ದೇಶ

ಲೋಕಸಭಾ ಚುನಾವಣೆ: ಮನೇಕಾ ಗಾಂಧಿ ಒಟ್ಟು ಆಸ್ತಿ 97.17 ಕೋಟಿ ರೂ.

ಎಂಟು ಬಾರಿ ಸಂಸದರಾಗಿರುವ ಉತ್ತರ ಪ್ರದೇಶದ ಸುಲ್ತಾನ್ ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ಒಟ್ಟು ರೂ. 97. 17 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಸುಲ್ತಾನ್ ಪುರ: ಎಂಟು ಬಾರಿ ಸಂಸದರಾಗಿರುವ ಉತ್ತರ ಪ್ರದೇಶದ ಸುಲ್ತಾನ್ ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ಒಟ್ಟು ರೂ. 97. 17 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಈ ವಿಷಯ ಬಹಿರಂಗವಾಗಿದೆ. ಒಟ್ಟು ಆಸ್ತಿಯಲ್ಲಿ 45.97 ಕೋಟಿ ಚರ ಆಸ್ತಿ ಮತ್ತು 51.20 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಮನೇಕಾ ಗಾಂಧಿ ಬ್ಯಾಂಕಿನಲ್ಲಿ 17.83 ಕೋಟಿ ಇತ್ತು, ಅದು 2019 ರಲ್ಲಿ 18.47 ಕೋಟಿ ಆಗಿತ್ತು. ಡಿಬೆಂಚರ್‌ಗಳು, ಷೇರುಗಳು ಮತ್ತು ಬಾಂಡ್‌ಗಳಲ್ಲಿ ನ ಬೆಳವಣಿಗೆಯಿಂದಾಗಿ 24.30 ಕೋಟಿ ಮೌಲ್ಯದ ಆದಾಯ ಗಳಿಸಿರುವುದಾಗಿ ಅವರು ಹೇಳಿದ್ದಾರೆ. 2019 ರಲ್ಲಿ ಅದು 5.55 ಕೋಟಿ ರೂ. ಆಗಿತ್ತು. ಅದೇ ರೀತಿಯಲ್ಲಿ ಅಂಚೆ ಕಚೇರಿ ಉಳಿತಾಯದಲ್ಲಿ 81.01 ಲಕ್ಷ ಆದಾಯ ಗಳಿಸಿರುವುದಾಗಿ ತಿಳಿಸಿದ್ದಾರೆ.

2019ರಲ್ಲಿನ ಅಫಿಡವಿಟ್ ಪ್ರಕಾರ ಅವರ ಆದಾಯ 43.32 ಲಕ್ಷ ರೂ. ಆಗಿತ್ತು. 2.82 ಕೋಟಿ ಮೌಲ್ಯದ 3.415 ಕೆಜಿ ಚಿನ್ನ ಮತ್ತು 85 ಕೆಜಿ ಬೆಳ್ಳಿ ಮತ್ತು 40,000 ರೂ ಮೌಲ್ಯದ ರೈಫಲ್ ಹೊಂದಿರುವುದಾಗಿ ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್