ಪ್ಯಾಂಗಾಂಗ್ ಲೇಕ್ ಬಳಿ ಚೀನಾದ ನೆಲೆ  online desk
ದೇಶ

ಸ್ಯಾಟಲೈಟ್ ಚಿತ್ರಗಳು: ಪ್ಯಾಂಗಾಂಗ್ ಲೇಕ್ ಬಳಿ ಚೀನಾದ ಹೊಸ ನೆಲೆ, ಬೇರೆಲ್ಲಾ ಜಾಗಗಳಿಗಿಂತ ಭಿನ್ನ

ಈ ವರದಿಯಲ್ಲಿ ಪ್ರಕಟವಾದ ಚಿತ್ರಗಳಲ್ಲಿರುವ ಪ್ರಶ್ನಾರ್ಹ ಪ್ರದೇಶ, LAC ಯಿಂದ ಪೂರ್ವಕ್ಕೆ 36 ಕಿಲೋಮೀಟರ್ ದೂರದಲ್ಲಿ ಚೀನಾ ಹೊಂದಿರುವ ಭೂಪ್ರದೇಶದಲ್ಲಿದೆ.

ಪ್ಯಾಂಗೋಂಗ್: ಪ್ಯಾಂಗೊಂಗ್ ಸರೋವರದ ಉತ್ತರ ದಡದಲ್ಲಿ ಚೀನಾದ ಹೊಸ ನೆಲೆ ಉಪಗ್ರಹದ ಕಣ್ಣಿಗೆ ಬಿದ್ದಿದೆ. ಈ ಉಪಗ್ರಹ ಚಿತ್ರವನ್ನು ವಿಶ್ಲೇಷಿಸಿರುವ ಹಿರಿಯ ಭಾರತೀಯ ಸೇನಾ ಮೂಲಗಳು, ಈ ತಾಣ, ಚೀನಾದ ಬದಿಯಲ್ಲಿರುವ ಎನ್ಎಸಿ ಯ ಯಾವುದೇ ಬೇರೆ ಪ್ರದೇಶಕ್ಕಿಂತ ಭಿನ್ನವಾಗಿದೆ" ಎಂದು ಹೇಳಿದೆ.

ಈ ವರದಿಯಲ್ಲಿ ಪ್ರಕಟವಾದ ಚಿತ್ರಗಳಲ್ಲಿರುವ ಪ್ರಶ್ನಾರ್ಹ ಪ್ರದೇಶ, LAC ಯಿಂದ ಪೂರ್ವಕ್ಕೆ 36 ಕಿಲೋಮೀಟರ್ ದೂರದಲ್ಲಿ ಚೀನಾ ಹೊಂದಿರುವ ಭೂಪ್ರದೇಶದಲ್ಲಿದೆ. ಇದು ಲಡಾಖ್‌ನ ಎತ್ತರದ ಪ್ಯಾಂಗೊಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ನಿರ್ಮಿಸಿದ ಹೊಸ ಸೇತುವೆಯ ಪೂರ್ವಕ್ಕೆ ಸರಿಸುಮಾರು 15 ಕಿಮೀ ದೂರದಲ್ಲಿದೆ ಮತ್ತು ಈ ಹಿಂದೆ ಆಕ್ರಮಿಸದಿರುವ ನೈಜ ನಿಯಂತ್ರಣ ರೇಖೆಯ ಸಮೀಪವಿರುವ ಪ್ರದೇಶಗಳಲ್ಲಿ ಒತ್ತಡವನ್ನು ಹೆಚ್ಚಿಸುವಲ್ಲಿ ಬೀಜಿಂಗ್‌ನ ಇತ್ತೀಚಿನ ಪ್ರಯತ್ನವನ್ನು ಗುರುತಿಸುತ್ತಿದೆ.

ಸೇನಾ ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಶೇ.70 ಕ್ಕಿಂತಲೂ ಹೆಚ್ಚಿನ ಶಾಶ್ವತ ರಚನೆಗಳಿದ್ದು, ಕ್ಷಿಪಣಿ ದಾಳಿಯ ಸಂಭಾವ್ಯ ಪರಿಣಾಮವನ್ನು ಕಡಿಮೆ ಮಾಡಲು ಇದನ್ನು ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಪ್ರದೇಶದಲ್ಲಿ ಚೀನಾದ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿರುವ ಸೈನಿಕರು ಮತ್ತು ಪೋರ್ಟರ್‌ಗಳಿಗೆ ಅವಕಾಶ ಕಲ್ಪಿಸುವುದು. ಮತ್ತು ಭಾರತದೊಂದಿಗೆ LAC ಉದ್ದಕ್ಕೂ ಸ್ಥಳಗಳಿಗೆ ಸಂಭಾವ್ಯ ವರ್ಗಾವಣೆಗಾಗಿ ಲಾಜಿಸ್ಟಿಕ್ಸ್ ನ್ನು ಸಂಗ್ರಹಿಸಲು ಸೌಲಭ್ಯವನ್ನು ಕಲ್ಪಿಸುವುದು ಈ ನಿರ್ಮಾಣಗಳ ಪ್ರಾಥಮಿಕ ಕಾರ್ಯಗಳಾಗಿವೆ, "ಪ್ರತಿ ರಚನೆಯು 6-8 ಸೈನಿಕರು ಅಥವಾ 10 ಟನ್ಗಳಷ್ಟು ಲಾಜಿಸ್ಟಿಕ್ಸ್ ಗೆ ಅವಕಾಶ ಕಲ್ಪಿಸುತ್ತದೆ" ಎಂದು ಮಿಲಿಟರಿ ತಜ್ಞರು ಹೇಳಿದ್ದಾರೆ.

ಏಪ್ರಿಲ್ 2022 ರಲ್ಲಿ, ಈ ಪ್ರದೇಶ ಖಾಲಿಯಾಗಿತ್ತು. ನಿರ್ಮಾಣ ಮಾರ್ಚ್ 2024 ರಲ್ಲಿ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT