ಕಾಂಗ್ರೆಸ್ ನಾಯಕರಿಂದ ಚುನಾವಣಾ ಆಯೋಗದ ಭೇಟಿ online desk
ದೇಶ

ಹರ್ಯಾಣ ಸೋಲು: ಇವಿಎಂಗಳಲ್ಲಿನ ವ್ಯತ್ಯಾಸಗಳ ಬಗ್ಗೆ ತನಿಖೆಗೆ ಕಾಂಗ್ರೆಸ್ ಆಗ್ರಹ

ಕೆಲವು ಇವಿಎಂಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಂತಹ ಇವಿಎಂಗಳನ್ನು ತನಿಖೆಯಾಗುವವರೆಗೂ ಸೀಲ್ ಮಾಡಿ ಸುರಕ್ಷಿತ ಪ್ರದೇಶದಲ್ಲಿರಿಸಬೇಕು ಎಂದು ಕಾಂಗ್ರೆಸ್ ಆಯೋಗಕ್ಕೆ ಮನವಿ ಮಾಡಿದೆ.

ನವದೆಹಲಿ: ಹರ್ಯಾಣ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದು, ಇವಿಎಂಗಳಲ್ಲಿನ ವ್ಯತ್ಯಾಸಗಳ ಬಗ್ಗೆ ತನಿಖೆಗೆ ಆಗ್ರಹಿಸಿದೆ.

ಕೆಲವು ಇವಿಎಂಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಂತಹ ಇವಿಎಂಗಳನ್ನು ತನಿಖೆಯಾಗುವವರೆಗೂ ಸೀಲ್ ಮಾಡಿ ಸುರಕ್ಷಿತ ಪ್ರದೇಶದಲ್ಲಿರಿಸಬೇಕು ಎಂದು ಕಾಂಗ್ರೆಸ್ ಆಯೋಗಕ್ಕೆ ಮನವಿ ಮಾಡಿದೆ.

ಮಾಜಿ ಮುಖ್ಯಮಂತ್ರಿಗಳಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ಅಶೋಕ್ ಗೆಹ್ಲೋಟ್ ಮತ್ತು ಎಐಸಿಸಿ ನಾಯಕರಾದ ಕೆಸಿ ವೇಣುಗೋಪಾಲ್, ಜೈರಾಮ್ ರಮೇಶ್, ಅಜಯ್ ಮಾಕೆನ್ ಮತ್ತು ಪವನ್ ಖೇರಾ ಅವರನ್ನು ಒಳಗೊಂಡ ಕಾಂಗ್ರೆಸ್ ಉನ್ನತ ನಾಯಕರ ನಿಯೋಗ ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಜೊತೆಗೆ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ನಿಯೋಗ ಹರ್ಯಾಣದ ವಿವಿಧ ಕ್ಷೇತ್ರಗಳಿಂದ ನಿರ್ದಿಷ್ಟ ದೂರುಗಳ ಜೊತೆಗೆ ಅಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿದೆ.

ಪಕ್ಷದ ಹಿರಿಯ ನಾಯಕ ಅಭಿಷೇಕ್ ಸಿಂಘ್ವಿ ಆನ್‌ಲೈನ್‌ನಲ್ಲಿ ಸಭೆ ಸೇರಿದರು. ಹಲವು ವಿಧಾನಸಭಾ ಕ್ಷೇತ್ರಗಳಿಂದ ಬರವಣಿಗೆಯಲ್ಲಿ ಏಳು ಸೇರಿದಂತೆ ಕನಿಷ್ಠ 20 ದೂರುಗಳಿವೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಇವಿಎಂಗಳು 99 ಪ್ರತಿಶತ ಬ್ಯಾಟರಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಉಲ್ಲೇಖಿಸಿದ್ದಾರೆ ಆದರೆ ಎಣಿಕೆಯ ಸಮಯದಲ್ಲಿ ಸರಾಸರಿ ಇವಿಎಂಗಳು 60 ರಿಂದ 70 ರಷ್ಟು ಬ್ಯಾಟರಿಯಲ್ಲಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದ್ದು ಕಂಡುಬಂದಿದೆ ಎಂದು ಕಾಂಗ್ರೆಸ್ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

IPL 2026: ಹೈದರಾಬಾದ್ ನೀಡಿದ 220 ರನ್ ಟಾರ್ಗೆಟ್ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್!

SCROLL FOR NEXT