ಉತ್ತರ ಪ್ರರದೇಶದಲ್ಲಿ ಸರ್ಕಾರಿ ಕಾರಿನಲ ಮೇಲೆ ಯುವತಿಯೋರ್ವಲು ಅಶ್ಲೀಲವಾಗಿ ನೃತ್ಯ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು, ಉತ್ತರಪ್ರದೇಶದಲ್ಲಿ ಉತ್ತಮ ಆಡಳಿತವಿದೆ. ಆದರೆ ಸರ್ಕಾರಿ ನೌಕರರ ಉಪಟಳ ಹೆಚ್ಚಾಗುತ್ತಿದೆ. ಝಾನ್ಸಿಯಲ್ಲಿ ಯುವತಿಯೊಬ್ಬಳು ಎಸ್‌ಡಿಎಂ ಕಾರಿನ ಮೇಲೆ ಹತ್ತಿ ಅಶ್ಲೀಲತೆಯ ಮಿತಿಯನ್ನು ಮೀರುವ ರೀತಿಯಲ್ಲಿ ನೃತ್ಯ ಮಾಡಿದ್ದಾಳೆ. ಡ್ಯಾನ್ಸ್ ನಡೆಯುತ್ತಿದ್ದಾಗ ಅಲ್ಲಿ ಎಸ್‌ಡಿಎಂ ಇರಲಿಲ್ಲ. ಆದರೆ ಕಾರಿನ ಚಾಲಕ ಕಾರನ್ನು ಅಲ್ಲಿಗೆ ಚಲಾಯಿಸಿಕೊಂಡು ಹೋಗಿದ್ದ ಎಂದು ಹೇಳಲಾಗುತ್ತಿದೆ.
ಝಾನ್ಸಿಯಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಾರಿನ ಬಾನೆಟ್ ಮೇಲೆ ನೃತ್ಯಗಾರ್ತಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ, ಸರ್ಕಾರಿ ಕಾರಿನ ಮೇಲೆ 'ಉತ್ತರ ಪ್ರದೇಶ ಸರ್ಕಾರ' ಮತ್ತು ಎಸ್‌ಡಿಎಂ ಎಂದು ಬರೆಯಲಾಗಿದ್ದು ವಾಹನದ ಕೆಂಪು ದೀಪ ಉರಿಯುತ್ತಿದೆ. ಓರ್ವ ಯುವತಿ ಮತ್ತು ಯುವಕ ಕಾರಿನ ಬಾನೆಟ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾರೆ. ಭೋಜ್‌ಪುರಿ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ. ವಿಡಿಯೋದಲ್ಲಿ ಸೈರನ್ ಸದ್ದು ಕೂಡ ಕೇಳಿ ಬರುತ್ತಿದೆ. ಜೊತೆಗೆ ಕುಣಿದು ಕುಪ್ಪಳಿಸುವವರ ಮೇಲೆ ನೋಟುಗಳ ಸುರಿಮಳೆಗೈದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ನಂತರ, ಬಳಕೆದಾರರು ರಾಜ್ಯದಲ್ಲಿನ ಕಳಪೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ, ಝಾನ್ಸಿ ಪೊಲೀಸರು ವೀಡಿಯೊವನ್ನು ಗಮನಿಸಿದರು.
ಝಾನ್ಸಿ ಪೊಲೀಸರು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವನ್ನು ತನಿಖೆ ಮಾಡಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಶಹಜಹಾನ್‌ಪುರದ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಿದ್ದಾರೆ. ನಂತರ ವಾಹನದ ಬಳಿ ಇದ್ದ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಝಾನ್ಸಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ನಾವು ಸಾಮಾಜಿಕ ಮಾಧ್ಯಮಗಳ ಮೂಲಕ ವಿಷಯ ತಿಳಿಯಿತು. ವಾಹನವು ಎಸ್‌ಡಿಎಂಗೆ ಸೇರಿದೆ. ಆ ಸಮಯದಲ್ಲಿ ಅವರು ಸ್ಥಳದಲ್ಲಿ ಇರಲಿಲ್ಲ. ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ಎಸ್‌ಡಿಎಂ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊಗೆ ಸಂಬಂಧಿಸಿದಂತೆ ಸರ್ಕಾರದ ವ್ಯವಸ್ಥೆಯನ್ನು ಗೇಲಿ ಮಾಡುತ್ತಿದ್ದಾರೆ.