CBSE 12ನೇ ಹಾಗೂ 10ನೇ ತರಗತಿ ಫಲಿತಾಂಶವೂ ಹೊರಬಿದ್ದಿದೆ. CBSE ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗಳಾದ cbseresults.nic.in, results.cbse.nic.in ಮತ್ತು cbse.gov.in ನಲ್ಲಿ ಪರಿಶೀಲಿಸಬಹುದು.
ಈ ಬಾರಿಯೂ ಮತ್ತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. 2024ರ 12ನೇ ಬೋರ್ಡ್ ಫಲಿತಾಂಶದಲ್ಲಿ ಶೇ.91.52ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇಕಡಾ 85.12 ರಷ್ಟಿದೆ. ಕಳೆದ ವರ್ಷ 2023ರಲ್ಲಿ ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ.90.68 ಮತ್ತು ಬಾಲಕರ ಉತ್ತೀರ್ಣ ಪ್ರಮಾಣ ಶೇ.84.67 ರಷ್ಟಿತ್ತು. ಈ ವರ್ಷ ಎಲ್ಲಾ ವಿಷಯಗಳಲ್ಲಿ ಒಟ್ಟು ಶೇಕಡಾ 87.98ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
2023ರ 10ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 93.12 ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ಫಲಿತಾಂಶವು ಹುಡುಗರಿಗಿಂತ ಉತ್ತಮವಾಗಿತ್ತು. ಬಾಲಕಿಯರು ಶೇ.94.25 ಹಾಗೂ ಬಾಲಕರು ಶೇ.92.72 ಉತ್ತೀರ್ಣರಾಗಿದ್ದಾರೆ. ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು, CBSE ಈ ವರ್ಷ 10 ಮತ್ತು 12 ನೇ ತರಗತಿಗಳ ಮೆರಿಟ್ ಪಟ್ಟಿ ಮತ್ತು ಟಾಪರ್ಸ್ ಪಟ್ಟಿಯನ್ನು ಬಿಡುಗಡೆ ಮಾಡಲಿಲ್ಲ. ವಿದ್ಯಾರ್ಥಿಗಳ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಭಾಗದ ಮಾಹಿತಿಯನ್ನೂ ನೀಡಿಲ್ಲ. ಸಿಬಿಎಸ್‌ಇ 10ನೇ ಮತ್ತು 12ನೇ ಫಲಿತಾಂಶಗಳಲ್ಲಿ ತಿರುವನಂತಪುರ ಪ್ರದೇಶವು ಅಗ್ರಸ್ಥಾನದಲ್ಲಿದೆ.