ಫಿರೋಜ್ ಪುರ: ಪಂಜಾಬ್ ನ ಫಿರೋಜ್ ಪುರದ ಗಡಿಯಲ್ಲಿ ಪಿಸ್ತೂಲ್ ಮತ್ತು ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ವೊಂದನ್ನು ಗಡಿ ಭದ್ರತಾ ಪಡೆಯ ಯೋಧರು ಹೂಡೆದುರುಳಿಸಿದ್ದಾರೆ.
ಶುಕ್ರವಾರ ಭಾರತ-ಪಾಕಿಸ್ತಾನ ಗಡಿಯಲ್ಲಿನ ಗಡಿ ಪ್ರದೇಶದಲ್ಲಿ ಡ್ರೋನ್ ತಡೆದ ನಂತರ ಬಿಎಸ್‌ಎಫ್ ಪಡೆಗಳು ತಾಂತ್ರಿಕ ಪ್ರತಿಕ್ರಮದಿಂದ ಡ್ರೋನ್ ಹೊಡೆದುರುಳಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಡ್ರೋನ್ ನಿಂದ 500 ಗ್ರಾಂ ತೂಕದ ಹೆರಾಯಿನ್ ಪ್ಯಾಕೆಟ್ ಮತ್ತು ಒಂದು ಪಿಸ್ತೂಲ್ ಹಾಗೂ ಮ್ಯಾಗಜಿನ್ ವೊಂದನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ಪಂಜಾಬ್ ಜಿಲ್ಲೆಯ ತರನ್ ತರನ್ ಜಿಲ್ಲೆಯಲ್ಲಿ 13 ಕಿಲೋ ಗ್ರಾಂ ನಷ್ಟು ಹೆರಾಯಿನ್ ನ್ನು ಬಿಎಸ್ ಎಫ್ ವಶಕ್ಕೆ ಪಡೆದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ಟೋಬರ್ 7 ರಂದು ಅಮೃತರ ಜಿಲ್ಲೆಯ ರತನ್ಖುರ್ದ್ ಗ್ರಾಮದಲ್ಲಿ ಪ್ಲಾಸ್ಟಿಕ್ ಕಂಟೈನರ್ ನಲ್ಲಿ ಅಂದಾಜು 560 ಗ್ರಾಂ ಹೆರಿಯಿನ್ ನ್ನು ಗಡಿ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.