ಮಲ್ಲಿಕಾರ್ಜುನ್ ಖರ್ಗೆ-ಯೋಗಿ ಆದಿತ್ಯನಾಥ್ 
ದೇಶ

ಓಲೈಕೆಗೆ ಬಿದ್ದು ಮುಸ್ಲಿಂರ ಅಗ್ನಿಜ್ವಾಲೆಗೆ ಬಲಿಯಾದ ನಿಮ್ಮ ತಾಯಿಯ ತ್ಯಾಗವನ್ನೇ ಮರೆತೀರಾ: ಖರ್ಗೆಗೆ ಇತಿಹಾಸ ನೆನಪಿಸಿದ ಯೋಗಿ

ಖರ್ಗೆಯವರ ಗ್ರಾಮವು ಹೈದರಾಬಾದ್ ನಿಜಾಮರ ಅಧೀನದ ಗ್ರಾಮವಾಗಿತ್ತು. ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗ ಕಾಂಗ್ರೆಸ್‌ ನ ಅಂದಿನ ನಾಯಕತ್ವ ಮುಸ್ಲಿಂ ಲೀಗ್‌ನ ಸಹಯೋಗದಲ್ಲಿ ಮೌನ ವಹಿಸಿತ್ತು.

ನವದೆಹಲಿ: ಮಹಾರಾಷ್ಟ್ರದ ಅಚಲಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದು ಈ ವೇಳೆ ನಾನೊಬ್ಬ ಯೋಗಿ, ಯೋಗಿಗೆ ದೇಶವೇ ಮೊದಲು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿಮಗೆ ತುಷ್ಟೀಕರಣ ನೀತಿ ಮೊದಲು. ನಾನು ಖರ್ಗೆ ಅವರಿಗೆ ಹೇಳುತ್ತಿದ್ದೇನೆ. ಒಬ್ಬ ಯೋಗಿಗೆ ದೇಶವು ಮೊದಲು ಬರುತ್ತದೆ. ನನ್ನ ನಾಯಕ ಮೋದಿಯವರಿಗೂ ದೇಶವೇ ಮೊದಲು. ಆದರೆ ನಿಮಗೆ ಕಾಂಗ್ರೆಸ್ ತುಷ್ಟೀಕರಣವೇ ಮೊದಲು ಎಂದು ಹೇಳಿದರು.

ಖರ್ಗೆಯವರ ಗ್ರಾಮವು ಹೈದರಾಬಾದ್ ನಿಜಾಮರ ಅಧೀನದ ಗ್ರಾಮವಾಗಿತ್ತು. ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗ ಕಾಂಗ್ರೆಸ್‌ ನ ಅಂದಿನ ನಾಯಕತ್ವ ಮುಸ್ಲಿಂ ಲೀಗ್‌ನ ಸಹಯೋಗದಲ್ಲಿ ಮೌನ ವಹಿಸಿತ್ತು. ಆದ್ದರಿಂದಲೇ ಆ ಸಮಯದಲ್ಲಿ ಮುಸ್ಲಿಂ ಲೀಗ್ ಹಿಂದೂಗಳನ್ನು ಆಯ್ದು ಕೊಲ್ಲುತ್ತಿತ್ತು. ಇದೇ ಬೆಂಕಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಾಮವೂ ಸುಟ್ಟು ಕರಕಲಾಗಿದ್ದು, ಅವರ ತಾಯಿ ಹಾಗೂ ಕುಟುಂಬದವರು ಸಾವನ್ನಪ್ಪಿದ್ದರು. ಆದರೆ ಖರ್ಗೆಯವರು ಇದನ್ನು ಹೇಳುವುದಿಲ್ಲ ಏಕೆಂದರೆ ಅವರು ಆ ಮಾತುಗಳನ್ನು ಆಡಿದರೆ ಮುಸ್ಲಿಂ ಮತಗಳು ನುಣುಚಿಕೊಳ್ಳುತ್ತವೆ ಎಂದು ತಿಳಿದಿದೆ. ಮತ ಬ್ಯಾಂಕ್‌ಗಾಗಿ ಕುಟುಂಬದವರ ತ್ಯಾಗವನ್ನು ಖರ್ಗೆ ಮರೆತಿದ್ದಾರೆ ಎಂದರು.

ಇದಕ್ಕೂ ಮೊದಲು ಮಲ್ಲಿಕಾರ್ಜುನ ಖರ್ಗೆ ಜಾರ್ಖಂಡ್‌ನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಸಂತರ ಬಗ್ಗೆ ಮಾತನಾಡಿದ್ದು, ಈಗ ಅನೇಕ ಸಾಧುಗಳು ರಾಜಕಾರಣಿಗಳಾಗಿದ್ದಾರೆ. ಅವರು ಕೇಸರಿ ಬಟ್ಟೆಗಳನ್ನು ಧರಿಸಿ ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಮತ್ತು ಜನರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಯೋಗಿ ಖಡಕ್ ಆಗಿ ಉತ್ತರಿಸಿದ್ದು ಒಡೆದರೆ ಒಡೆದಂತಾಗುತ್ತದೆ ಎಂಬ ಹೇಳಿಕೆ ಸಂತರ ಹೇಳಿಕೆಯೇ? ಅಂತಹ ಹೇಳಿಕೆಯನ್ನು ಯಾವುದೇ ಸಂತರು ನೀಡಲು ಸಾಧ್ಯವಿಲ್ಲ. ಭಯೋತ್ಪಾದಕರು ಇದನ್ನು ಹೇಳಬಹುದು. ನಾವಲ್ಲ. ನಾಥ ಪಂಥದ ಯಾವ ಸಂತನೂ ಇಂಥ ಮಾತನ್ನು ಹೇಳಲಾರ. ನಾವು ಭಯಗೊಂಡರೆ ನಾವು ಸಾಯುತ್ತೇವೆ, ನಾವು ಹೆದರುವುದಿಲ್ಲ ಎಂದು ಯೋಗಿ ಹೇಳಿದ್ದಾರೆ.

ಖರ್ಗೆ ಹೇಳಿಕೆಗೆ ತೀವ್ರ ಟೀಕೆ

ಮಲ್ಲಿಕಾರ್ಜುನ ಖರ್ಗೆ ಅವರ ಈ ಹೇಳಿಕೆ ಇದೀಗ ವಿವಾದದ ರೂಪ ಪಡೆದುಕೊಂಡಿದ್ದು, ಬಿಜೆಪಿ ಹಾಗೂ ಸಂತ ಸಮಾಜದಿಂದ ಈ ಬಗ್ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಧಾರ್ಮಿಕ ಭಾವನೆ ಕೆರಳಿಸುವ ಆರೋಪ ಮಾಡುತ್ತಿದ್ದಾರೆ. ಖರ್ಗೆಯವರ ಹೇಳಿಕೆಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳೂ ವಾಗ್ದಾಳಿ ನಡೆಸಿದವು. ಇದು ಕಾಂಗ್ರೆಸ್‌ನ ಹಳೆಯ ಮನಸ್ಥಿತಿ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಸುಳ್ಳು ಹೇಳಿ ಸಮಾಜದಲ್ಲಿ ಬಿರುಕು ಮೂಡಿಸಿದ ಇತಿಹಾಸವಿದೆ. ಕಾಂಗ್ರೆಸ್ ಎಂದಿಗೂ ಹಿಂದೂ ಧರ್ಮ ಮತ್ತು ಸನಾತನ ಸಂಸ್ಕೃತಿಯನ್ನು ಗೌರವಿಸಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಮೊಘಲ್ ದಾಳಿಕೋರರಿಗೆ ಹೋಲಿಸಿದ ಬ್ರಜೇಶ್ ಪಾಠಕ್ ತಕ್ಷಣ ಕ್ಷಮೆಯಾಚಿಸಬೇಕೆಂದು ಕೇಳಿಕೊಂಡರು. ಒಡೆದು ಅಧಿಕಾರ ಪಡೆಯುವುದೇ ಕಾಂಗ್ರೆಸ್‌ನ ಇತಿಹಾಸ ಎಂದು ಸಚಿವ ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT