ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದೆಹಲಿ: ನಾಲ್ಕು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ, ಪೊಲೀಸರಿಂದ ತೀವ್ರ ಶೋಧ

ಸಾಂದರ್ಭಿಕ ಚಿತ್ರ
Sumana Upadhyaya
Updated On : 14 May 2024, 1:45 pm

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭದ್ರತಾ ಏಜೆನ್ಸಿಗಳಿಗೆ ಸಂದೇಶ ರವಾನೆಯಾಗಿ ಸ್ಥಳಕ್ಕೆ ಆಗಮಿಸಿರುವ ತಂಡ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

ಈ ತಿಂಗಳಲ್ಲಿ ನಡೆದ ಮೂರನೇ ಬಾಂಬ್‌ ಬೆದರಿಕೆ ಸಂದೇಶ ಇದಾಗಿದೆ. ಇಂದು ದೆಹಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆ (DFS) ಮುಖ್ಯಸ್ಥ ಅತುಲ್ ಗರ್ಗ್ ಹೇಳಿದ್ದಾರೆ.

Also Read

ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹತ್ಯೆಗೆ ದಾವೂದ್ ಗ್ಯಾಂಗ್ ಗುತ್ತಿಗೆ ನೀಡಿದೆ ಎಂದು ಬೆದರಿಕೆ ಕರೆ; ವ್ಯಕ್ತಿ ಬಂಧನ

ಅಶೋಕ್ ವಿಹಾರ್‌ನ ದೀಪ್ ಚಂದ್ ಬಂಧು ಆಸ್ಪತ್ರೆಗೆ ಇಂದು ಬೆಳಗ್ಗೆ 10:45 ಕ್ಕೆ, ದಾಬ್ರಿಯ ದಾದಾ ದೇವ್ ಆಸ್ಪತ್ರೆಗೆ 10:55 ಕ್ಕೆ, ಫಾರ್ಷ್ ಬಜಾರ್‌ನ ಹೆಡ್ಗೆವಾರ್ ಆಸ್ಪತ್ರೆಗೆ 11:01 ಕ್ಕೆ ಮತ್ತು ಜಿಟಿಬಿ ಆಸ್ಪತ್ರೆಯಿಂದ ಅಗ್ನಿಶಾಮಕ ಇಲಾಖೆಗೆ 11.12ರ ಸುಮಾರಿಗೆ ಬೆದರಿಕೆ ಬಂದಿರುವುದಾಗಿ ಕರೆಗಳು ಬಂದವು. ನಂತರ ಎಲ್ಲಾ ನಾಲ್ಕು ಸ್ಥಳಗಳಿಗೆ ಅಗ್ನಿಶಾಮಕ ಟೆಂಡರ್‌ಗಳನ್ನು ರವಾನಿಸಲಾಯಿತು. ಸದ್ಯ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Advertisement

ಈ ಹಿಂದೆ ಎರಡು ಬಾರಿ ಬಾಂಬ್ ವಂಚನೆ ಬೆದರಿಕೆಗಳು ಕರೆಗಳು ಬಂದಿದ್ದವು. ಎರಡು ದಿನಗಳ ಹಿಂದಷ್ಟೇ ಭಾನುವಾರ 5ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ದೆಹಲಿ ವಿಮಾನ ನಿಲ್ದಾಣ ಸೇರಿದಂತೆ 21 ಕಡೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು.

ಅದಕ್ಕೂ ಮೊದಲು ಮೇ 1 ರಂದು, ದೆಹಲಿ-ಎನ್‌ಸಿಆರ್‌ನ 150 ಕ್ಕೂ ಹೆಚ್ಚು ಶಾಲೆಗಳಿಗೆ ಸ್ಫೋಟಕ ಇಡಲಾಗಿದೆ ಎಂದು ಬೆದರಿಕೆ ಇಮೇಲ್ ಬಂದಿದ್ದವು. ನಂತರ ಶೋಧ ನಡೆಸಿದಾಗ ಸುಳ್ಳು ಎನಿಸಿತು. ಕಳೆದ ಭಾನುವಾರ ಬೆದರಿಕೆಯನ್ನು ಯುರೋಪ್ ಮೂಲದ ಮೇಲಿಂಗ್ ಸೇವಾ ಕಂಪನಿ beeble.com ನಿಂದ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಕೆಲ ಸಮಯದ ಹಿಂದೆ ಬೆಂಗಳೂರಿನ 70 ಕ್ಕೂ ಹೆಚ್ಚು ಶಾಲೆಗಳಿಗೆ ಈ ರೀತಿ ಬೆದರಿಕೆಗಳು ಬಂದಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments