ಸುಪ್ರೀಂ ಕೋರ್ಟ್‌ 
ದೇಶ

Assam: ವಲಸಿಗರಿಗೆ ಪೌರತ್ವ; ಸೆಕ್ಷನ್ 6A ಸಿಂಧುತ್ವ ಎತ್ತಿಹಿಡಿದ Supreme Court

5 ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಳೆದ ವರ್ಷ ಡಿಸೆಂಬರ್ 12 ರಂದು ಪ್ರಕರಣದ ವಿಚಾರಣೆಯ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ನವದೆಹಲಿ: ಅಸ್ಸಾಂ ವಲಸಿಗರಿಗೆ ಪೌರತ್ವ ನೀಡುವ 1955ರ ಪೌರತ್ವ ಕಾಯ್ದೆಯ ಸೆಕ್ಷನ್‌ 6A ದ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಗುರುವಾರ ಎತ್ತಿ ಹಿಡಿದಿದೆ.

ಹೌದು.. ಅಸ್ಸಾಂ ಪೌರತ್ವ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ. ಅಸ್ಸಾಂನಲ್ಲಿನ ನಿರ್ದಿಷ್ಟ ವಲಸಿಗರಿಗೆ ಪೌರತ್ವವನ್ನು ನೀಡುವ ನಿಬಂಧನೆಯಾದ ಪೌರತ್ವ ಕಾಯ್ದೆಯ ಸೆಕ್ಷನ್ 6A ಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಿಂದ ಈ ಮಹತ್ವದ ನಿರ್ಧಾರ ಹೊರಬಿದ್ದಿದ್ದು, 4:1ರ ಬಹುಮತದೊಂದಿಗೆ ಸೆಕ್ಷನ್ ಪರವಾಗಿ ತೀರ್ಪು ನೀಡಿದೆ.

ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮಾತ್ರ ಬಹುಮತದ ನಿರ್ಧಾರವನ್ನು ಒಪ್ಪಲಿಲ್ಲ. 5 ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಳೆದ ವರ್ಷ ಡಿಸೆಂಬರ್ 12 ರಂದು ಪ್ರಕರಣದ ವಿಚಾರಣೆಯ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

1985 ರಲ್ಲಿ ಅಸ್ಸಾಂ ಒಪ್ಪಂದದ ನಂತರ ಸೆಕ್ಷನ್ 6A ಅನ್ನು ಪೌರತ್ವ ಕಾಯ್ದೆಯಲ್ಲಿ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಎಂಎಂ ಸಂದ್ರೇಶ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಈ ಸೆಕ್ಷನ್ ಅನ್ನು ಮಾನ್ಯವೆಂದು ಪರಿಗಣಿಸಿದ್ದಾರೆ.

ಅಸ್ಸಾಂ ಒಪ್ಪಂದದ ಅನ್ವಯ ಈ ಸೆಕ್ಷನ್‌ ನಡಿ 1966 ಜನವರಿ 1 ಹಾಗೂ 1971 ಮಾರ್ಚ್‌ 25ರ ನಡುವೆ ಅಸ್ಸಾಂಗೆ ಪ್ರವೇಶಿಸಿದ ವಲಸಿಗರಿಗೆ ಭಾರತದ ಪೌರತ್ವ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳುತ್ತದೆ. ಪೀಠದ ತೀರ್ಮಾನಗಳು ಅಸ್ಸಾಂ ಒಪ್ಪಂದವನ್ನು ಬೆಂಬಲಿಸುತ್ತವೆ, ಇದು ಅಸ್ಸಾಂಗೆ ಅಕ್ರಮ ವಲಸೆಯಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ರಾಜಕೀಯ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ.

2017 ಮತ್ತು 2022 ರ ನಡುವೆ, 14,346 ವಿದೇಶಿ ಪ್ರಜೆಗಳನ್ನು ಭಾರತದಿಂದ ಗಡಿಪಾರು ಮಾಡಲಾಗಿದೆ ಎಂದು ನ್ಯಾಯಾಲಯದೊಂದಿಗೆ ಹಂಚಿಕೊಂಡ ಅಫಿಡವಿಟ್ ಬಹಿರಂಗಪಡಿಸಿದೆ. ಆದರೆ ಜನವರಿ 1966 ಮತ್ತು ಮಾರ್ಚ್ 1971 ರ ನಡುವೆ ಅಸ್ಸಾಂಗೆ ಪ್ರವೇಶಿಸಿದ 17,861 ವ್ಯಕ್ತಿಗಳನ್ನು ಈ ಸೆಕ್ಷನ್ ಅಡಿಯಲ್ಲಿ ಭಾರತೀಯ ನಾಗರಿಕರು ಎಂದು ಗುರುತಿಸಲಾಗಿದೆ. ಇದಲ್ಲದೆ, ಇದೇ ಅವಧಿಯಲ್ಲಿ 32,381 ವ್ಯಕ್ತಿಗಳನ್ನು ವಿದೇಶಿಯರ ನ್ಯಾಯಮಂಡಳಿಗಳು ವಿದೇಶಿಯರೆಂದು ಗೊತ್ತುಪಡಿಸಲಾಗಿದೆ ಎಂದು ಅದು ಹೇಳಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ನಂತರ, 25 ಮಾರ್ಚ್ 1971 ವಲಸಿಗರಿಗೆ ಪೌರತ್ವವನ್ನು ನೀಡಲು ಕೊನೆಯ ದಿನಾಂಕವಾಗಿದೆ. ಇದರರ್ಥ ಈ ದಿನಾಂಕದೊಳಗೆ, ಗೊತ್ತುಪಡಿಸಿದ ಸ್ಥಳಗಳಿಂದ, ವಿಶೇಷವಾಗಿ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದ ಜನರು, ಪೌರತ್ವ ಕಾಯ್ದೆಯಡಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT