ರಾಹುಲ್ ಗಾಂಧಿ 
ದೇಶ

INDIA ಬಣ ಅಧಿಕಾರಕ್ಕೆ ಬಂದರೆ 'ಅಗ್ನಿವೀರ್‌' ಸೇನಾ ನೇಮಕಾತಿ ರದ್ದು: ರಾಹುಲ್ ಗಾಂಧಿ

ಈ ಬಾರಿ INDIA ಬಣ ಅಧಿಕಾರಕ್ಕೆ ಬಂದರೆ 'ಅಗ್ನಿವೀರ್‌' ಸೇನಾ ನೇಮಕಾತಿ ಯೋಜನೆ ರದ್ದುಪಡಿಸಿ ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಚಂಡೀಗಢ: ಈ ಬಾರಿ INDIA ಬಣ ಅಧಿಕಾರಕ್ಕೆ ಬಂದರೆ 'ಅಗ್ನಿವೀರ್‌' ಸೇನಾ ನೇಮಕಾತಿ ಯೋಜನೆ ರದ್ದುಪಡಿಸಿ ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಹರಿಯಾಣದ ಮಹೇಂದ್ರಗಢ-ಭಿವಾನಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ತಮ್ಮ ಮೊದಲ ಚುನಾವಣಾ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಗ್ನಿವೀರ್ ಯೋಜನೆ ಇದು ಮೋದಿಯ ಯೋಜನೆ, ಸೇನೆಯ ಯೋಜನೆ ಅಲ್ಲ. ಸೇನೆಗೆ ಇದು ಬೇಕಾಗಿಲ್ಲ. ಈ ಯೋಜನೆಯನ್ನು ಪಿಎಂಒ (ಪ್ರಧಾನಿ ಕಚೇರಿ) ರೂಪಿಸಿದೆ. INDIA ಬಣ ಅಧಿಕಾರಕ್ಕೆ ಬಂದರೆ ' ಅಗ್ನಿವೀರ್ ಯೋಜನೆಯನ್ನು ಕಸದ ಬುಟ್ಟಿಯಲ್ಲಿ ಹಾಕುತ್ತೇವೆ. ಭಾರತದ ಗಡಿಗಳು ಹರಿಯಾಣ ಮತ್ತು ದೇಶದ ಯುವಕರಿಂದ ಸುರಕ್ಷಿತವಾಗಿದೆ.ನಮ್ಮ ಯುವಕರ ಡಿಎನ್‌ಎಯಲ್ಲಿ ದೇಶಪ್ರೇಮವಿದೆ ಎಂದ ಅವರು, ಮೋದಿ ಹಿಂದೂಸ್ತಾನ್ ಕೆ ಜವಾನರನ್ನು ಕಾರ್ಮಿಕರನ್ನಾಗಿ ಪರಿವರ್ತಿಸಿದ್ದಾರೆ ಎಂದರು.

ಮೋದಿ ಸರ್ಕಾರ 22 ಉನ್ನತ ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುತ್ತದೆ. ಆದರೆ "ರೈತರ ಸಾಲವನ್ನು ಮನ್ನಾ ಮಾಡುವುದಿಲ್ಲ ಏಕೆಂದರೆ ಅದು ಅವರನ್ನು ಹಾಳುಮಾಡುತ್ತದೆ" ಎಂದು ಬಹಿರಂಗವಾಗಿ ಹೇಳುತ್ತಾರೆ

ರೈತರನ್ನು ರಕ್ಷಿಸಲು ಮತ್ತು ಅವರಿಗೆ ಸೂಕ್ತ ಪರಿಹಾರವನ್ನು ನೀಡಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಮೋದಿ ಸರ್ಕಾರ ಅದನ್ನು ರದ್ದುಗೊಳಿಸಿತು. ಅವರು ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಬೀದಿಗಿಳಿಯಬೇಕಾಯಿತು" ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ