ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ 
ದೇಶ

ಮುಂಬೈ ಪ್ರವೇಶಿಸುವ ಲಘು ವಾಹನಗಳಿಗೆ ಟೋಲ್ ಇಲ್ಲ: ವಿಧಾನಸಭೆ ಚುನಾವಣೆಗೂ ಮುನ್ನ ಮಹಾರಾಷ್ಟ್ರ ಸಿಎಂ ಘೋಷಣೆ

ಇಂದು ಬೆಳಗ್ಗೆ ಮುಂಬೈನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಟೋಲ್ ವಿನಾಯಿತಿ ನಿರ್ಧಾರಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.

ಮುಂಬೈ: ಅಕ್ಟೋಬರ್ 14 ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಎಲ್ಲಾ ಐದು ಟೋಲ್ ಬೂತ್‌ಗಳಲ್ಲಿ ಮುಂಬೈ ಪ್ರವೇಶಿಸುವ ಲಘು ಮೋಟಾರು ವಾಹನಗಳಿಗೆ ಸಂಪೂರ್ಣ ಟೋಲ್ ವಿನಾಯಿತಿಯನ್ನು ಮಹಾರಾಷ್ಟ್ರ ಸರ್ಕಾರ ಸೋಮವಾರ ಘೋಷಿಸಿದೆ.

ಇಂದು ಬೆಳಗ್ಗೆ ಮುಂಬೈನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಟೋಲ್ ವಿನಾಯಿತಿ ನಿರ್ಧಾರಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಟೋಲ್ ಬೂತ್‌ಗಳಲ್ಲಿ ಟ್ರಾಫಿಕ್ ಜಾಮ್‌ ಆಗುತ್ತಿದ್ದು, ಟೋಲ್ ರದ್ದುಗೊಳಿಸುವ ಬೇಡಿಕೆ ಇತ್ತು ಎಂದರು.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಈ ಕ್ರಮ ಕೈಗೊಳ್ಳಲಾಗಿದ್ದು, ಟೋಲ್ ವಿನಾಯಿತಿ ದೀಪಾವಳಿಗೆ ಮುಂಚಿತವಾಗಿ ಮುಂಬೈಗೆ ಬರುವ ಮತ್ತು ಹೊರಗೆ ಪ್ರಯಾಣಿಸುವ ಜನರಿಗೆ ಅನುಕೂಲವಾಗುತ್ತದೆ.

ಪ್ರಯಾಣಿಕರು ಐದು ಬೂತ್‌ಗಳಾದ ದಹಿಸರ್, ಎಲ್‌ಬಿಎಸ್ ರಸ್ತೆ-ಮುಲುಂಡ್, ಈಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ-ಮುಲುಂಡ್, ಐರೋಲಿ ಕ್ರೀಕ್ ಸೇತುವೆ ಮತ್ತು ವಾಶಿಯಲ್ಲಿ ಟೋಲ್ ಪಾವತಿಸದೆ ಪ್ರಯಾಣಿಸಬಹುದು.

ಲಘು ಮೋಟಾರು ವಾಹನಗಳಲ್ಲಿ ಕಾರುಗಳು(ಹ್ಯಾಚ್‌ಬ್ಯಾಕ್‌ಗಳು, ಸೆಡಾನ್‌ಗಳು ಮತ್ತು SUVಗಳು), ಜೀಪ್‌ಗಳು, ವ್ಯಾನ್‌ಗಳು, ಆಟೋ-ರಿಕ್ಷಾಗಳು, ಟ್ಯಾಕ್ಸಿಗಳು, ಡೆಲಿವರಿ ವ್ಯಾನ್‌ಗಳು ಮತ್ತು ಸಣ್ಣ ಟ್ರಕ್‌ಗಳು ಸೇರಿವೆ.

ಪ್ರತಿದಿನ ಆರು ಲಕ್ಷಕ್ಕೂ ಹೆಚ್ಚು ವಾಹನಗಳು ಮುಂಬೈ ಟೋಲ್ ಬಳಸುತ್ತಿದ್ದು, ಅದರಲ್ಲಿ ಶೇ.80 ರಷ್ಟು ಲಘು ಮೋಟಾರು ವಾಹನಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೋಲ್ ವಿನಾಯಿತಿ ಕ್ರಮದಿಂದ ಸಮಯ, ಇಂಧನವನ್ನು ಉಳಿಸುತ್ತದೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಿಎಂ ಶಿಂಧೆ ಹೇಳಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದ, ಈ ಟೋಲ್ ವಿನಾಯಿತಿ ನಿರ್ಧಾರ ಎಲೆಕ್ಷನ್ ಗಿಮಿಕ್ ಎಂದು ವಿಪಕ್ಷಗಳು ಟೀಕಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!