ರಾಹುಲ್ ಗಾಂಧಿ-ಲಾಲೂ ಪ್ರಸಾದ್ ಯಾದವ್ ಸಾಂದರ್ಭಿಕ ಚಿತ್ರ
ರಾಹುಲ್ ಗಾಂಧಿ-ಲಾಲೂ ಪ್ರಸಾದ್ ಯಾದವ್ ಸಾಂದರ್ಭಿಕ ಚಿತ್ರ 
ದೇಶ

ಲೋಕಸಭಾ ಚುನಾವಣೆ: ಬಿಹಾರದಲ್ಲಿ 26 ಕ್ಷೇತ್ರಗಳಲ್ಲಿ RJD, 9 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ

Nagaraja AB

ಪಾಟ್ನಾ: ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳ ಪೈಕಿ 26ರಲ್ಲಿ ರಾಷ್ಟ್ರೀಯ ಜನತಾ ದಳ - ಆರ್ ಜೆಡಿ ಹಾಗೂ 9 ರಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲಿದೆ. ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾಘಟಬಂಧನ್ ಶುಕ್ರವಾರ ಸೀಟು ಹಂಚಿಕೆಯನ್ನು ಪ್ರಕಟಿಸಿದೆ. ಸಿಪಿಐ-ಎಂಎಲ್ 3 ಮತ್ತು ಸಿಪಿಐ ಮತ್ತು ಸಿಪಿಐ-ಎಂ ತಲಾ ಒಂದರಲ್ಲಿ ಸ್ಪರ್ಧಿಸಲಿವೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಂದ ಕಾಂಗ್ರೆಸ್ ಟಿಕೆಟ್ ಆಶ್ವಾಸನೆ ಸಿಕ್ಕಿದೆ ಎಂದು ಹೇಳಿಕೊಳ್ಳುತ್ತಿದ್ದ ರಾಜ್ಯಸಭಾ ಸಂಸದ ರಂಜೀತ್ ರಂಜನ್ ಅವರ ಪತಿ ಪಪ್ಪು ಯಾದವ್ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದ ಪೂರ್ಣೆಯಾ ಲೋಕಸಭಾ ಸ್ಥಾನವನ್ನು ಕಾಂಗ್ರೆಸ್ ಬಿಟ್ಟುಕೊಡಲು ಘೋಷಿಸಿದೆ. ಈ ಕ್ಷೇತ್ರದಲ್ಲಿ ಆರ್‌ಜೆಡಿ ಸ್ಪರ್ಧಿಸಲಿದೆ.

ಮೊದಲ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಗಿದ ಒಂದು ದಿನದ ನಂತರ ಮಹಾಘಟಬಂಧನ್‌ನ ಸೀಟು ಹಂಚಿಕೆ ಘೋಷಣೆಯಾಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಎಲ್ಲಾ ನಾಲ್ಕು ಸ್ಥಾನಗಳಲ್ಲಿ RJD ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಏಕಪಕ್ಷೀಯ ನಡೆ ಎಂದು ಮಿತ್ರಪಕ್ಷಗಳಿಂದ ಅಸಮಾಧಾನ ವ್ಯಕ್ತವಾಗಿದೆ.

SCROLL FOR NEXT