ಪ್ರಯಾಗ್ ರಾಜ್: ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಅದನ್ನು ವಾಪಸ್ ಪಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪಾಕಿಸ್ತಾನ ಅಣುಬಾಂಬ್ ಹೊಂದಿರುವುದರಿಂದ ಅದಕ್ಕೆ ಗೌರವ ನೀಡಿ ಎಂದು ಫಾರೂಕ್ ಅಬ್ದುಲ್ಲಾ ಮತ್ತು ಮಣಿಶಂಕರ್ ಅಯ್ಯರ್ ಹೇಳುತ್ತಾರೆ. ರಾಹುಲ್ ಬಾಬಾ, ಇಂದು ಪ್ರಯಾಗ್‌ರಾಜ್‌ನ ಪವಿತ್ರ ಭೂಮಿಯಿಂದ ಹೇಳುತ್ತೇನೆ,ಈ ಪಿಒಕೆ ನಮ್ಮದು, ನಮ್ಮದೇ ಆಗಿರುತ್ತದೆ ಮತ್ತು ನಾವು ಅದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ" ಎಂದು ಅವರು ಹೇಳಿದರು. ಅಯ್ಯರ್ ಅವರ ಆಟಂ ಬಾಂಬ್ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊ ಕ್ಲಿಪ್‌ನಲ್ಲಿ, ಭಾರತವು ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಭಾರತವು ಪಾಕಿಸ್ತಾನಕ್ಕೆ ಗೌರವವನ್ನು ನೀಡಬೇಕು ಮತ್ತು ಅದು ಪರಮಾಣು ಬಾಂಬ್ ಅನ್ನು ಹೊಂದಿರುವುದರಿಂದ ಅದರೊಂದಿಗೆ ತೊಡಗಿಸಿಕೊಳ್ಳಬೇಕು ಎಂದು ಅಯ್ಯರ್ ಹೇಳಿರುವುದು ಕೇಳಿಬಂದಿದೆ. ಮತ್ತೊಂದೆಡೆ ವೀಡಿಯೊ ಹಳೆಯದು ಮತ್ತು ಬಿಜೆಪಿ ಚುನಾವಣೆ ಹಿನ್ನೆಲೆಯಲ್ಲಿ ಈ ವಿಡಿಯೋ ವೈರಲ್ ಮಾಡುತ್ತಿದೆ ಎಂದು ಅಯ್ಯರ್ ಹೇಳಿದರೆ,
ಕೆಲವು ತಿಂಗಳ ಹಿಂದೆ ಅಯ್ಯರ್ ಮಾಡಿದ ಟೀಕೆಗಳನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.