ಸುನಿತಾ ಕೇಜ್ರಿವಾಲ್
ಸುನಿತಾ ಕೇಜ್ರಿವಾಲ್ 
ದೇಶ

ನಾಳೆ ನನ್ನ ಪತಿ ಕೋರ್ಟ್ ನಲ್ಲಿ ಸತ್ಯ ಬಹಿರಂಗಪಡಿಸಲಿದ್ದಾರೆ: ಸುನಿತಾ ಕೇಜ್ರಿವಾಲ್

Lingaraj Badiger

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸಿದ ಹಲವು ದಾಳಿಗಳಲ್ಲಿ ಯಾವುದೇ ಹಣ ಪತ್ತೆಯಾಗಿಲ್ಲ ಎಂದು ಒತ್ತಿ ಹೇಳಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಅವರು, ನನ್ನ ಪತಿ ಮಾರ್ಚ್ 28 ರಂದು ನ್ಯಾಯಾಲಯದಲ್ಲಿ "ದೊಡ್ಡ ಸತ್ಯ ಬಹಿರಂಗಪಡಿಸುತ್ತಾರೆ" ಎಂದು ಬುಧವಾರ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕರನ್ನು ಮಾರ್ಚ್ 21 ರಂದು ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಬಂಧಿಸಿತು ಮತ್ತು ನಂತರ ಮಾರ್ಚ್ 28 ರವರೆಗೆ ಅವರನ್ನು ಇಡಿ ಕಸ್ಟಡಿಗೆ ನೀಡಲಾಯಿತು.

ಅರವಿಂದ್ ಕೇಜ್ರಿವಾಲ್ ಅವರು ನಾಳೆ ಕೋರ್ಟ್ ಸತ್ಯವನ್ನು ಬಹಿರಂಗಪಡಿಸುತ್ತಾರೆ ಮತ್ತು ಅದಕ್ಕೆ ಸಾಕ್ಷ್ಯವನ್ನು ಸಹ ನೀಡುತ್ತಾರೆ ಎಂದು ಸುನಿತಾ ಕೇಜ್ರಿವಾಲ್ ಅವರು ಹೇಳಿದ್ದಾರೆ.

"ಎರಡು ವರ್ಷಗಳ ತನಿಖೆಯ ಹೊರತಾಗಿಯೂ, ಇಡಿ ಒಂದೇ ಒಂದು ಪೈಸೆ ಸಾಕ್ಷ್ಯವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಅವರು ಮುಖ್ಯಮಂತ್ರಿ ನಿವಾಸದ ಮೇಲೆ ದಾಳಿ ಮಾಡಿದರು. ಆದರೆ ಅವರಿಗೆ ಸಿಕ್ಕಿದ್ದು ಕೇವಲ 73,000 ರೂ." ಎಂದು ಸುನಿತಾ ತಿಳಿಸಿದ್ದಾರೆ.

"ನನ್ನ ಪತಿ ಕಸ್ಟಡಿಯಲ್ಲಿದ್ದಾಗ ಜಲ ಸಚಿವೆ ಅತಿಶಿಗೆ ನಿರ್ದೇಶನಗಳನ್ನು ನೀಡಿದರು. ಕೇಂದ್ರ ಸರ್ಕಾರ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಅವರು ದೆಹಲಿಯನ್ನು ಹಾಳುಮಾಡಲು ಬಯಸುತ್ತಾರೆಯೇ?" ಎಂದು ಪ್ರಶ್ನಿಸಿದ ಸುನಿತಾ ಕೇಜ್ರಿವಾಲ್, ಈ ವಿಚಾರದಲ್ಲಿ ತಮ್ಮ ಪತಿ ತುಂಬಾ ದುಃಖಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಒಬ್ಬ ಧೈರ್ಯಶಾಲಿ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರ ಸಂಕಲ್ಪ ಬಲವಾಗಿದೆ ಎಂದು ದೆಹಲಿ ಸಿಎಂ ಪತ್ನಿ ತಿಳಿಸಿದ್ದಾರೆ.

SCROLL FOR NEXT