ಸಾಂದರ್ಭಿಕ ಚಿತ್ರ  
ದೇಶ

ದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಟಿಶ್ಯೂ ಪೇಪರ್ ನಲ್ಲಿ 'ಬಾಂಬ್' ಬರಹ, ಕೆಲಹೊತ್ತು ಭೀತಿ

ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ದೆಹಲಿ-ವಡೋದರಾ ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಯೊಬ್ಬರು ವಿಮಾನದ ವಾಶ್ ರೂಂನಲ್ಲಿ "ಬಾಂಬ್" ಎಂದು ಬರೆದಿರುವ ಟಿಶ್ಯೂ ಪೇಪರ್ ನ್ನು ಕಂಡು ಭಯಭೀತರಾಗಿ ವಿಮಾನದಲ್ಲಿದ್ದವರೆಲ್ಲಾ ತಿಳಿಸಿ ಕೆಲಕಾಲ ಗೊಂದಲ ಉಂಟಾಯಿತು.

ನವದೆಹಲಿ: ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ದೆಹಲಿ-ವಡೋದರಾ ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಯೊಬ್ಬರು ವಿಮಾನದ ವಾಶ್ ರೂಂನಲ್ಲಿ "ಬಾಂಬ್" ಎಂದು ಬರೆದಿರುವ ಟಿಶ್ಯೂ ಪೇಪರ್ ನ್ನು ಕಂಡು ಭಯಭೀತರಾಗಿ ವಿಮಾನದಲ್ಲಿದ್ದವರೆಲ್ಲಾ ತಿಳಿಸಿ ಕೆಲಕಾಲ ಗೊಂದಲ ಉಂಟಾಯಿತು.

ನಿನ್ನೆ ಸಂಜೆ ಬಾಂಬ್ ಎಂದು ಬರೆದ ಟಿಶ್ಯೂ ಪೇಪರ್ ಪತ್ತೆಯಾದ ನಂತರ ಇಡೀ ವಿಮಾನದಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಜೆ 7 ಗಂಟೆಗೆ ಟಿಶ್ಯೂ ಪೇಪರ್ ನ್ನು ಸಿಬ್ಬಂದಿ ಗುರುತಿಸಿದಾಗ ವಿಮಾನವು ಟೇಕ್-ಆಫ್‌ಗೆ ಸಿದ್ಧವಾಗಿದೆ ಎಂದು ಹೇಳಿದರು. ಕೂಡಲೇ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಮತ್ತು ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಯುವಂತೆ ಸೂಚಿಸಲಾಯಿತು. ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿತ್ತಾದರೂ ಏನೂ ಪತ್ತೆಯಾಗಿಲ್ಲ. ನಂತರ ಪ್ರಯಾಣಿಕರು ಮತ್ತೊಂದು ವಿಮಾನವನ್ನು ಏರಿ ಪ್ರಯಾಣ ಸಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

IPL 2026 Qualifier 1: ಐಪಿಎಲ್ ಇತಿಹಾಸದ ಅತ್ಯಪರೂಪದ ದಾಖಲೆ ಬರೆದ Virat Kohli; ಡಬಲ್ ಆಘಾತ ಕೊಟ್ಟ Holder

ಕರ್ನಾಟಕ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆ; ಜೂನ್ 18 ರಂದು ಮತದಾನ

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು ಮೆಟ್ರೋ ಸಂಚಾರ ವ್ಯತ್ಯಯ!

SCROLL FOR NEXT