ಕಂಗನಾ ರಣಾವತ್ ಚುನಾವಣಾ ಪ್ರಚಾರ
ಕಂಗನಾ ರಣಾವತ್ ಚುನಾವಣಾ ಪ್ರಚಾರ 
ದೇಶ

ಹಿಮಾಚಲ ಪ್ರದೇಶ: ಮಂಡಿಯಲ್ಲಿ ರೋಡ್ ಶೋ ಮೂಲಕ ಕಂಗನಾ ರಣಾವತ್ ಪ್ರಚಾರ ಆರಂಭ!

Nagaraja AB

ಮಂಡಿ: ಬಾಲಿವುಡ್ ನಟಿ ಕಂಗನಾ ರಣಾವತ್ ಶುಕ್ರವಾರ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ತಮ್ಮ ಲೋಕಸಭಾ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.

ಮಂಡಿಯ ಭಾಂಬ್ಲಾ ಪಟ್ಟಣದಲ್ಲಿ ಜನಿಸಿ, ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ ನಟಿಯನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನಸ್ತೋಮವೇ ನೆರೆದಿತ್ತು. ಜೈ ಶ್ರೀ ರಾಮ್ ಘೋಷಣೆಗಳ ನಡುವೆ ಬಿಜೆಪಿ ಕಾರ್ಯಕರ್ತರು ರಣಾವತ್ ಮೇಲೆ ಪುಷ್ಪವೃಷ್ಟಿ ಹಾಗೂ ಭರ್ಜರಿ ಡ್ಯಾನ್ಸ್ ಮೂಲಕ ಆತ್ಮೀಯ ಸ್ವಾಗತ ಕೋರಿದರು.

ತವರಿನಲ್ಲಿ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಕಂಗನಾ,‘ಅಭಿವೃದ್ಧಿಯೇ ಬಿಜೆಪಿಯ ಮುಖ್ಯ ಅಜೆಂಡಾವಾಗಿದ್ದು, ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಚುನಾವಣೆ ಗೆಲ್ಲಲು ನಾವು ಯಾವುದೇ ಪ್ರಯತ್ನ ಮಾಡಲ್ಲ, ‘ಮಂಡಿ ಜನರು ತಮ್ಮ ಮನದಾಳದಲ್ಲಿರುವುದನ್ನು ಹೇಳಲಿದ್ದಾರೆ’ ಎಂದರು.

ಮಾರ್ಚ್ 24 ರಂದು ಬಿಜೆಪಿ ಟಿಕೆಟ್ ಪಡೆದ ನಂತರ ರಣಾವತ್, ತಮ್ಮ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಬಿಜೆಪಿಯು ತನಗೆ ಟಿಕೆಟ್ ನೀಡಿದರೆ ಮಂಡಿಯಿಂದ ಸ್ಪರ್ಧಿಸಲು ತಾನು ಮುಕ್ತ ಎಂದು 2022 ರ ಅಕ್ಟೋಬರ್‌ನಲ್ಲಿ ಅವರು ಹೇಳಿದ್ದರು. 2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೇಶದಲ್ಲಿ ಬದಲಾವಣೆಯಾಗಿದೆ ಎಂದು ಆಗಾಗ್ಗೆ ರಣಾವತ್ ಹೇಳುತ್ತಾ ಬಂದಿದ್ದರು.

ಪ್ರಸ್ತುತ, ಮಂಡಿ ಲೋಕಸಭಾ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಮತ್ತು ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರ ತಾಯಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪ್ರತಿಭಾ ಸಿಂಗ್, ಪ್ರತಿನಿಧಿಸುತ್ತಿದ್ದಾರೆ. ಅವರು 2021 ರ ಲೋಕಸಭಾ ಉಪಚುನಾವಣೆಯಲ್ಲಿ ಗೆದಿದ್ದರು. ಈ ಬಾರಿ ಪರಿಸ್ಥಿತಿ "ಅನುಕೂಲಕರವಾಗಿಲ್ಲ" ಮತ್ತು ಕಾರ್ಯಕರ್ತರು ನಿರಾಶೆಗೊಂಡಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಬುಧವಾರ ಘೋಷಿಸಿದರು.

SCROLL FOR NEXT