‌ಸಿಂಗ್ ರಾಜಪುರೋಹಿತ್ ಅವರನ್ನು 1996 ರಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ ಕಾಯ್ದೆ (ಎನ್‌ಡಿಪಿಎಸ್ ಆಕ್ಟ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದರು. ವಕೀಲರು ತಂಗಿದ್ದ ಪಾಲನ್‌ಪುರದ ಹೋಟೆಲ್ ಕೊಠಡಿಯಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.

ಆದಾಗ್ಯೂ, ರಾಜಸ್ಥಾನದ ಪಾಲಿಯಲ್ಲಿರುವ ವಿವಾದಿತ ಆಸ್ತಿಯನ್ನು ವರ್ಗಾಯಿಸಲು ಒತ್ತಾಯಿಸಲು ಬನಸ್ಕಾಂತ ಪೊಲೀಸರು ರಾಜಪುರೋಹಿತ್ ಅವರನ್ನು ತಪ್ಪಾಗಿ ಸಿಲುಕಿಸಿದ್ದಾರೆ ಎಂದು ರಾಜಸ್ಥಾನ ಪೊಲೀಸರು ವಾದಿಸಿದ್ದರು.

ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಐಬಿ ವ್ಯಾಸ್ ಅವರು 1999 ರಲ್ಲಿ ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಗೆ ಬಿಗ್ ಶಾಕ್: 'ಮರುಎಣಿಕೆ' ಫಲಿತಾಂಶಕ್ಕೆ ಸುಪ್ರೀಂ ತಡೆ; ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಕೆ, ಜೀವರಾಜ್ ಕಥೆ ಏನು?

Indian Stock Market: ಮುಗಿಯದ ಮಧ್ಯ ಪ್ರಾಚ್ಯ ಯುದ್ಧ, Sensex 1300 ಅಂಕ ಕುಸಿತ, 6 ಲಕ್ಷ ಕೋಟಿ ರೂ ನಷ್ಟ

VIDEO: ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯವೇನಿದೆ? ಮನೆಯೊಳಗೆ ಇರಬೇಕು: ಬಿಹಾರ ಶಿಕ್ಷಣ ಸಚಿವ ಮಿಥಿಲೇಶ್ ವಿವಾದಾತ್ಮಕ ಹೇಳಿಕೆ

TCS ಕಾರ್ಪೋರೆಟ್ ಜಿಹಾದ್ ಪ್ರಕರಣ: ಆರೋಪಿ Nida Khanಗೆ ನ್ಯಾಯಾಂಗ ಬಂಧನ!

VIDEO: ಖಜಾನೆ ಖಾಲಿ ಹೇಳಿಕೆ ಬೆನ್ನಲ್ಲೇ ನಿಕಟಪೂರ್ವ ಸಿಎಂ ಸ್ಟಾಲಿನ್ ಭೇಟಿ ಮಾಡಿದ ನೂತನ CM ವಿಜಯ್

SCROLL FOR NEXT