ಫಾಜಿಲ್ಕಾ: ವಾಗ್ವಾದದ ವೇಳೆ ಕುಪಿತಗೊಂಡ ಶಿರೋಮಣಿ ಅಕಾಲಿ ದಳ (SAD) ನಾಯಕರೊಬ್ಬರು ಗುಂಡು ಹಾರಿಸಿದ್ದರಿಂದ AAP ನಾಯಕರೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಂಜಾಬಿನ ಫಾಜಿಲ್ಕಾ ಜಿಲ್ಲೆಯಲ್ಲಿ ನಡೆದಿದೆ.
ತದನಂತರ ಗಂಭೀರವಾಗಿ ಗಾಯಗೊಂಡ AAP ನಾಯಕ ಮನದೀಪ್ ಸಿಂಗ್ ಬ್ರಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಕ್ಷೇತ್ರ ಅಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿ (ಬಿಡಿಪಿಒ) ಕಚೇರಿಯ ಹೊರಗೆ ಘಟನೆ ನಡೆದಿದೆ.
ಮಾಜಿ ಸಂಸದ ಜೋರಾ ಸಿಂಗ್ ಮಾನ್ ಅವರ ಪುತ್ರ ವರ್ದೇವ್ ಸಿಂಗ್ ಮಾನ್ ಗುಂಡು ಹಾರಿಸಿದ್ದಾರೆ ಎಂದು ಜಲಾಲಾಬಾದ್ ಎಎಪಿ ಶಾಸಕ ಜಗದೀಪ್ ಕಾಂಬೋಜ್ ಗೋಲ್ಡಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.