ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಉತ್ತರ ಪ್ರದೇಶ: ರೈಲು ಹಳಿಗಳ ಮೇಲೆ ಮಣ್ಣಿನ ರಾಶಿ ಪತ್ತೆ!

ರಾಯ್ ಬರೇಲಿಯ ರಘುರಾಜ್ ಸಿಂಗ್ ನಿಲ್ದಾಣದ ಬಳಿ ರೈಲು ಹಳಿಗಳ ಮೇಲೆ ಮಣ್ಣಿನ ರಾಶಿ ಬಿದ್ದಿರುವುದನ್ನು ನೋಡಿದ ನಂತರ ಲೋಕೋ ಪೈಲಟ್ ಪ್ಯಾಸೆಂಜರ್ ರೈಲನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿದ್ದರು.

ರೈಲು ಹಳಿ ಮೇಲೆ ಮಣ್ಣಿನ ರಾಶಿ ಪತ್ತೆ
Nagaraja AB
Updated On : 7 Oct 2024, 9:41 am

ರಾಯ್ ಬರೇಲಿ: ರೈಲುಗಳನ್ನು ಹಳಿ ತಪ್ಪಿಸುವ ಹಾಗೂ ರೈಲು ಸೇವೆಯಲ್ಲಿ ವ್ಯತ್ಯಯ ಉಂಟು ಮಾಡಲು ಯತ್ನಿಸುತ್ತಿರುವ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ. ಕಳೆದ ಬುಧವಾರ ಎರಡನೇ ಬಾರಿಗೆ ರೈಲ್ವೆಗೆ ಸೇರಿದ ಅಗ್ನಿಶಾಮಕ ಸಿಲಿಂಡರ್ ರೈಲು ಹಳಿ ಮೇಲೆ ಪತ್ತೆಯಾಗಿತ್ತು. ಇದೀಗ ರೈಲು ಹಳಿಗಳ ಮೇಲೆ ಮಣ್ಣಿನ ರಾಶಿ ಪತ್ತೆಯಾಗಿದೆ.

ಭಾನುವಾರ ರಾಯ್ ಬರೇಲಿಯ ರಘುರಾಜ್ ಸಿಂಗ್ ನಿಲ್ದಾಣದ ಬಳಿ ರೈಲು ಹಳಿಗಳ ಮೇಲೆ ಮಣ್ಣಿನ ರಾಶಿ ಬಿದ್ದಿರುವುದನ್ನು ನೋಡಿದ ನಂತರ ಲೋಕೋ ಪೈಲಟ್ ಪ್ಯಾಸೆಂಜರ್ ರೈಲನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಳಿಯಿಂದ ಮಣ್ಣನ್ನು ತೆಗೆಯಲಾಗಿದ್ದು, ಮಾರ್ಗದಲ್ಲಿ ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ ಎಂದು ಎಸ್‌ಎಚ್‌ಒ ದೇವೇಂದ್ರ ಭಡೋರಿಯಾ ತಿಳಿಸಿದ್ದಾರೆ. ರೈಲ್ವೆ ಹಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣನ್ನು ಗುಡ್ಡೆ ಹಾಕಲಾಗಿತ್ತು. ಇದರಿಂದಾಗಿ ರಾಯ್ ಬರೇಲಿಯಿಂದ ತೆರಳುತ್ತಿದ್ದ ಶಟಲ್ ರೈಲನ್ನು ನಿಲ್ಲಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.

Advertisement

Advertisement

Also Read

ಉತ್ತರ ಪ್ರದೇಶ: ರೈಲು ಹಳಿ ಮೇಲೆ ಮತ್ತೆ ಅಗ್ನಿಶಾಮಕ ಸಿಲಿಂಡರ್ ಪತ್ತೆ

ಈ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಡಂಪರ್ ಮೂಲಕ ಮಣ್ಣನ್ನು ಸಾಗಿಸಲಾಗುತ್ತದೆ. ಭಾನುವಾರ ಸಂಜೆ ಡಂಪರ್ ಚಾಲಕನೊಬ್ಬ ರೈಲ್ವೆ ಹಳಿ ಮೇಲೆ ಮಣ್ಣಿನ ಲೋಡ್ ಸುರಿದು ಪರಾರಿಯಾಗಿದ್ದಾನೆ ಎಂದು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಭಡೋರಿಯಾ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments