ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಸಚಿವೆ ಅತಿಶಿ
ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಸಚಿವೆ ಅತಿಶಿ 
ದೇಶ

ಕೇಜ್ರಿವಾಲ್ ಫೋನ್‌ನಿಂದ AAP ಲೋಕಸಭಾ ಚುನಾವಣೆ ಕಾರ್ಯತಂತ್ರದ ವಿವರ ಪಡೆಯಲು ED ಯತ್ನ: ಅತಿಶಿ ಆರೋಪ

Ramyashree GN

ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋನಿನಿಂದ ಆಮ್ ಆದ್ಮಿ ಪಕ್ಷದ (ಎಎಪಿ) ಲೋಕಸಭಾ ಚುನಾವಣಾ ಕಾರ್ಯತಂತ್ರದ ವಿವರಗಳನ್ನು ಪಡೆಯಲು ಬಯಸುತ್ತಿದೆ ಎಂದು ದೆಹಲಿ ಸಚಿವೆ ಅತಿಶಿ ಶುಕ್ರವಾರ ಆರೋಪಿಸಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ ಬಂಧಿಸಿದೆ. ನ್ಯಾಯಾಲಯ ಏಪ್ರಿಲ್ 1 ರವರೆಗೆ ಅವರನ್ನು ಇ.ಡಿ ಕಸ್ಟಡಿಗೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಾರಿ ನಿರ್ದೇಶನಾಲಯವು (ಇ.ಡಿ) ಕೇಜ್ರಿವಾಲ್ ಅವರ ಮೊಬೈಲ್ ಫೋನ್ ಅನ್ನು ಪರಿಶೀಲಿಸಲು ಮುಂದಾಗಿದೆ. ಆದರೆ, 2021-22ರಲ್ಲಿ ದೆಹಲಿಯಲ್ಲಿ ಅಬಕಾರಿ ನೀತಿಯನ್ನು ರೂಪಿಸಿ, ಜಾರಿಗೆ ತಂದಾಗ ಅವರ ಬಳಿ ಈ ಫೋನ್ ಇರಲಿಲ್ಲ. ಇದು ಕೆಲವೇ ತಿಂಗಳ ಹಿಂದಿನದ್ದು. ಈ ಮೂಲಕ ತನಿಖಾ ಸಂಸ್ಥೆಯು ಬಿಜೆಪಿಯ 'ರಾಜಕೀಯ ಅಸ್ತ್ರ'ವಾಗಿ ಕೆಲಸ ಮಾಡುತ್ತಿದೆ ಎಂಬುದು ಸಾಬೀತಾಗಿದೆ ಎಂದು ದೂರಿದರು.

'ವಾಸ್ತವದಲ್ಲಿ ಕೇಜ್ರಿವಾಲ್ ಅವರ ಫೋನಿನಲ್ಲಿ ಏನಿದೆ ಎಂಬುದನ್ನು ತಿಳಿಯಲು ಬಯಸುತ್ತಿರುವುದು ಬಿಜೆಪಿಯೇ ಹೊರತು ಇ.ಡಿ ಅಲ್ಲ' ಎಂದು ಅವರು ಹೇಳಿದರು.

ಅಬಕಾರಿ ನೀತಿಯನ್ನು 2021-22ರಲ್ಲಿ ಜಾರಿಗೆ ತರಲಾಗಿದ್ದು, ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಆಗ ಈ ಫೋನನ್ನು ಬಳಸುತ್ತಿರಲಿಲ್ಲ. ಈ ಫೋನ್ ಅನ್ನು ಕೆಲವೇ ತಿಂಗಳುಗಳಿಂದ ಬಳಸುತ್ತಿದ್ದಾರೆ ಎಂದರು.

ಅಬಕಾರಿ ನೀತಿ ಜಾರಿಗೆ ತಂದ ಅವಧಿಯಲ್ಲಿ ಕೇಜ್ರಿವಾಲ್ ಅವರು ಬಳಸಿದ್ದ ಫೋನ್ ಲಭ್ಯವಿಲ್ಲ ಎಂದು ಇ.ಡಿ ಹೇಳಿದೆ. ಆದರೆ, ಈಗ ಅವರ ಹೊಸ ಫೋನಿನ ಪಾಸ್‌ವರ್ಡ್ ಬೇಕು ಕೇಳುತ್ತಿದೆ ಎಂದು ಅತಿಶಿ ಹೇಳಿದರು.

'ಎಎಪಿಯ ಲೋಕಸಭಾ ಚುನಾವಣಾ ಕಾರ್ಯತಂತ್ರ, ಪ್ರಚಾರ ಯೋಜನೆಗಳು, ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗಿನ ಮಾತುಕತೆಗಳು ಮತ್ತು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದ ತಂತ್ರಗಾರಿಕೆಯ ಬಗ್ಗೆ ಮಾಹಿತಿ ಪಡೆಯಲು ಇ.ಡಿ ಬಯಸುತ್ತಿದೆ' ಎಂದು ಅವರು ಹೇಳಿದರು.

SCROLL FOR NEXT