ಸಂಗ್ರಹ ಚಿತ್ರ TNIE
ದೇಶ

ಪ್ಯಾಲೆಸ್ತೀನ್, ಸಿರಿಯಾ ಮತ್ತು ಮ್ಯಾನ್ಮಾರ್ ಸೇರಿದಂತೆ ಬ್ರಿಕ್ಸ್ ಸದಸ್ಯತ್ವಕ್ಕಾಗಿ 34 ದೇಶಗಳು ಅರ್ಜಿ!

ಸಂಘರ್ಷ ಪೀಡಿತ ರಾಷ್ಟ್ರಗಳಾದ ಪ್ಯಾಲೆಸ್ತೀನ್, ಸಿರಿಯಾ ಮತ್ತು ಮ್ಯಾನ್ಮಾರ್ ಕೂಡ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು ಒಮ್ಮತದ ಅಭಿಪ್ರಾಯ ನಂತರ ಘೋಷಣೆ ಮಾಡಲಾಗುತ್ತದೆ.

ನವದೆಹಲಿ: ಬ್ರಿಕ್ಸ್ ಸದಸ್ಯತ್ವಕ್ಕಾಗಿ 34 ದೇಶಗಳು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದು ಅಕ್ಟೋಬರ್ 22 ಮತ್ತು ಅಕ್ಟೋಬರ್ 24ರ ನಡುವೆ ಕಜಾನ್‌ನಲ್ಲಿ ನಡೆಯಲಿರುವ ಮುಂಬರುವ ಬ್ರಿಕ್ಸ್ ಶೃಂಗಸಭೆಯಲ್ಲಿ 10 ಹೊಸ ಸದಸ್ಯರು ಮತ್ತು 10 ಪಾಲುದಾರರನ್ನು ಘೋಷಿಸಲಾಗುತ್ತದೆ.

ಸಂಘರ್ಷ ಪೀಡಿತ ರಾಷ್ಟ್ರಗಳಾದ ಪ್ಯಾಲೆಸ್ತೀನ್, ಸಿರಿಯಾ ಮತ್ತು ಮ್ಯಾನ್ಮಾರ್ ಕೂಡ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು ಒಮ್ಮತದ ಅಭಿಪ್ರಾಯ ನಂತರ ಘೋಷಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮೂರು ತಿಂಗಳ ಅವಧಿಯಲ್ಲಿ ರಷ್ಯಾಕ್ಕೆ ಅವರ ಎರಡನೇ ಭೇಟಿಯಾಗಲಿದೆ. ಮೋದಿ ಇತರ ಸದಸ್ಯರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ಪ್ರಸ್ತುತ, ಟರ್ಕಿ ಮತ್ತು ಥೈಲ್ಯಾಂಡ್‌ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಆದಾಗ್ಯೂ, ಶೃಂಗಸಭೆಯ ಬದಿಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂಬ ಊಹಾಪೋಹಗಳು ಹರಡಿವೆ.

ಹೊಸ ಸದಸ್ಯರಾಗಿ ಪರಿಗಣಿಸಲು ಸುಮಾರು 34 ದೇಶಗಳ ಜೊತೆ ಬ್ರಿಕ್ಸ್ ಚರ್ಚೆ ನಡೆಸಿವೆ. ಇವುಗಳಲ್ಲಿ ಅಲ್ಜೀರಿಯಾ, ಅಜೆರ್ಬೈಜಾನ್, ಬಹ್ರೇನ್, ಬಾಂಗ್ಲಾದೇಶ, ಬೆಲಾರಸ್, ಬೊಲಿವಿಯಾ, ಕ್ಯೂಬಾ, ಚಾಡ್, ರಿಪಬ್ಲಿಕ್ ಆಫ್ ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೊಂಡುರಾಸ್, ಇಂಡೋನೇಷಿಯಾ, ಕಝಾಕಿಸ್ತಾನ್ ಸೇರಿವೆ. ಕುವೈತ್, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಮೊರಾಕೊ, ನಿಕರಾಗುವಾ, ನೈಜೀರಿಯಾ, ಪಾಕಿಸ್ತಾನ, ಸೆನೆಗಲ್, ದಕ್ಷಿಣ ಸುಡಾನ್, ಶ್ರೀಲಂಕಾ, ಪ್ಯಾಲೆಸ್ಟೈನ್ ರಾಜ್ಯ, ಸಿರಿಯಾ, ಥೈಲ್ಯಾಂಡ್, ಟರ್ಕಿ, ಉಗಾಂಡಾ, ಉಜ್ಬೇಕಿಸ್ತಾನ್, ವೆನೆಜುವೆಲಾ, ವಿಯೆಟ್ನಾಂ ಮತ್ತು ಜಿಂಬಾಬ್ವೆ ಅರ್ಜಿ ಸಲ್ಲಿಸಿವೆ.

ಬ್ರಿಕ್ಸ್‌ನ ಪ್ರಸ್ತುತ ಹತ್ತು ಸದಸ್ಯ ರಾಷ್ಟ್ರಗಳು ಯಾವುವೆಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಸೌದಿ ಅರೇಬಿಯಾ. ಏತನ್ಮಧ್ಯೆ, ಮುಂಬರುವ ಶೃಂಗಸಭೆಯಲ್ಲಿ ಸುಮಾರು 24 ರಾಷ್ಟ್ರಗಳ ನಾಯಕರು ಭಾಗವಹಿಸುವ ಸಾಧ್ಯತೆಯಿದೆ ಎಂದು ಕ್ರೆಮ್ಲಿನ್ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT