ದೆಹಲಿಯ ಶಹದಾರದಲ್ಲಿರುವ ಅವರ ನಿವಾಸದ ಹೊರಗಿನಿಂದ ದಾಳಿಕೋರನು ಬಲಿಪಶುವಿನ ಮೇಲೆ ಗುಂಡು ಹಾರಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ. 
ದೇಶ

ದೆಹಲಿಯಲ್ಲಿ ಮಾರಣಾಂತಿಕ ಗುಂಡಿನ ದಾಳಿ: ಇಬ್ಬರು ಸಾವು, 10 ವರ್ಷದ ಬಾಲಕನಿಗೆ ಗಾಯ

ಈ ಮೂವರು ದೆಹಲಿಯ ಶಹದಾರದ ಫಾರ್ಷ್ ಬಜಾರ್ ಪ್ರದೇಶದಲ್ಲಿ ತಮ್ಮ ಮನೆಯ ಹೊರಗೆ ದೀಪಾವಳಿ ಆಚರಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಅವರ ಮೇಲೆ ದಾಳಿ ನಡೆಸಲಾಯಿತು.

ನವದೆಹಲಿ: ದೆಹಲಿಯ ಶಹದಾರಾದಲ್ಲಿ ತಮ್ಮ ನಿವಾಸದ ಹೊರಗೆ ಇಬ್ಬರು ಗುಂಡಿನ ದಾಳಿ ನಡೆಸಿ 40 ವರ್ಷದ ವ್ಯಕ್ತಿ ಮತ್ತು ಅವರ ಸೋದರಳಿಯ ಮೃತಪಟ್ಟರೆ, 10 ವರ್ಷದ ಮಗ ಗಾಯಗೊಂಡಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಆಕಾಶ್ ಶರ್ಮಾ ಅಲಿಯಾಸ್ ಚೊಟ್ಟು ಮತ್ತು ಅವರ ಸೋದರಳಿಯ ರಿಷಭ್ ಶರ್ಮಾ (16) ಮೃತಪಟ್ಟಿದ್ದು, ಕ್ರಿಶ್ ಶರ್ಮಾ (10) ಗಾಯಗೊಂಡಿದ್ದಾನೆ. ಈ ಮೂವರು ದೆಹಲಿಯ ಶಹದಾರದ ಫಾರ್ಷ್ ಬಜಾರ್ ಪ್ರದೇಶದಲ್ಲಿ ತಮ್ಮ ಮನೆಯ ಹೊರಗೆ ದೀಪಾವಳಿ ಆಚರಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಅವರ ಮೇಲೆ ದಾಳಿ ನಡೆಸಲಾಯಿತು.

ರಾತ್ರಿ 8:30 ರ ಸುಮಾರಿಗೆ ಪಿಸಿಆರ್ ಕರೆ ಬಂದ ನಂತರ ಪೊಲೀಸ್ ತಂಡವನ್ನು ಕಳುಹಿಸಲಾಯಿತು. ಸ್ಥಳಕ್ಕೆ ಬಂದು ನೋಡಿದಾಗ ರಕ್ತದೋಕುಳಿ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಕೋರರು ಆಕಾಶ್ ಶರ್ಮಾ ಅವರ ಮೇಲೆ ಗುಂಡು ಹಾರಿಸುವ ಮೊದಲು ಅವರ ಪಾದಗಳನ್ನು ಮುಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸಂತ್ರಸ್ತರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಪಕ್ಕದಲ್ಲಿ ನಿಂತಿದ್ದ ಆಕಾಶ್ ಶರ್ಮಾ ಅವರ ಪುತ್ರ ಕ್ರಿಶ್ ಮತ್ತು ಸೋದರಳಿಯ ರಿಷಭ್ ಅವರ ಮೇಲೂ ಗುಂಡುಗಳು ತಗುಲಿವೆ. ಬಾಲಕ ಕ್ರಿಶ್ ಶರ್ಮಾ ಚಿಕಿತ್ಸೆ ಪಡೆಯುತ್ತಿದ್ದು, ಆಕಾಶ್ ಶರ್ಮಾ ಮತ್ತು ರಿಷಬ್ ಶರ್ಮಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೇಲ್ನೋಟಕ್ಕೆ ಇದು ವೈಯಕ್ತಿಕ ದ್ವೇಷದ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂತ್ರಸ್ತರ ಕುಟುಂಬದ ಸದಸ್ಯರ ಹೇಳಿಕೆಗಳನ್ನು ದಾಖಲಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT