ಕೇದಾರನಾಥ್  
ದೇಶ

ಚಳಿಗಾಲಕ್ಕೆ ಪವಿತ್ರ ದೇಗುಲ ಕೇದಾರನಾಥ ದ್ವಾರ ಕ್ಲೋಸ್

ದೇವಾಲಯದ ದ್ವಾರಗಳನ್ನು ಮುಚ್ಚುವ ಮುನ್ನ ಇಂದು ನಸುಕಿನ ಜಾವ 4 ಗಂಟೆಗೆ ಕಾರ್ಯಕ್ರಮಗಳು ಆರಂಭವಾದವು. ಬೆಳಗ್ಗೆ 8.30 ಕ್ಕೆ ಪೋರ್ಟಲ್‌ಗಳನ್ನು ಮುಚ್ಚಲಾಯಿತು ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ಹೇಳಿದ್ದಾರೆ.

ಕೇದಾರನಾಥ: ಚಳಿಗಾಲ ಆರಂಭವಾದ ಹಿನ್ನೆಲೆಯಲ್ಲಿ ಪವಿತ್ರ ದೇಗುಲ ಕೇದಾರನಾಥದ ದ್ವಾರಗಳನ್ನು ಇಂದು ಭಾನುವಾರ ತಾತ್ಕಾಲಿಕವಾಗಿ ಮುಚ್ಚಲಾಯಿತು. ದೇವಾಲಯಕ್ಕೆ ಬಾಗಿಲು ಹಾಕುವ ಇಂದಿನ ಕಾರ್ಯಕ್ರಮವನ್ನು ವೀಕ್ಷಿಸಲು 18,000 ಕ್ಕೂ ಹೆಚ್ಚು ಯಾತ್ರಿಕರು ಹಿಮಾಲಯ ತಪ್ಪಲಿನಲ್ಲಿ ಸೇರಿದ್ದರು.

ದೇವಾಲಯದ ದ್ವಾರಗಳನ್ನು ಮುಚ್ಚುವ ಮುನ್ನ ಇಂದು ನಸುಕಿನ ಜಾವ 4 ಗಂಟೆಗೆ ಕಾರ್ಯಕ್ರಮಗಳು ಆರಂಭವಾದವು. ಬೆಳಗ್ಗೆ 8.30 ಕ್ಕೆ ಪೋರ್ಟಲ್‌ಗಳನ್ನು ಮುಚ್ಚಲಾಯಿತು ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ಹೇಳಿದ್ದಾರೆ.

ದೇವಾಲಯಕ್ಕೆ ಬಾಗಿಲು ಹಾಕುವ ಸಮಾರಂಭವನ್ನು ವೀಕ್ಷಿಸಲು 18,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ವೀಕ್ಷಿಸಿದರು. ಇಡೀ ಯಾತ್ರೆಯ ಋತುವಿನಲ್ಲಿ ಹದಿನಾರೂವರೆ ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪ್ರಾರ್ಥನೆ ಸಲ್ಲಿಸಲು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದ್ದಾರೆ.

ಗರ್ವಾಲ್ ಹಿಮಾಲಯ ಭಾಗದಲ್ಲಿ 11,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಕೇದಾರನಾಥವು ದೇಶದ ವಿವಿಧ ಭಾಗಗಳಲ್ಲಿ ನೆಲೆಗೊಂಡಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಗಟ್ಟಲೆ ಯಾತ್ರಿಕರು ಭೇಟಿ ನೀಡುವ ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿರುವಾಗ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.

ಶಿವನ ವಿಗ್ರಹವನ್ನು ಓಂಕಾರೇಶ್ವರ ದೇವಸ್ಥಾನಕ್ಕೆ ಅದರ ದ್ವಾರಗಳನ್ನು ಮುಚ್ಚುವ ಮೊದಲು ಪಲ್ಲಕ್ಕಿಯಲ್ಲಿ ದೇವಾಲಯದಿಂದ ಹೊರಗೆ ತರಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT