ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಸಂಜಯ್ ರಾಯ್, ಪ್ರಕರಣದ 'ಏಕೈಕ ಆರೋಪಿ' ಎಂದು ಸಿಬಿಐ ಹೇಳಿದ್ದು, ತನ್ನ ಚಾರ್ಜ್ ಶೀಟ್‌ನಲ್ಲಿ ಡಿಎನ್‌ಎ ಮತ್ತು ರಕ್ತದ ಮಾದರಿಗಳ ವರದಿಗಳಂತಹ 11 ಸಾಕ್ಷ್ಯಗಳನ್ನು ಪಟ್ಟಿ ಮಾಡಿದೆ.
ಸಂತ್ರಸ್ತೆಯ ದೇಹದಲ್ಲಿ ಆತನ ಡಿಎನ್‌ಎ ಇರುವಿಕೆ, ಚಿಕ್ಕ ಕೂದಲು, ಸಂತ್ರಸ್ತೆಯ ರಕ್ತದ ಕಲೆಗಳು, ದೇಹದ ಮೇಲಿನ ಗಾಯಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಅವರ ಮೊಬೈಲ್ ಫೋನ್ ಕರೆ ವಿವರಗಳ ದಾಖಲೆಗಳನ್ನು ಸಿಬಿಐ ರಾಯ್ ವಿರುದ್ಧ ಸಾಕ್ಷ್ಯವಾಗಿ ಉಲ್ಲೇಖಿಸಿದೆ.
"ಸಂತ್ರಸ್ಥೆಯ ಪ್ರತಿರೋಧ/ಹೋರಾಟದ ವೇಳೆ ರಾಯ್ ಗೆ ಗಾಯಳಾಗಿರುವ ಗುರುತುಗಳಿವೆ" ಎಂದು ಚಾರ್ಜ್ ಶೀಟ್ ಹೇಳಿದೆ.
"ಆಗಸ್ಟ್ 8 ಮತ್ತು 9 ರ ಮಧ್ಯರಾತ್ರಿಯ ಸಮಯದಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಯ್ ಇರುವ ಬಗ್ಗೆ ಮತ್ತು ತುರ್ತು ಕಟ್ಟಡದ ಮೂರನೇ ಮಹಡಿಯಲ್ಲಿ SoC (ಅಪರಾಧದ ದೃಶ್ಯ) ಇರುವುದು ಸಿಸಿಟಿವಿ ದೃಶ್ಯಗಳ ಮೂಲಕ ಸಾಬೀತಾಗಿದೆ. ಸಿಡಿಆರ್ ಪ್ರಕಾರ ಅವರ ಮೊಬೈಲ್ ಫೋನ್ ಟವರ್ ಲೋಕೇಷನ್ ನಿಂದ ಅವರ ಉಪಸ್ಥಿತಿ ಸಾಬೀತಾಗಿದೆ ಎಂದು ಸಿಬಿಐ ಚಾರ್ಜ್ ಶೀಟ್ ತಿಳಿಸಿದೆ.
ಕೇಂದ್ರ ತನಿಖಾ ಸಂಸ್ಥೆಯು ಸೋಮವಾರ ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಮೃತ ಮಹಿಳೆ 'ವಿ' ಎಂದು ಉಲ್ಲೇಖಿಸಿದೆ.
ಎಸ್‌ಒಸಿಯಿಂದ ಪತ್ತೆಯಾದ ಸಣ್ಣ ಕೂದಲು ಆರೋಪಿ ಸಂಜಯ್ ರಾಯ್‌ಗೆ ಹೊಂದಿಕೆಯಾಗಿದೆ ಎಂದು ಚಾರ್ಜ್‌ಶೀಟ್ ಹೇಳಿದೆ.
ಆಗಸ್ಟ್ 9 ರ ಬೆಳಗ್ಗೆ ಸೆಮಿನಾರ್ ಕೋಣೆಗೆ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೋಲ್ಕತ್ತಾ ಪೊಲೀಸರು ರಾಯ್ ನನ್ನು ಆಗಸ್ಟ್ 10 ರಂದು ಬಂಧಿಸಿದ್ದರು ಎಂದು ಸಿಬಿಐ ಹೇಳಿದೆ.
ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಆಗಸ್ಟ್ 14 ರಂದು ತನಿಖೆ ಕೈಗೆತ್ತಿಕೊಂಡ ಸಿಬಿಐ, ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿವರವಾದ ವಿಚಾರಣೆ ನಡೆಸಿತು. ನಂತರ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿತು.