ಸಿಎಂ ಅರವಿಂದ್ ಕೇಜ್ರಿವಾಲ್ 
ದೇಶ

AAP ಹತ್ತಿಕ್ಕುವುದೇ ED ಉದ್ದೇಶ: ಕೋರ್ಟ್‌ ಮುಂದೆ 10 ಅಂಶಗಳ ವಾದ ಮಂಡಿಸಿದ ಕೇಜ್ರಿವಾಲ್!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ದೆಹಲಿಯ ಅಬಕಾರಿ ನೀತಿ ಪ್ರಕರಣದ ವಿಚಾರಣೆ ನಡೆಸಿದ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ವೈಯಕ್ತಿಕವಾಗಿ ತಮ್ಮ ವಾದವನ್ನು ಮಂಡಿಸಿದರು.

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ದೆಹಲಿಯ ಅಬಕಾರಿ ನೀತಿ ಪ್ರಕರಣದ ವಿಚಾರಣೆ ನಡೆಸಿದ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ವೈಯಕ್ತಿಕವಾಗಿ ತಮ್ಮ ವಾದವನ್ನು ಮಂಡಿಸಿದರು. ಈ ಪ್ರಕರಣದಲ್ಲಿ ಅವರು ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸುವರೆಂದು ನಿರೀಕ್ಷಿಸಲಾಗಿತ್ತು. ನಿನ್ನೆ ಸಂಜೆ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಗುರುವಾರ ನ್ಯಾಯಾಲಯದಲ್ಲಿ ಅಬಕಾರಿ ನೀತಿ ಹಗರಣದ ಬಗ್ಗೆ ಕೇಜ್ರಿವಾಲ್ "ದೊಡ್ಡ ಬಹಿರಂಗ" ಮಾಡುವುದಾಗಿ ಹೇಳಿದ್ದರು.

ನ್ಯಾಯಾಲಯದ ಮುಂದೆ ಕೇಜ್ರಿವಾಲ್ ಮಂಡಿಸಿದ 10 ಅಂಶಗಳು ಇಲ್ಲಿವೆ:

  1. ದೇಶದ ಮುಂದೆ ಎಎಪಿ ಭ್ರಷ್ಟ ಎಂಬ ಅಪ ಪ್ರಚಾರವನ್ನು ಸೃಷ್ಟಿಸಲಾಗಿದೆ ಎಂದು ವಿಚಾರಣೆ ಸಂದರ್ಭದಲ್ಲಿ ಕೇಜ್ರಿವಾಲ್ ಆರೋಪಿಸಿದರು.

  2. " ಅಬಕಾರಿ ನೀತಿ ಪ್ರಕರಣದಲ್ಲಿ ನಾಲ್ವರು ಸಾಕ್ಷಿಗಳಿಂದ ನನ್ನ ಹೆಸರಿದೆ. ಹಾಲಿ ಸಿಎಂ ಒಬ್ಬರನ್ನು ಬಂಧಿಸಲು ನಾಲ್ಕು ಹೇಳಿಕೆಗಳು ಸಾಕೇ?" ಎಂದು ಎಎಪಿ ನಾಯಕ ನ್ಯಾಯಾಲಯದ ಮುಂದೆ ಪ್ರಶ್ನಿಸಿದರು.

  3. "ಇದು ₹ 100 ಕೋಟಿ ಹಗರಣವಾಗಿದೆ ಎಂದು ಆರೋಪಿಸಲಾಗುತ್ತಿದೆ. ಹಣದ ಜಾಡು ಇನ್ನೂ ಪತ್ತೆಯಾಗಿಲ್ಲ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದರು.

  4. ತನ್ನ ಬಂಧನದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಹೇಳಿರುವ ಕೇಜ್ರಿವಾಲ್, ಪ್ರಕರಣದಲ್ಲಿ ವ್ಯಕ್ತಿಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ ಮತ್ತು ಅವರ ಹೇಳಿಕೆಗಳನ್ನು ಬದಲಾಯಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ವಾದಿಸಿದರು.

  5. ಲೈವ್‌ಲಾ ಪ್ರಕಾರ, ಪ್ರಕರಣ ಸಂಬಂಧಿತ ಕಲಾಪಗಳು ಎರಡು ವರ್ಷಗಳ ಕಾಲ ನಡೆದಿವೆ. ಸಿಬಿಐ ಆಗಸ್ಟ್ 2022 ರಲ್ಲಿ ಪ್ರಕರಣವನ್ನು ಪ್ರಾರಂಭಿಸಿತು, ನಂತರ ECIR ಸಲ್ಲಿಸಿತ್ತು.

  6. ಕಾನೂನು ವೆಬ್‌ಸೈಟ್ ಲೈವ್‌ಲಾ ಪ್ರಕಾರ, ಅಬಕಾರಿ ನೀತಿ ಹಗರಣದಿಂದ ಗಳಿಸಿದ ಹಣ ಎಲ್ಲಿದೆ? ಇಡಿ ಹೇಳಿರುವ ₹ 100 ಕೋಟಿ ನಗದು ಇಲ್ಲ. ಇಡಿ ತನಿಖೆ ನಂತರವೇ ನಿಜವಾದ ಅಬಕಾರಿ ಹಗರಣ ಹೊರಬರುತ್ತದೆ ಎಂದರು.

  7. "ನೀವು ಇಷ್ಟ ಪಡುವವರೆಗೂ ನನ್ನನ್ನು ರಿಮಾಂಡ್ ನಲ್ಲಿ ಇಟ್ಟುಕೊಳ್ಳಬಹುದು, ತನಿಖೆಗೆ ಸಿದ್ಧ ಕೋರ್ಟ್ ಗೆ ಕೇಜ್ರಿವಾಲ್ ತಿಳಿಸಿದರು.

  8. ಶರತ್ ಚಂದ್ರರೆಡ್ಡಿ ಬಿಜೆಪಿಗೆ 55 ಕೋಟಿ ದೇಣಿಗೆ ನೀಡಿದ್ದಾರೆ. ಅದಕ್ಕೆ ನನ್ನ ಬಳಿ ಇದಕ್ಕೆ ಪುರಾವೆಗಳಿವೆ ಎಂದು ಮುಖ್ಯಮಂತ್ರಿ ಹೇಳಿದರು. ರೆಡ್ಡಿ ಅರಬಿಂದೋ ಫಾರ್ಮಾ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ ಮತ್ತು ಪ್ರಕರಣದಲ್ಲಿ ಸಹ-ಆರೋಪಿಯಾಗಿ ಮಾರ್ಪಟ್ಟ ಅನುಮೋದಕರಲ್ಲಿ ಒಬ್ಬರು.

  9. ಇಲ್ಲಿಯವರೆಗೆ ಯಾವುದೇ ನ್ಯಾಯಾಲಯವು ತನ್ನನ್ನು ಅಪರಾಧಿ ಎಂದು ಸಾಬೀತುಪಡಿಸಿಲ್ಲ. "ನನ್ನನ್ನು ಬಂಧಿಸಲಾಗಿದೆ, ಆದರೆ ಯಾವುದೇ ನ್ಯಾಯಾಲಯ ನನ್ನನ್ನು ಇನ್ನೂ ಅಪರಾಧಿ ಎಂದು ಸಾಬೀತುಪಡಿಸಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ 31,000 ಪುಟಗಳನ್ನು ಮತ್ತು ಇಡಿ 25,000 ಪುಟಗಳ ಜಾರ್ಜ್ ಶೀಟ್ ಸಲ್ಲಿಸಿದೆ ಎಂದರು.

  10. ಆಮ್ ಆದ್ಮಿ ಪಕ್ಷವನ್ನು ಹತ್ತಿಕ್ಕುವುದು ED ಯ ಉದ್ದೇಶವಾಗಿದೆ" ಎಂದು ಕೇಜ್ರಿವಾಲ್ ಪ್ರತಿಪಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT