ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಜಸ್ಥಾನದ ಚುರುನಲ್ಲಿ ಬಿರು ಬಿಸಿಲು: 50.5 ಡಿಗ್ರಿ ತಲುಪಿದ ತಾಪಮಾನ!

ರಾಜಸ್ಥಾನದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಚುರುವಿನಲ್ಲಿ ತಾಪಮಾನ 50.5 ಡಿಗ್ರಿಗಳಿಗೆ ತಲುಪಿದೆ.

ರಾಜಸ್ಥಾನ — online desk
Srinivas Rao BV
Updated On : 28 May 2024, 9:30 pm

ಜೈಪುರ: ರಾಜಸ್ಥಾನದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಚುರುವಿನಲ್ಲಿ ತಾಪಮಾನ 50.5 ಡಿಗ್ರಿಗಳಿಗೆ ತಲುಪಿದೆ.

ಈ ಭಾಗದಲ್ಲಿ ದಾಖಲಾಗುವ ತಾಪಮಾನಕ್ಕಿಂತ ಶೇ.7.5 ಡಿಗ್ರಿಗಳು ಹೆಚ್ಚಾದ ತಾಪಮಾನ ವರದಿಯಾಗಿದೆ. ಜೈಪುರದ ಹವಾಮಾನ ಕೇಂದ್ರದ ಪ್ರಕಾರ, ಜೂನ್ 1, 2019 ರಂದು ಚುರು ತನ್ನ ಗರಿಷ್ಠ ತಾಪಮಾನವನ್ನು 50.8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಂಡಿತ್ತು.

ದಿನದ ತಾಪಮಾನವು ಗಂಗಾನಗರದಲ್ಲಿ 49.4 ಡಿಗ್ರಿ ಸೆಲ್ಸಿಯಸ್, ಪಿಲಾನಿ (ಜುಂಜುನು) ಮತ್ತು ಫಲೋಡಿಯಲ್ಲಿ 49 ಡಿಗ್ರಿ ಸೆಲ್ಸಿಯಸ್, ಬಿಕಾನೆರ್‌ನಲ್ಲಿ 48.3 ಡಿಗ್ರಿ ಸೆಲ್ಸಿಯಸ್, ಕೋಟಾದಲ್ಲಿ 48.2 ಡಿಗ್ರಿ ಸೆಲ್ಸಿಯಸ್, ಜೈಸಲ್ಮೇರ್‌ನಲ್ಲಿ 48 ಡಿಗ್ರಿ ಸೆಲ್ಸಿಯಸ್, ಜೈಸಲ್ಮೇರ್‌ನಲ್ಲಿ 48 ಡಿಗ್ರಿ ಸೆಲ್ಸಿಯಸ್, ಜೈಪುರದಲ್ಲಿ 6 ಡಿಗ್ರಿ ಸೆಲ್ಸಿಯಸ್, 46 ಡಿಗ್ರಿ ಸೆಲ್ಸಿಯಸ್ ತಲುಪಿದೆ.

Advertisement

Advertisement

ಮುಂದಿನ 48 ಗಂಟೆಗಳಲ್ಲಿ ದಿನದ ತಾಪಮಾನ ಎರಡರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Also Read

Heatwaveಗೆ ತತ್ತರಿಸಿದ ಉತ್ತರ ಭಾರತ, ರಾಜಸ್ತಾನದ ಬಾರ್ಮರ್ ನಲ್ಲಿ 48.8 ಡಿಗ್ರಿ ತಾಪಮಾನ!

49 ಡಿಗ್ರಿ ಪಿಲಾನಿಯಲ್ಲಿ ಅತ್ಯಧಿಕ ತಾಪಮಾನವಾಗಿದೆ. ಹಿಂದಿನ ದಾಖಲೆ ಮೇ 2. 1999 ರಂದು 48.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಹವಾಮಾನ ಕಚೇರಿ ಇಡೀ ಮರುಭೂಮಿ ರಾಜ್ಯ ತೀವ್ರವಾದ ಶಾಖದ ಪರಿಸ್ಥಿತಿಗಳ ಹಿಡಿತದಲ್ಲಿದೆ ಮತ್ತು ತಾಪಮಾನವು ಋತುವಿನ ಸಾಮಾನ್ಯಕ್ಕಿಂತ 2-8 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments