ಕೆ. ಪದ್ಮರಾಜನ್
ದೇಶ

ಮೆಟ್ಟೂರು: 238 ಬಾರಿ ಸೋತರೂ ಮತ್ತೆ ಮತ್ತೆ ಚುನಾವಣೆಗೆ ನಿಲ್ಲುವ ಸೋಲಿನ ಸರದಾರ!

ಇಲ್ಲೊಬ್ಬ ವ್ಯಕ್ತಿ ಸಂಸದನಾಗಬೇಕು ಉದ್ದೇಶದಿಂದ ಇಲ್ಲಿಯವರೆಗೂ ಸುಮಾರು 238 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತ್ತೆ ಈ ಬಾರಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಮೆಟ್ಟೂರು: ಚುನಾವಣೆಗೆ ನಿಲ್ಲಬೇಕು, ಜನಪ್ರತಿನಿಧಿಯಾಗಬೇಕು ಎಂಬ ಉದ್ದೇಶದಲ್ಲಿ ಹಲವರು ಹಲವು ರೀತಿಯಪ್ರಯತ್ನ ಮಾಡುತ್ತಾರೆ.

ಇಲ್ಲೊಬ್ಬ ವ್ಯಕ್ತಿ ಸಂಸದನಾಗಬೇಕು ಉದ್ದೇಶದಿಂದ ಇಲ್ಲಿಯವರೆಗೂ ಸುಮಾರು 238 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತ್ತೆ ಈ ಬಾರಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಕೆ. ಪದ್ಮರಾಜನ್, ತಮಿಳುನಾಡಿನ ಮೆಟ್ಟೂರು ನಗರದ ನಿವಾಸಿ. ಪದ್ಮರಾಜನ್ ಅವರಿಗೆ ಈಗ 65 ವರ್ಷ ವಯಸ್ಸು1988ರಿಂದಲೇ ಇವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಸಣ್ಣದೊಂದು ಪಂಚರ್ ಅಂಗಡಿ ಇಟ್ಟುಕೊಂಡಿರುವ ಕೆ. ಪದ್ಮರಾಜನ್, ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವ ಮೂಲಕವೇ ಹೊಸ ದಾಖಲೆ ಬರೆದಿದ್ದಾರೆ.

ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸೋದು, ಸೋಲೋದು, ಠೇವಣಿ ಸಹಿತ ಕಳೆದುಕೊಳ್ಳೋದು. ಹೀಗೆ ಸುಮಾರು 35 ವರ್ಷಗಳಿಂದಲೂ ಈ ಸೋಲಿನ ಸರಮಾಲೆ ಮುಂದುವರೆದಿದೆ. ಮೊದ ಮೊದಲು ಕೆ. ಪದ್ಮರಾಜನ್ ಅವರ ಈ ಪರಿಪಾಠ ಕಂಡು ಜನರು ಇದೆಂಥಾ ಹುಚ್ಚಾಟ ಎಂದು ಮೂಗು ಮುರಿದರು, ಆಡಿಕೊಂಡರು, ಲೇವಡಿ ಮಾಡಿ ನಕ್ಕರು.. ಆದರೆ, ಈಗೀಗ ಜನರಿಗೂ ಇದು ಮಾಮೂಲಾಗಿದೆ.

ಜೊತೆಯಲ್ಲೇ ಸೋಲಿನ ಸರಮಾಲೆಯಿಂದಲೇ ದಾಖಲೆ ಮೆರೆದ ಪದ್ಮರಾಜನ್ ಜನಪ್ರಿಯತೆ ಕೂಡಾ ಸಾಧಿಸಿದ್ದಾರೆ. ಎಲ್ಲರೂ ಗೆಲುವು ಸಾಧಿಸಬೇಕು ಅನ್ನೋ ಆಶಯದಿಂದಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ. ಆದರೆ ನಾನು ಆ ರೀತಿ ಅಲ್ಲ ಎಂದು ತಮ್ಮ ಉದ್ದನೆಯ ಮೀಸೆ ತಿರುವುತ್ತಾ ಹೆಗಲ ಮೇಲೆ ಟವಲ್ ಏರಿಸಿಕೊಳ್ತಾರೆ ಪದ್ಮರಾಜನ್. ಫಲಿತಾಂಶದ ವೇಳೆ ಸೋಲು ಎಂದು ಘೋಷಣೆಯಾದಾಗ ಸಂತೋಷ ಆಗುತ್ತಂತೆ ಪದ್ಮರಾಜನ್ ಅವರಿಗೆ.

ಈವರೆಗೆ ಕಳೆದ 35 ವರ್ಷಗಳಲ್ಲಿ ಪದ್ಮರಾಜನ್ ಲಕ್ಷಾಂತರ ರೂಪಾಯಿ ಹಣವನ್ನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಕಳೆದುಕೊಂಡಿದ್ದಾರೆ. ಈ ಸೋಲಿನ ಸರಮಾಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ಕೂಡಾ ಆಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪದ್ಮರಾಜನ್ ಅವರು ತಮಿಳುನಾಡಿನ ಧರ್ಮಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಎಲೆಕ್ಷನ್ ಕಿಂಗ್ ಎಂದೇ ಜನಪ್ರಿಯತೆ ಸಾಧಿಸಿರುವ ಪದ್ಮರಾಜನ್ ಅವರು, ರಾಷ್ಟ್ರಪತಿ ಚುನಾವಣೆಯಿಂದ ಹಿಡಿದು ಪಂಚಾಯ್ತಿ ಚುನಾವಣೆವರೆಗೂ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ 'ಮಹಾಘಟಬಂಧನ್' ಗೆ ತಿಲಾಂಜಲಿ; ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್ 'ಮಹಾ' ನಿರ್ಧಾರ!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ಬಿಹಾರ ಚುನಾವಣೆ: 3 ಲಕ್ಷ ಮತಗಳ ಏರಿಕೆ ಬಗ್ಗೆ ಕಾಂಗ್ರೆಸ್ ನಿಂದ ಮತ್ತೆ ಕಿರಿಕ್; ಚುನಾವಣಾ ಆಯೋಗ ಹೇಳಿದ್ದೇನು?

SCROLL FOR NEXT