ದೇಶ

ಮನಕಲಕುವ ದೃಶ್ಯ: ಮಗನಿಗೆ ಥಳಿಸದಂತೆ ತಂದೆ-ತಾಯಿ ಪರಿಪರಿಯಾಗಿ ಬೇಡಿಕೊಂಡರು ಹೊಡೆದು ಕೊಂದ ದುರುಳರು; ವಿಡಿಯೋ!

ಶನಿವಾರದಂದು ದಸರಾ ಆಚರಣೆಗಾಗಿ ಹೊಸ ಕಾರು ಖರೀದಿಸಲು ಮೈನ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮಲಾಡ್ ರೈಲು ನಿಲ್ದಾಣದ ಬಳಿ ಆಟೋವೊಂದು ಅವರ ಕಾರನ್ನು ಹಿಂದಿಕ್ಕಿತು. ನಂತರ ಆಕಾಶ್ ಮತ್ತು ರಿಕ್ಷಾ ಚಾಲಕನ ನಡುವೆ ವಾಗ್ವಾದ ನಡೆಯಿತು.

ಮುಂಬೈನ ಪಶ್ಚಿಮ ಉಪನಗರ ಮಲಾಡ್ ಪೂರ್ವದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತನ ಮಗನನ್ನು ಹತ್ಯೆ ಮಾಡಲಾಗಿದ್ದು, ಇದು ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಪ್ರಕರಣದ ಪೊಲೀಸ್ ತನಿಖೆಯ ಬಗ್ಗೆ ಎಂಎನ್ಎಸ್ ಪ್ರಶ್ನೆಗಳನ್ನು ಎತ್ತಿದೆ. ಮಲಾಡ್ ಪೂರ್ವದ ದಿಂಡೋಶಿ ಪ್ರದೇಶದ ಎಂಎನ್‌ಎಸ್ ಕಾರ್ಯಕರ್ತನ ಮಗ ಆಕಾಶ್ ಮೈನ್ (27) ನನ್ನು ರಿಕ್ಷಾ ಚಾಲಕರು ಮತ್ತು ಸ್ಥಳೀಯ ಮಾರಾಟಗಾರರು ಹೊಡೆದು ಕೊಂದಿದ್ದಾರೆ.

ಶನಿವಾರದಂದು ದಸರಾ ಆಚರಣೆಗಾಗಿ ಹೊಸ ಕಾರು ಖರೀದಿಸಲು ಮೈನ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮಲಾಡ್ ರೈಲು ನಿಲ್ದಾಣದ ಬಳಿ ಆಟೋವೊಂದು ಅವರ ಕಾರನ್ನು ಹಿಂದಿಕ್ಕಿತು. ನಂತರ ಆಕಾಶ್ ಮತ್ತು ರಿಕ್ಷಾ ಚಾಲಕನ ನಡುವೆ ವಾಗ್ವಾದ ನಡೆಯಿತು. ಬಳಿಕ ಪರಿಸ್ಥಿತಿ ಕೈ ಮೀರಿದ್ದು ರಿಕ್ಷಾ ಚಾಲಕನು ತನ್ನ ಸ್ನೇಹಿತರು ಮತ್ತು ಸ್ಥಳೀಯ ಮಾರಾಟಗಾರರೊಂದಿಗೆ ಸೇರಿಕೊಂಡು MNS ಕಾರ್ಯಕರ್ತನ ಮಗನ ಮೇಲೆ ಹಲ್ಲೆ ಮಾಡಿದ್ದರು.

ಗುಂಪು ಆಕಾಶ್ ಮೈನ್ ನನ್ನು ಮಾರಣಾಂತಿಕವಾಗಿ ಥಳಿಸಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮನಕಲಕುವ ದೃಶ್ಯವೊಂದು ಗೋಚರಿಸುತ್ತಿದೆ. ವೀಡಿಯೋದಲ್ಲಿ ಜನಸಮೂಹವು ಆಕಾಶ್ ನನ್ನು ಮನಬಂದಂತೆ ನಿರಂತರವಾಗಿ ಥಳಿಸುತ್ತಿದೆ.

ವಿಡಿಯೋದಲ್ಲಿ ಮಗನನ್ನು ರಕ್ಷಿಸಿಕೊಳ್ಳಲು ಆತನ ತಾಯಿ ಅವನ ಮೇಲೆ ಮಲಗಿರುವುದನ್ನು ಕಾಣಬಹುದು,. ಇದೇ ವೇಳೆ ಇಬ್ಬರು ಮೂವರು ಅಪರಿಚಿತರು ಆತನ ತಂದೆಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ತಂದೆ ಕೈಮುಗಿದು ಕ್ಷಮೆ ಕೇಳುತ್ತಾನೆ ಮತ್ತು ಅವನನ್ನು ಹೋಗಲು ಬಿಡುವಂತೆ ವಿನಂತಿಸುತ್ತಾನೆ.

ಜನರು ಆಕಾಶ್‌ನನ್ನು ಥಳಿಸುತ್ತಿದ್ದಾಗ, ಅವನ ಪೋಷಕರು ಅವನನ್ನು ಉಳಿಸುವಂತೆ ಜನರಲ್ಲಿ ಮನವಿ ಮಾಡುತ್ತಿದ್ದರೂ ಆರೋಪಿಗಳು ಅವರ ಮಾತನ್ನು ಕೇಳಲಿಲ್ಲ. ಆರೋಪಿ ಆಟೋ ರಿಕ್ಷಾ ಚಾಲಕ ಕದಮ್ ಮತ್ತು ಇತರ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಕ್ಟೋಬರ್ 12ರಂದು ಈ ಘಟನೆ ನಡೆದಿದ್ದು, ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್