ಹರಿಯಾಣ ರಾಜಕೀಯದಲ್ಲಿ ಜಿಲೇಬಿ ಚರ್ಚೆ ತೀವ್ರಗೊಂಡಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ವೇಳೆ ಗೊಹಾನದ ಪ್ರಸಿದ್ಧ ಜಿಲೇಬಿಗಳನ್ನು ತಿಂದು ವೇದಿಕೆ ಮೇಲೆ ರಾಹುಲ್ ಗಾಂಧಿ ಜಿಲೇಬಿ ಕಾರ್ಖಾನೆಗಳ ಸ್ಥಾಪನೆ, ಉದ್ಯೋಗಾವಕಾಶ ಕಲ್ಪಿಸಿ ದೇಶ ವಿದೇಶಗಳಿಗೆ ರಫ್ತು ಮಾಡುವ ಕುರಿತು ಮಾತನಾಡಿದರು. ಬಿಜೆಪಿ ಇದನ್ನೇ ವಿಷಯವನ್ನಾಗಿ ಮಾಡಿಕೊಂಡು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ಜಿಲೇಬಿ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿವೆ. ಜಿಲೇಬಿಯನ್ನು ಗದ್ದೆಯಲ್ಲಿ ಬೆಳೆಯಂತೆ ಬೆಳೆದು ತೋರಿಸಲಾಗುತ್ತದೆ. ಜಿಲೇಬಿಯ ಬೀಜಗಳು ಸಿದ್ಧವಾಗಿವೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಾರೆ. ಈಗ ಹೊಲಗಳಲ್ಲಿ ಜಿಲೇಬಿ ಬೆಳೆಯಲಾಗುವುದು ಕುಚೋಧ್ಯ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕನನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಯಿತು. ನಂತರ ಕಾಂಗ್ರೆಸ್ ಕೂಡ ಜಲೇಬಿಯನ್ನು ಯಂತ್ರಗಳು ಮತ್ತು ಅದರ ಕಾರ್ಖಾನೆಯಿಂದ ತಯಾರಿಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸೇಡು ತೀರಿಸಿಕೊಂಡಿತ್ತು. ಆದರೆ ಈಗ ಹರಿಯಾಣ ವಿಧಾನಸಭೆ ಫಲಿತಾಂಶ ಬೆನ್ನಲ್ಲೇ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್‌ನ ಜಿಲೇಬಿಯ ರುಚಿ ಹದಗೆಡುತ್ತಿದೆ.
ಎಕ್ಸಿಟ್ ಪೋಲ್‌ಗಳು ಮೊದಲು ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಸ್ಥಿತಿಯಲ್ಲಿದೆ ಎಂದು ತೋರುತ್ತಿದ್ದವು. ಆದರೆ ಬೆಳಿಗ್ಗೆ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ, ಪಕ್ಷವು ಉತ್ತಮ ಮುನ್ನಡೆ ಸಾಧಿಸಿತ್ತು. ಆದರೆ ಮತ ಎಣಿಕೆ ಮುಂದುವರೆದಂತೆ ಬಿಜೆಪಿ ತೀವ್ರ ಪೈಪೋಟಿ ನೀಡಿತ್ತು. ಅಲ್ಲದೆ ಸ್ಪಷ್ಟ ಬಹುಮತ ಸಾಧಿಸಿದ್ದು ರಾಹುಲ್ ಗಾಂಧಿಯ ಜಿಲೇಜಿ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ.
ಜಿಲೇಬಿ ಚರ್ಚೆಗೆ ಬಂದಿದ್ದೇಕೆ?
ಹರಿಯಾಣದಲ್ಲಿ ಚುನಾವಣಾ ಪ್ರಚಾರದ ವೇಳೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಗೊಹಾನದ ಪ್ರಸಿದ್ಧ ಜಿಲೇಬಿಯನ್ನು ತಿಂದು ಅದರ ರುಚಿಯನ್ನು ಸಹ ಹೊಗಳಿದ್ದರು. ಈ ವೇಳೆ ಅವರು ಹೇಳಿದ್ದು, ನಾನು ಕಾರಿನಲ್ಲಿ ಜಿಲೇಬಿ ಸವಿದು ನನ್ನ ಸಹೋದರಿ ಪ್ರಿಯಾಂಕಾಗೆ ಇಂದು ನನ್ನ ಜೀವನದ ಅತ್ಯುತ್ತಮ ಜಿಲೇಬಿ ತಿಂದಿದ್ದೇನೆ ಎಂದು ಸಂದೇಶ ಕಳುಹಿಸಿದ್ದೆ. ನಿನಗೂ ಒಂದು ಬಾಕ್ಸ್ ಜಿಲೇಬಿ ತರುತ್ತಿದ್ದೇನೆ. ಆಗ ನಾನು ದೀಪೇಂದ್ರ ಮತ್ತು ಬಜರಂಗ್ ಪುನಿಯಾ ಅವರಿಗೆ ಈ ಜಿಲೇಬಿ ಬಗ್ಗೆ ಭಾರತ ಸೇರಿದಂತೆ ಇಡೀ ಪ್ರಪಂಚಕ್ಕೆ ತಿಳಿಯಬೇಕು ಎಂದು ಹೇಳಿದೆ.
ಕಾಂಗ್ರೆಸ್ ಕಾರ್ಯಕರ್ತರು ಗೋಹನದ ಜಿಲೇಬಿ ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ತಲುಪಬೇಕು ಎಂದು ಹೇಳಿದ್ದರು. ಕಾಂಗ್ರೆಸ್‌ನ ವಿಜಯ್ ಸಂಕಲ್ಪ್ ರ್ಯಾಲಿಯ ವೇದಿಕೆಯಿಂದ ರಾಹುಲ್, ನಾನು ನನ್ನ ಜೀವನದ ಅತ್ಯುತ್ತಮ ಜಿಲೇಬಿಯನ್ನು ತಿಂದಿದ್ದೇನೆ ಎಂದು ಹೇಳಿದ್ದರು. ಹೀಗಿರುವಾಗ ಈ ಜಿಲೇಬಿ ದೇಶ-ವಿದೇಶಗಳಿಗೆ ಹೋದರೆ ಬಹುಶಃ ಅವರ ಅಂಗಡಿ ಕಾರ್ಖಾನೆಯಾಗಿ ಪರಿವರ್ತನೆಗೊಂಡು ಸಾವಿರಾರು ಜನರಿಗೆ ಕೆಲಸ ಸಿಗಬಹುದು ಎಂದು ಹೇಳಿದ್ದರು.