ಫಾರೂಕ್ ಅಬ್ದುಲ್ಲಾ 
ದೇಶ

ಕಾಶ್ಮೀರ ಎಂದಿಗೂ ಪಾಕಿಸ್ತಾನ ಆಗಲ್ಲ: ಉಗ್ರ ದಾಳಿಗಳನ್ನು ನಿಲ್ಲಿಸಿ, ಪಾಕ್‌ಗೆ ಫಾರೂಕ್ ಅಬ್ದುಲ್ಲಾ ಎಚ್ಚರಿಕೆ!

ಗಂದರ್‌ಬಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 7 ಮಂದಿ ವಲಸೆ ಕಾರ್ಮಿಕರು ಮೃತಪಟ್ಟ ಬೆನ್ನಲ್ಲೇ ಫಾರೂಕ್ ಅಬ್ದುಲ್ಲಾ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.

ಶ್ರೀನಗರ: 7 ದಶಕಗಳಿಂದ ಆಗದ್ದೂ ಈಗ ಆಗುತ್ತಾ... ಕಾಶ್ಮೀರ ಎಂದಿಗೂ ಪಾಕಿಸ್ತಾನ ಆಗಲ್ಲ. ಉಗ್ರ ದಾಳಿಗಳನ್ನು ನಿಲ್ಲಿಸಿ, ನಮ್ಮನ್ನು ನೆಮ್ಮದಿಯಿಂದ ಜೀವನ ನಡೆಸಲು ಬಿಡಿ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ. ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಗಂದರ್‌ಬಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 7 ಮಂದಿ ವಲಸೆ ಕಾರ್ಮಿಕರು ಮೃತಪಟ್ಟ ಬೆನ್ನಲ್ಲೇ ಫಾರೂಕ್ ಅಬ್ದುಲ್ಲಾ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ. ಕಾಶ್ಮೀರ ಪಾಕಿಸ್ತಾನವಾಗುವುದಿಲ್ಲ. ಹೊರಗಿನ ಕಾರ್ಮಿಕರನ್ನು ಉಲ್ಲೇಖಿಸಿದ ಅವರು, ಕಾಶ್ಮೀರದಲ್ಲಿ ಹಣ ಸಂಪಾದಿಸಲು ಮತ್ತು ಕುಟುಂಬಕ್ಕೆ ಕಳುಹಿಸಲು ಬರುವ ಹೊರಗಿನ ಕಾರ್ಮಿಕರು ನಿನ್ನೆ ಈ ಕ್ರೂರರಿಂದ ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದು ಇದರಲ್ಲಿ ಜನರ ಸೇವೆ ಮಾಡುವ ನಮ್ಮ ವೈದ್ಯರೂ ಸೇರಿದ್ದಾರೆ.

ಇದನ್ನು ನಾವು ಹಲವು ವರ್ಷಗಳಿಂದ ನೋಡುತ್ತಿದ್ದೇವೆ ಮತ್ತು ಭಾರತದೊಂದಿಗಿನ ಸಂಬಂಧ ಸುಧಾರಿಸಬೇಕಾದರೆ ಇದೆಲ್ಲವೂ ನಿಲ್ಲಬೇಕು ಎಂದು ಪಾಕಿಸ್ತಾನದ ಆಡಳಿತಗಾರರಿಗೆ ಹೇಳಲು ಬಯಸುತ್ತೇವೆ ಎಂದು ಡಾ.ಅಬ್ದುಲ್ಲಾ ಹೇಳಿದರು. ಶಾಂತಿ ಮತ್ತು ಘನತೆಯಿಂದ ಬದುಕಲು ಮನವಿ ಮಾಡಿದ ಅವರು ಭಯೋತ್ಪಾದನೆ ವಿರುದ್ಧ ಏಕತೆಯ ಅಗತ್ಯವನ್ನು ಒತ್ತಿ ಹೇಳಿದರು. ಈ ಭಯೋತ್ಪಾದಕ ದಾಳಿಯೂ ಕಾಶ್ಮೀರದಲ್ಲಿ ದುಃಖ ಮತ್ತು ಕಳವಳದ ಅಲೆಯನ್ನು ಎಬ್ಬಿಸಿದೆ. ಅಲ್ಲದೆ ಸ್ಥಳೀಯ ನಾಯಕರು ಭಯೋತ್ಪಾದನೆಯ ವಿರುದ್ಧ ಮಾತನಾಡುವಂತಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT