ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಭಾಷಣ 
ದೇಶ

ನನ್ನ ಸರ್ವಸ್ವವನ್ನು ನಿಮಗಾಗಿ ನೀಡಿದ್ದೇನೆ, ನನ್ನ ಮಗನನ್ನು ನಿಮ್ಮವನೆಂದು ಸ್ವೀಕರಿಸಿ: ರಾಯ್ ಬರೇಲಿಯಲ್ಲಿ Sonia ಮಾತು!

ನನ್ನ ಮಗನನ್ನು ನಿಮ್ಮ ಕೈಗೆ ನೀಡುತ್ತಿದ್ದೇನೆ. ನಾನು ನೀಡಿದ ಪ್ರೀತಿಯನ್ನು ಅವನಿಗೆ ನೀವು ನೀಡಿ ಎಂದು ರಾಹುಲ್‌ ಗಾಂಧಿ ಪರ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪ್ರಚಾರ ನಡೆಸಿದ್ದಾರೆ.

ರಾಯ್ ಬರೇಲಿ: ನನ್ನ ಮಗನನ್ನು ನಿಮ್ಮ ಕೈಗೆ ನೀಡುತ್ತಿದ್ದೇನೆ. ನಾನು ನೀಡಿದ ಪ್ರೀತಿಯನ್ನು ಅವನಿಗೆ ನೀವು ನೀಡಿ ಎಂದು ರಾಹುಲ್‌ ಗಾಂಧಿ ಪರ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪ್ರಚಾರ ನಡೆಸಿದ್ದಾರೆ.

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡಿದರು. ನಮ್ಮ ಕುಟುಂಬದ ಬೇರುಗಳು ಈ ನೆಲದ ಮಣ್ಣಿನೊಂದಿಗೆ ಸಂಪರ್ಕ ಹೊಂದಿವೆ. ಈ ಸಂಬಂಧವು ಗಂಗಾ ಮಾತೆಯಷ್ಟು ಪರಿಶುದ್ಧವಾಗಿದೆ. ನಮ್ಮ ಸಂಬಂಧವು ಅವಧ್ ಮತ್ತು ರಾಯ್‌ಬರೇಲಿಯ ರೈತರ ಆಂದೋಲನದಿಂದ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. ರಾಯ್‌ಬರೇಲಿಯ ಜನರಿಗೆ ನನ್ನ ಮಗನನ್ನು ನೀಡುತ್ತಿದ್ದೇನೆ. ರಾಹುಲ್ ಗಾಂಧಿ ನಿಮಗೆ ನಿರಾಸೆಯನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.

20 ವರ್ಷಗಳ ಕಾಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಿದ ಸೋನಿಯಾ ರಾಯ್‌ಬರೇಲಿ ನನ್ನ ಜೀವನದ ಅತಿ ದೊಡ್ಡ ಅಸ್ತಿ ಎಂದು ಹೇಳಿದ್ದಾರೆ. ನನ್ನ ಸರ್ವಸ್ವವನ್ನು ನಿಮಗಾಗಿ ನೀಡಿದ್ದೇನೆ. ಆದ್ದರಿಂದ ಸಹೋದರ, ಸಹೋದರಿಯರೇ, ನಿಮಗೀಗ ನನ್ನ ಮಗನನ್ನು ನೀಡುತ್ತಿದ್ದೇನೆ. ನನ್ನ ಮಗನನ್ನು ತಮ್ಮವನೆಂದು ಸ್ವೀಕರಿಸಿ' ಎಂದು ಜನರಲ್ಲಿ ವಿನಂತಿ ಮಾಡಿದ್ದಾರೆ.

ಸೋನಿಯಾ ಗಾಂಧಿ ಭಾವನಾತ್ಮಕ ಭಾಷಣದ ವೇಳೆ ವೇದಿಕೆಯಲ್ಲಿ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗಿದ್ದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಹ ಉಪಸ್ಥಿತರಿದ್ದರು. 2004ರಿಂದ ರಾಯ್‌ಬರೇಲಿ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಧಿಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಸಭೆ ಸಂಸದೆಯಾಗಿ ಆಯ್ಕೆಯಾದ ಬಳಿಕ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಈ ಬಾರಿ ಈ ಕ್ಷೇತ್ರದಿಂದ ರಾಹುಲ್ ಗಾಂಧಿ ಕಣಕ್ಕಿಳಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!