ಕಸಬ್-ಕರ್ಕರೆ 
ದೇಶ

ಹೇಮಂತ್‌ ಕರ್ಕರೆ ಸತ್ತಿದ್ದು ಕಸಬ್‌ನ ಬಂದೂಕಿನಿಂದಲ್ಲ, RSS ಲಿಂಕ್ ಇರೋ ಪೊಲೀಸ್ ನಿಂದ: ಕಾಂಗ್ರೆಸ್ ನಾಯಕ

ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ವಿಜಯ್ ವಾಡೆತ್ತಿವಾರ್ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದೆ.

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ವಿಜಯ್ ವಾಡೆತ್ತಿವಾರ್ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದೆ. 2008ರ ಮುಂಬೈ ದಾಳಿಯ ಸಂದರ್ಭದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಐಪಿಎಸ್ ಹೇಮಂತ್ ಕರ್ಕರೆ ಅವರನ್ನು ಪಾಕಿಸ್ತಾನಿ ಭಯೋತ್ಪಾದಕ ಕಸಬ್ ಕೊಂದಿಲ್ಲ ಎಂದು ವಿಜಯ್ ವಾಡೆಟ್ಟಿವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಅವರನ್ನು ಕೊಂದ ಬುಲೆಟ್ ಕಸಬ್ ಅಥವಾ ಭಯೋತ್ಪಾದಕರಿಂದ ಹಾರಿಸಲಾಗಿಲ್ಲ, ಆದರೆ ಆರ್‌ಎಸ್‌ಎಸ್‌ ಜೊತೆ ಲಿಂಕ್ ಇರುವ ಪೊಲೀಸ್ ಅಧಿಕಾರಿ ಬಂದೂಕಿನಿಂದ ಹಾರಿದ ಗುಂಡಿಗೆ ಬಲಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಉಲ್ಲೇಖಿಸಿ ವಿಜಯ್ ವಾಡೆಟ್ಟಿವಾರ್ ಮುಂಬೈನ ಬಿಜೆಪಿ ಅಭ್ಯರ್ಥಿ ಉಜ್ವಲ್ ನಿಕಮ್ ವಿರುದ್ಧ ವಾಗ್ದಾಳಿ ನಡೆಸಿದರು. 'ಬಿರಿಯಾನಿ ವಿಷಯ ಪ್ರಸ್ತಾಪಿಸಿ ನಿಕಂ ಕಾಂಗ್ರೆಸ್‌ಗೆ ಮಾನಹಾನಿ ಮಾಡಿದ್ದಾರೆ. ಕಸಬ್ ಗೆ ಯಾರಾದರೂ ಬಿರಿಯಾನಿ ಕೊಡುತ್ತಾರಾ? ನಂತರ ಉಜ್ವಲ್ ನಿಕಮ್ ಅವರು ಎಂತಹ ವಕೀಲರು, ಅವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಸಹ ಬಾರದ ದೇಶದ್ರೋಹಿ, ಮುಂಬೈ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯನ್ನು ಕೊಂದ ಬುಲೆಟ್ ಕಸಬ್‌ನ ಬಂದೂಕಿನದ್ದಲ್ಲ, ಆ ಸಮಯದಲ್ಲಿ ಆರ್‌ಎಸ್‌ಎಸ್‌ಗೆ ನಿಷ್ಠರಾಗಿದ್ದ ಪೊಲೀಸ್ ಅಧಿಕಾರಿ. ಈ ಸತ್ಯವನ್ನು ನ್ಯಾಯಾಲಯಕ್ಕೆ ಮರೆಮಾಚಿದ ದೇಶದ್ರೋಹಿಗಳಿಗೆ ಬಿಜೆಪಿ ಟಿಕೆಟ್ ನೀಡುತ್ತಿದ್ದರೆ, ಬಿಜೆಪಿ ಈ ದೇಶದ್ರೋಹಿಗಳಿಗೆ ಏಕೆ ಬೆಂಬಲ ನೀಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಹೇಳಿಕೆ ವೈರಲ್ ಆಗುತ್ತಿದ್ದಂತೆ ವಡೆತ್ತಿವಾರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, 'ಅದು ನನ್ನ ಮಾತುಗಳಲ್ಲ, ಎಸ್.ಎಂ.ಮುಶ್ರೀಫ್ ಅವರ ಪುಸ್ತಕದಲ್ಲಿ ಬರೆದಿದ್ದನ್ನೇ ಹೇಳಿದ್ದೇನೆ. ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ಇತ್ತು. ಹೇಮಂತ್ ಕರ್ಕರೆ ಹೊಡೆದ ಗುಂಡು ಭಯೋತ್ಪಾದಕ ಸಿಡಿಸಿದ ಬುಲೆಟ್ ಅಲ್ಲ...'

ವಿಜಯ್ ವಡೆತ್ತಿವಾರ್ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮಾತನಾಡಿ, 'ಕಾಂಗ್ರೆಸ್ ತನ್ನ ವಿಶೇಷ ಮತಬ್ಯಾಂಕ್ ಅನ್ನು ಮೆಚ್ಚಿಸಲು ಮತ್ತು ಮತ ಪಡೆಯಲು ಯಾವುದೇ ಮಟ್ಟಕ್ಕೂ ಇಳಿಯಬಹುದು. 26/11 ಭಯೋತ್ಪಾದಕರಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಲೋಪಿ ವಿಜಯ್ ವಾಡೆಟ್ಟಿವಾರ್ ಇದನ್ನು ಸಾಬೀತುಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT