ಸಂಸತ್ತಿನ ಲೋಕಸಭೆಯ ಸಂಗ್ರಹ ಚಿತ್ರ  
ದೇಶ

ನವೆಂಬರ್ 25ರಿಂದ ಸಂಸತ್ತಿನ ಚಳಿಗಾಲ ಅಧಿವೇಶನ: 15 ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ

ಮಾನ್ಸೂನ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಿದ ನಂತರ ಜಂಟಿ ಸಂಸತ್ತಿನ ಸಮಿತಿಗೆ (JPC) ಕಳುಹಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ನವದೆಹಲಿ: ಬರುವ ಸೋಮವಾರ ನವೆಂಬರ್ 24ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ. ಚಳಿಗಾಲ ಅಧಿವೇಶನದಲ್ಲಿ ಐದು ಹೊಸ ಶಾಸನಗಳು ಸೇರಿದಂತೆ 15 ಮಸೂದೆಗಳನ್ನು ಮೋದಿ ಸರಕಾರ ಮಂಡಿಸಲಿದೆ. ಅಧಿವೇಶನದಲ್ಲಿ ಜಂಟಿ ಸಂಸದೀಯ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ನಂತರ, ಎರಡು ಸದನಗಳ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ 2024 ನ್ನು ಪಟ್ಟಿ ಮಾಡಿದೆ. ಸಹಕಾರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದನ್ನು ಒಳಗೊಂಡಂತೆ 5 ಹೊಸ ಕರಡು ಶಾಸನಗಳು ಒಳಗೊಂಡಿವೆ.

ಮಾನ್ಸೂನ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಿದ ನಂತರ ಜಂಟಿ ಸಂಸತ್ತಿನ ಸಮಿತಿಗೆ (JPC) ಕಳುಹಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಸಮಿತಿಯು ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನದಂದು ತನ್ನ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ವಕ್ಫ್ ವಿಧೇಯಕವನ್ನು ಪರಿಶೀಲಿಸುವ ಜೆಪಿಸಿ ಅವಧಿಯನ್ನು ವಿಸ್ತರಿಸುವಂತೆ ವಿರೋಧ ಪಕ್ಷಗಳು ಈಗಾಗಲೇ ಕೋರಿರುವುದರಿಂದ ಪ್ರಸಕ್ತ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ತೀವ್ರ ವಾಗ್ದಾಳಿ ಏರ್ಪಡುವ ನಿರೀಕ್ಷೆಯಿದೆ. ಪ್ರತಿಪಕ್ಷಗಳು ಮತ್ತು ಮುಸ್ಲಿಂ ಸಂಸ್ಥೆಗಳು ಹೊಸ ಮಸೂದೆಯಲ್ಲಿನ ಹಲವಾರು ತಿದ್ದುಪಡಿಗಳನ್ನು ವಿರೋಧಿಸಿವೆ.

ಚಳಿಗಾಲದ ಅಧಿವೇಶನದಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ' ಮಸೂದೆ ಮಂಡಿಸುವ ಊಹೆಯಿದ್ದರೂ ಅದು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. 11 ಬಾಕಿ ಉಳಿದಿರುವ ಮಸೂದೆಗಳು ಸೇರಿದಂತೆ ಒಟ್ಟು 16 ಮಸೂದೆಗಳು ಸರ್ಕಾರದಿಂದ ಲೋಕಸಭೆ ಮತ್ತು ರಾಜ್ಯಸಭಾ ಕಾರ್ಯದರ್ಶಿಗಳಿಗೆ ಸಲ್ಲಿಸಲಾದ ತಾತ್ಕಾಲಿಕ ಶಾಸನಗಳ ಪಟ್ಟಿಯ ಭಾಗವಾಗಿದೆ.

ಮಂಡನೆ, ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಸರ್ಕಾರವು ಪಟ್ಟಿ ಮಾಡಿರುವ ಇತರ ಮಸೂದೆಗಳೆಂದರೆ, ಪಂಜಾಬ್ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆಯಾಗಿದ್ದು, ದೆಹಲಿ ಜಿಲ್ಲಾ ನ್ಯಾಯಾಲಯಗಳ ಮೇಲ್ಮನವಿ ನ್ಯಾಯವ್ಯಾಪ್ತಿಯನ್ನು (ಪ್ರಕರಣವೊಂದರ ವಿತ್ತೀಯ ಮೌಲ್ಯ) ಅಸ್ತಿತ್ವದಲ್ಲಿರುವ `3 ಲಕ್ಷದಿಂದ `20 ಲಕ್ಷಕ್ಕೆ ಹೆಚ್ಚಿಸುತ್ತದೆ.

ಮರ್ಚೆಂಟ್ ಶಿಪ್ಪಿಂಗ್ ಬಿಲ್, ಸರ್ಕಾರವು ಯೋಜಿಸಿರುವ ಹೊಸ ಕರಡು ಕಾನೂನಾಗಿದ್ದು, ಕಡಲ ಒಪ್ಪಂದಗಳ ಅಡಿಯಲ್ಲಿ ಭಾರತದ ಬಾಧ್ಯತೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಜೊತೆಗೆ, ಕರಾವಳಿ ಶಿಪ್ಪಿಂಗ್ ಬಿಲ್ ಮತ್ತು ಭಾರತೀಯ ಬಂದರುಗಳ ಮಸೂದೆಯನ್ನು ಪರಿಚಯಿಸಲು ಮತ್ತು ಅಂತಿಮವಾಗಿ ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ. ಕಳೆದ ತಿಂಗಳು, ಕೇಂದ್ರ ಸಚಿವ ಸಂಪುಟವು ಕರಾವಳಿ ಶಿಪ್ಪಿಂಗ್ ಬಿಲ್, 2024 ಅನ್ನು ಅನುಮೋದಿಸಿತು. ಮಸೂದೆ ಕಾನೂನಾದರೆ, ಕರಾವಳಿ ನೀರಿನಲ್ಲಿ ಕಾರ್ಯನಿರ್ವಹಿಸಲು ಭಾರತೀಯ ಧ್ವಜದ ಹಡಗುಗಳು ಸಾಮಾನ್ಯ ವ್ಯಾಪಾರ ಪರವಾನಗಿಯನ್ನು ಪಡೆದುಕೊಳ್ಳುವ ಅಗತ್ಯವನ್ನು ತೆಗೆದುಹಾಕುತ್ತದೆ.

ಭಾರತೀಯ ಬಂದರುಗಳ ಮಸೂದೆಯು ಭಾರತದ ಅಂತರಾಷ್ಟ್ರೀಯ ಕಟ್ಟುಪಾಡುಗಳು ಮತ್ತು ಶಾಸನಬದ್ಧ ಅನುಸರಣೆಗೆ ಅನುಗುಣವಾಗಿ ಬಂದರುಗಳ ಸಂರಕ್ಷಣೆ, ಬಂದರುಗಳಲ್ಲಿ ಭದ್ರತೆ ಮತ್ತು ಮಾಲಿನ್ಯ ನಿಯಂತ್ರಣವನ್ನು ಸುರಕ್ಷಿತಗೊಳಿಸಲು ಕ್ರಮಗಳನ್ನು ಕೈಗೊಳ್ಳುವ ಗುರಿಯನ್ನು ಹೊಂದಿದೆ.

ಭಾರತದಲ್ಲಿನ ಪ್ರಮುಖವಲ್ಲದ ಬಂದರುಗಳ ಪರಿಣಾಮಕಾರಿ ಆಡಳಿತ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ರಾಜ್ಯ ಕಡಲ ಮಂಡಳಿಗಳನ್ನು ಅಧಿಕಾರ ಮತ್ತು ಸ್ಥಾಪಿಸಲು ಮಸೂದೆಯನ್ನು ಸಿದ್ಧಪಡಿಸಲಾಗಿದೆ; ಬಂದರು ಸಂಬಂಧಿತ ವಿವಾದಗಳ ಪರಿಹಾರಕ್ಕಾಗಿ ಮತ್ತು ಬಂದರು ವಲಯದ ರಚನಾತ್ಮಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸಲು ನ್ಯಾಯಾಂಗ ಕಾರ್ಯವಿಧಾನಗಳನ್ನು ಒದಗಿಸುತ್ತದೆ.

ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ ಸೇರಿದಂತೆ ಎಂಟು ಮಸೂದೆಗಳು ಲೋಕಸಭೆಯಲ್ಲಿ ಬಾಕಿ ಉಳಿದಿವೆ. ಇನ್ನೆರಡು ರಾಜ್ಯಸಭೆಯಲ್ಲಿವೆ. ಲೋಕಸಭೆಯಲ್ಲಿ ಬಾಕಿ ಉಳಿದಿರುವ ಕೆಲವು ಮಸೂದೆಗಳು, ವಕ್ಫ್ ತಿದ್ದುಪಡಿ ಮಸೂದೆಯ ಹೊರತಾಗಿ, ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ, ಗೋವಾದ ಅಸೆಂಬ್ಲಿ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ, ಸಮುದ್ರದ ಮೂಲಕ ಸರಕು ಸಾಗಣೆ ಮಸೂದೆ 2024, ರೈಲ್ವೆ (ತಿದ್ದುಪಡಿ) ಮಸೂದೆ ಮತ್ತು ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆಗಳಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT