ರತನ್ ಟಾಟಾ 
ದೇಶ

Ratan Tata ನಿಧನಕ್ಕೆ ಗಣ್ಯರ ಸಂತಾಪ; 'ದೂರದೃಷ್ಟಿಯ ವ್ಯಕ್ತಿ' ಎಂದ ಸಿಎಂ Siddaramaiah, ನಂಬಲಾಗುತ್ತಿಲ್ಲ ಎಂದ Anand Mahindra

ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹ ಟಾಟಾ ಸನ್ಸ್‌ನ ಚೇರ್ಮನ್‌ ರತನ್‌ ಟಾಟಾ ವಿಧಿವಶರಾಗಿದ್ದು, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಂಗಳೂರು: ಖ್ಯಾತ ಉದ್ಯಮಿ ರತನ್ ಟಾಟಾ ನಿಧನಕ್ಕೆ ದೇಶದ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದು, 'ದೂರದೃಷ್ಟಿಯ ವ್ಯಕ್ತಿ' ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹ ಟಾಟಾ ಸನ್ಸ್‌ನ ಚೇರ್ಮನ್‌ ರತನ್‌ ಟಾಟಾ ವಿಧಿವಶರಾಗಿದ್ದು, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

86ರ ಹರೆಯದ ರತನ್‌ ಟಾಟಾ ಅವರು ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ಸಂಜೆ ಅವರ ಆರೋಗ್ಯ ಗಂಭೀರವಾಗಿದ್ದು ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, 'ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಟಾಟಾ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದ ಐಕಾನ್ ವ್ಯಕ್ತಿ: ದ್ರೌಪದಿ ಮುರ್ಮು

ರತನ್ ಟಾಟಾ ಅವರ ನಿಧನ ಅತೀವ ದುಃಖದ ತಂದಿದ್ದು, ಭಾರತವು ಸಾಂಸ್ಥಿಕ ಬೆಳವಣಿಗೆಯನ್ನು ರಾಷ್ಟ್ರ ನಿರ್ಮಾಣದೊಂದಿಗೆ ಮತ್ತು ಶ್ರೇಷ್ಠತೆಯನ್ನು ನೀತಿಯೊಂದಿಗೆ ಸಂಯೋಜಿಸಿದ ಐಕಾನ್ ವ್ಯಕ್ತಿಯನ್ನು ಅನ್ನು ಕಳೆದುಕೊಂಡಿದೆ. ಪದ್ಮವಿಭೂಷಣ ಮತ್ತು ಪದ್ಮಭೂಷಣ ಪುರಸ್ಕೃತರಾದ ಅವರು ಶ್ರೇಷ್ಠ ಟಾಟಾ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದರು ಮತ್ತು ಹೆಚ್ಚು ಪ್ರಭಾವಶಾಲಿ ಜಾಗತಿಕ ಉಪಸ್ಥಿತಿಯನ್ನು ನೀಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.

ಉತ್ಸಾಹ ಮತ್ತು ಬದ್ಧತೆಯ ವ್ಯಕ್ತಿ: ಅಮಿತ್ ಶಾ

ರತನ್ ಟಾಟಾ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದು, 'ಹಿರಿಯ ಕೈಗಾರಿಕೋದ್ಯಮಿ ಮತ್ತು ನಿಜವಾದ ರಾಷ್ಟ್ರೀಯವಾದಿ ರತನ್ ಟಾಟಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ನಿಸ್ವಾರ್ಥವಾಗಿ ನಮ್ಮ ದೇಶದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ನಾನು ಅವರನ್ನು ಭೇಟಿಯಾದಾಗಲೆಲ್ಲಾ, ಭಾರತ ಮತ್ತು ಅದರ ಜನರ ಸುಧಾರಣೆಗೆ ಅವರು ತೋರುತ್ತಿದ್ದ ಉತ್ಸಾಹ ಮತ್ತು ಬದ್ಧತೆ ನನ್ನನ್ನು ಬೆರಗುಗೊಳಿಸಿತು. ನಮ್ಮ ದೇಶ ಮತ್ತು ಅದರ ಜನರ ಕಲ್ಯಾಣಕ್ಕಾಗಿ ಅವರ ಬದ್ಧತೆ ಲಕ್ಷಾಂತರ ಕನಸುಗಳನ್ನು ಅರಳಿಸಲು ಕಾರಣವಾಯಿತು. ರತನ್ ಟಾಟಾ ಅವರನ್ನು ಅವರ ಪ್ರೀತಿಯ ರಾಷ್ಟ್ರದಿಂದ ದೂರ ಮಾಡಲು ಸಮಯದಿಂದ ಸಾಧ್ಯವಿಲ್ಲ. ಅವರು ನಮ್ಮ ಹೃದಯದಲ್ಲಿ ವಾಸಿಸುತ್ತಾರೆ. ಟಾಟಾ ಗ್ರೂಪ್ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ರತನ್ ಟಾಟಾ ದೂರದೃಷ್ಟಿ ಹೊಂದಿದ ವ್ಯಕ್ತಿ. ಅವರು ವ್ಯಾಪಾರ ಮತ್ತು ಲೋಕೋಪಕಾರ ಎರಡರಲ್ಲೂ ಶಾಶ್ವತವಾದ ಗುರುತು ಬಿಟ್ಟಿದ್ದಾರೆ. ಅವರ ಕುಟುಂಬ ಮತ್ತು ಟಾಟಾ ಸಮುದಾಯಕ್ಕೆ ನನ್ನ ಸಂತಾಪಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರತನ್ ಟಾಟಾ ಅವರ ನಿಧನದಿಂದ ನಾವು ಭಾರತದ ಅಮೂಲ್ಯ ಪುತ್ರನನ್ನು ಕಳೆದುಕೊಂಡಿದ್ದೇವೆ. ಭಾರತದ ಅಂತರ್ಗತ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವರ ಬದ್ಧತೆಯು ಅತ್ಯುನ್ನತವಾಗಿ ಉಳಿದಿರುವ ಪರೋಪಕಾರಿ ಸರ್ವೋತ್ಕೃಷ್ಟತೆ, ಟಾಟಾ ಅವರು ನಿಸ್ಸಂದಿಗ್ಧವಾದ ಸಮಗ್ರತೆ ಮತ್ತು ನೈತಿಕ ನಾಯಕತ್ವಕ್ಕೆ ಸಮಾನಾರ್ಥಕರಾಗಿದ್ದರು. ಅವರು ಲಕ್ಷಾಂತರ ಜನರಿಗೆ ಸ್ಫೂರ್ತಿ ಮತ್ತು ಐಕಾನ್ ಆಗಿದ್ದರು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಮೃದ್ಧವಾಗಿ ಕೊಡುಗೆ ನೀಡಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.

ಲೋಕೋಪಕಾರಿ ರತನ್ ಟಾಟಾ ಎಂದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ

ರತನ್ ಟಾಟಾ ಅವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಲೋಕೋಪಕಾರಿ ಮತ್ತು ಕೈಗಾರಿಕೋದ್ಯಮಿಯಾಗಿ ಅವರ ಪರಂಪರೆಯು ಅಸಂಖ್ಯಾತ ಜೀವನ ಮತ್ತು ಸಮುದಾಯಗಳನ್ನು ಆಳವಾಗಿ ಪ್ರಭಾವಿಸಿದೆ. ಅವರ ದೂರದೃಷ್ಟಿ, ಸಹಾನುಭೂತಿ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅಚಲವಾದ ಸಮರ್ಪಣೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ನಂಬಲಾಗುತ್ತಿಲ್ಲ: ಉದ್ಯಮಿ ಆನಂದ್ ಮಹೀಂದ್ರ

ರತನ್ ಟಾಟಾ ನಿಧನಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಆಘಾತ ವ್ಯಕ್ತಪಡಿಸಿದ್ದು, ರತನ್ ಟಾಟಾ ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ರತನ್ ಟಾಟಾ ಅವರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಭಾರತದ ಆರ್ಥಿಕತೆಯು ಐತಿಹಾಸಿಕ ಪ್ರಗತಿಯ ತುದಿಯಲ್ಲಿ ನಿಂತಿದೆ. ರತನ್ ಅವರ ಜೀವನ ಮತ್ತು ಕೆಲಸವು ನಾವು ಈ ಸ್ಥಾನದಲ್ಲಿರುವುದರೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಈ ಸಮಯದಲ್ಲಿ ಅವರ ಮಾರ್ಗದರ್ಶನ ಮತ್ತು ಮಾರ್ಗದರ್ಶನ ಅಮೂಲ್ಯವಾದುದು. ಅವರು ಹೋದ ನಂತರ, ನಾವು ಮಾಡಬಹುದಾದ ಎಲ್ಲಾ ಅವರ ಮಾದರಿಯನ್ನು ಅನುಕರಿಸಲು ಬದ್ಧರಾಗಿದ್ದೇವೆ. ಏಕೆಂದರೆ ಅವರು ಉದ್ಯಮಿಯಾಗಿದ್ದರು. ಅವರು ಆರ್ಥಿಕ ಸಂಪತ್ತು ಮತ್ತು ಯಶಸ್ಸನ್ನು ಜಾಗತಿಕ ಸಮುದಾಯದ ಸೇವೆಗೆ ಹಾಕಿದ ಉದಾತ್ತ ವ್ಯಕ್ತಿಯಾಗಿದ್ದರು. ದಂತಕಥೆಗಳು ಎಂದಿಗೂ ಸಾಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ದೈತ್ಯನ ಅಗಲಿಕೆ ನೋವು ತಂದಿದೆ: ಗೌತಮ್ ಅದಾನಿ

ಭಾರತವು ಒಬ್ಬ ದೈತ್ಯನನ್ನು ಕಳೆದುಕೊಂಡಿದೆ, ಆಧುನಿಕ ಭಾರತದ ಹಾದಿಯನ್ನು ಮರು ವ್ಯಾಖ್ಯಾನಿಸಿದ ದಾರ್ಶನಿಕ. ರತನ್ ಟಾಟಾ ಅವರು ಕೇವಲ ವ್ಯಾಪಾರದ ನಾಯಕರಾಗಿರಲಿಲ್ಲ. ಅವರು ಸಮಗ್ರತೆ, ಸಹಾನುಭೂತಿ ಮತ್ತು ಹೆಚ್ಚಿನ ಒಳಿತಿಗಾಗಿ ಅಚಲವಾದ ಬದ್ಧತೆಯೊಂದಿಗೆ ಭಾರತದ ಆತ್ಮವನ್ನು ಸಾಕಾರಗೊಳಿಸಿದರು. ಅವರಂತಹ ದಂತಕಥೆಗಳು ಎಂದಿಗೂ ಮರೆಯಾಗುವುದಿಲ್ಲ ಎಂದು ಉದ್ಯಮಿ ಗೌತಮ್ ಅದಾನಿ ಟ್ವೀಟ್ ಮಾಡಿದ್ದಾರೆ.

ರತನ್ ಟಾಟಾ ಹೆಜ್ಜೆ ಗುರುತು ಅಜರಾಮರ: ಬಿವೈ ವಿಜಯೇಂದ್ರ

ಇನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ರತನ್ ಟಾಟಾ ವಿಧಿವಶಕ್ಕೆ ಸಂತಾಪ ಸೂಚಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಅವರು, ರತನ್ ಟಾಟಾ ಹೆಜ್ಜೆ ಗುರುತು ಅಜರಾಮರ ಎಂದು ಹೇಳಿದ್ದಾರೆ.

'ಕೆಲವರು ಕಾಲದ ಮರಳಿನ ಮೇಲೆ ಹೆಜ್ಜೆಗುರುತುಗಳನ್ನು ಬಿಡುತ್ತಾರೆ. ರತನ್ ಟಾಟಾ ಅವರು ನಮ್ಮ ರಾಷ್ಟ್ರದ ರಚನೆಯ ಮೇಲೆ ಅವರ ಹೆಜ್ಜೆ ಗುರುತನ್ನು ಬಿಟ್ಟಿದ್ದಾರೆ. ದೂರದೃಷ್ಟಿಯ ವ್ಯಾಪಾರ ನಾಯಕ, ಸಹಾನುಭೂತಿಯ ಆತ್ಮ ಮತ್ತು ಅಸಾಧಾರಣ ಮನುಷ್ಯ, ರತನ್ ಟಾಟಾ ಅವರು ದೊಡ್ಡ ಕನಸುಗಳನ್ನು ಕಾಣಲು ಮತ್ತು ಹಿಂತಿರುಗಿಸಲು ಸಮರ್ಪಿತರಾಗಿದ್ದರು. ವ್ಯಾಪಾರ, ಪರೋಪಕಾರ ಮತ್ತು ನಮ್ರತೆಯಲ್ಲಿ ಅವರ ಪರಂಪರೆ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು. ಓಂ ಶಾಂತಿ ಎಂದು ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

SCROLL FOR NEXT