27 ಮಾರ್ಚ್, 2021 ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಬಾಂಗ್ಲಾದೇಶದ ಸತ್ಖಿರಾದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನ 
ದೇಶ

ಬಾಂಗ್ಲಾದೇಶದ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ ಕಿರೀಟ ಕಳ್ಳತನ: ಭಾರತ ತೀವ್ರ ಕಳವಳ

ಪ್ರಧಾನಿ ಮೋದಿ ಅವರು ದೇವಾಲಯದ ಸಂಕೀರ್ಣದಲ್ಲಿ ಸಮುದಾಯ ಭವನ ಮತ್ತು ಚಂಡಮಾರುತದಿಂದ ಕಾಪಾಡುವ ಆಶ್ರಯ ನೆಲೆಯನ್ನು ನಿರ್ಮಿಸಲು ಅನುದಾನವನ್ನು ಘೋಷಿಸಿದ್ದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನೇಪಾಳದ ದೇವಸ್ಥಾನವೊಂದಕ್ಕೆ ಉಡುಗೊರೆಯಾಗಿ ನೀಡಿದ್ದ ಕಿರೀಟ ಕಳ್ಳತನವಾಗಿರುವ ಬಗ್ಗೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಕಳವಳ ವ್ಯಕ್ತಪಡಿಸಿದೆ.

2021 ರಲ್ಲಿ ಪ್ರಧಾನಿ ಮೋದಿಯವರು ತಮ್ಮ ಢಾಕಾ ಭೇಟಿಯ ಸಂದರ್ಭದಲ್ಲಿ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ (ಸತ್ಖಿರಾ) ಉಡುಗೊರೆಯಾಗಿ ನೀಡಿದ್ದ ಕಿರೀಟದ ಕಳ್ಳತನವಾಗಿದೆ ಎಂಬ ವಿಷಯ ಕೇಳಿ ತೀವ್ರ ಬೇಸರವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ದುಷ್ಕರ್ಮಿಗಳನ್ನು ಪತ್ತೆಹಚ್ಚುವಂತೆ ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಿಳಿ ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ದೇವಸ್ಥಾನದೊಳಗೆ ಕಾಲಿಟ್ಟಿದ್ದು, ತನ್ನ ಟಿ ಶರ್ಟ್‌ನಲ್ಲಿ ಸಿಕ್ಕಿಸಿಕೊಂಡಿದ್ದ ಕಿರೀಟವನ್ನು ತೆಗೆದ ನಂತರ ಗರ್ಭಗುಡಿಯಿಂದ ದೇವಾಲಯ ಆವರಣ ಮೂಲಕ ಹೊರನಡೆದಿದ್ದಾನೆ. ಮೊನ್ನೆ ಅಕ್ಟೋಬರ್ 10 ರಂದು ಕಳ್ಳತನ ನಡೆದಿದೆ ಎನ್ನಲಾಗಿದೆ.

ಪ್ರಧಾನಿ ಮೋದಿ ಅವರು ಮಾರ್ಚ್ 26-27, 2021 ರಂದು ಬಾಂಗ್ಲಾದೇಶಕ್ಕೆ ತಮ್ಮ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಅವರು ಕಾಳಿ ದೇವಿಗೆ ಸಮರ್ಪಿತವಾದ ದೇವಾಲಯ ಮತ್ತು ಪುರಾಣ ಸಂಪ್ರದಾಯದ 51 ಶಕ್ತಿಪೀಠಗಳಲ್ಲಿ ಒಂದಾದ ಸತ್ಖಿರಾದಲ್ಲಿನ ಶತಮಾನಗಳಷ್ಟು ಹಳೆಯದಾದ ಜೆಶೋರೇಶ್ವರಿ ಕಾಳಿ ಶಕ್ತಿಪೀಠದಲ್ಲಿ ಪೂಜೆ ಸಲ್ಲಿಸಿದ್ದರು.

ಪಿಎಂ ಮೋದಿ ಅವರು ಇದೇ ವೇಳೆ ಕೈಯಿಂದ ಮಾಡಿದ ಕಿರೀಟ ಅಥವಾ ಬೆಳ್ಳಿಯ ಮುಕುಟವನ್ನು ಚಿನ್ನದ ಲೇಪನವನ್ನು ದೇವಿಯ ಬಳಿ ಇರಿಸಿದ್ದರು, ಇದನ್ನು ಸ್ಥಳೀಯ ಕುಶಲಕರ್ಮಿಗಳು ಮೂರು ವಾರಗಳಲ್ಲಿ ವಿಗ್ರಹದ ಮೇಲೆ ರಚಿಸಿದ್ದರು.

ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ದೇವಾಲಯದ ಸಂಕೀರ್ಣದಲ್ಲಿ ಸಮುದಾಯ ಭವನ ಮತ್ತು ಚಂಡಮಾರುತದಿಂದ ಕಾಪಾಡುವ ಆಶ್ರಯ ನೆಲೆಯನ್ನು ನಿರ್ಮಿಸಲು ಅನುದಾನವನ್ನು ಘೋಷಿಸಿದ್ದರು. ಈ ಆಶ್ರಯವು ಹವಾಮಾನ ಪ್ರತಿಕೂಲತೆಯ ವಿರುದ್ಧ ಹೋರಾಡುತ್ತದೆ ಮತ್ತು ಪೂಜಾ ಸ್ಥಳವಾಗಿಯೂ ಕಾರ್ಯನಿರ್ವಹಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT