ಶಿವಸೇನೆಯ ಮುಖಂಡ ಸಂಜಯ್ ರಾವುತ್ 
ದೇಶ

ಬಿಜೆಪಿ ಕೊಟ್ಟ ನೋವನ್ನು ಮರೆತು ಒಂದಾಗಲು ಸಾಧ್ಯವೇ? ಅಮಿತ್ ಶಾ ಭೇಟಿ ವದಂತಿಗೆ ಸಂಜಯ್ ರಾವುತ್ ಪ್ರತಿಕ್ರಿಯೆ

ಬಿಜೆಪಿಯೊಂದಿಗೆ ಕೈಜೋಡಿಸುವುದೆಂದರೆ ಔರಂಗಜೇಬ್ ಮತ್ತು ಅಫ್ಜಲ್ ಖಾನ್ (ಮಧ್ಯಕಾಲೀನ ಮೊಘಲ್ ರಾಜಮನೆತನಗಳು) ಒಟ್ಟಿಗೆ ಸೇರಿದಂತೆ ಎಂದರ್ಥ ಎಂದು ರಾವತ್ ಹೇಳಿದರು.

ಮುಂಬೈ: ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿರುವ ಕೆಲವು ವಲಯಗಳಲ್ಲಿನ ಊಹಾಪೋಹಗಳನ್ನು ಶಿವಸೇನೆ-ಯುಬಿಟಿ ಸಂಸದ ಮತ್ತು ಮುಖ್ಯ ವಕ್ತಾರ ಸಂಜಯ್ ರಾವತ್ ಸೋಮವಾರ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಮಹಾವಿಕಾಸ ಅಘಡಿ ಒಗ್ಗಟ್ಟಿನಿಂದ ಸ್ಪರ್ಧಿಸಲಿದೆ. "ನಾಳೆ ಸಂಜೆಯ ವೇಳೆಗೆ ನಾವು 17 ಸ್ಥಾನಗಳನ್ನು ಅಂತಿಮಗೊಳಿಸುತ್ತೇವೆ. ವಿದರ್ಭದಲ್ಲಿ 6-7 ಸ್ಥಾನಗಳ ಬಗ್ಗೆ ಸಮಸ್ಯೆಗಳಿವೆ , ಅದು ಕೂಡ ಬಗೆಹರಿಯುತ್ತದೆ. ನಾವು ಅಘಾಡಿಯಾಗಿ ಸ್ಪರ್ಧಿಸಲಿದ್ದೇವೆ. ಏಕೆಂದರೆ 3 ಪಕ್ಷಗಳು 288 ಸ್ಥಾನಗಳನ್ನು ಹಂಚಿಕೊಂಡಿವೆ. ಇದು ಸ್ವಲ್ಪ ಸಮಯ ತೆಗೆದುಕೊಂಡಿತು. ಮಹಾ ವಿಕಾಸ್ ಅಘಾಡಿಯ ಎಲ್ಲಾ 288 ಸ್ಥಾನಗಳ ಅಂತಿಮ ನಿರ್ಧಾರವನ್ನು ನಾಳೆ ಸಂಜೆಯೊಳಗೆ ಮಾಡಲಾಗುದು ಎಂದಿದ್ದಾರೆ.

ಬಿಜೆಪಿಯೊಂದಿಗೆ ಕೈಜೋಡಿಸುವುದೆಂದರೆ ಔರಂಗಜೇಬ್ ಮತ್ತು ಅಫ್ಜಲ್ ಖಾನ್ (ಮಧ್ಯಕಾಲೀನ ಮೊಘಲ್ ರಾಜಮನೆತನಗಳು) ಒಟ್ಟಿಗೆ ಸೇರುವುದು ಎಂದರ್ಥ ಎಂದು ರಾವತ್ ಹೇಳಿದರು. “ಬಿಜೆಪಿಯು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಉರುಳಿಸಿದ್ದು ಮಾತ್ರವಲ್ಲದೆ ದಿವಂಗತ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷವನ್ನು ಮುರಿದು, ಪಕ್ಷದ ಚಿಹ್ನೆಯನ್ನು ಕಸಿದುಕೊಂಡಿತು. ನಾವು ಬಿಜೆಪಿ ಜೊತೆ ಹೋಗುತ್ತೇವೆ ಎಂದು ವದಂತಿ ಹಬ್ಬಿಸುವವರು ಇದನ್ನೆಲಾ ಊಹಿಸಿಕೊಳ್ಳುತ್ತಾರೆ ಎಂದು ರಾವತ್ ಪ್ರಶ್ನಿಸಿದ್ದಾರೆ.

ಬಿಜೆಪಿ ಉದ್ಧವ್ ಅವರಿಗೆ ಮೋಸ ಮಾಡಿದೆ ಮತ್ತು ರಾಜ್ಯವನ್ನು ದೇಶದ್ರೋಹಿಗಳಿಗೆ ನೀಡಿದೆ ಎಂದು ಅವರು ಹೇಳಿದರು. “ನಾವು ಬಿಜೆಪಿ ಮತ್ತು ಅದರ ದಬ್ಬಾಳಿಕೆಯೊಂದಿಗೆ ಬಹಳ ಕಠಿಣವಾಗಿ ಹೋರಾಡಿದ್ದೇವೆ. ಇವರು ನಮ್ಮ ನಾಯಕನಿಗೆ ಕೊಟ್ಟ ನೋವನ್ನು ಹೇಗೆ ಮರೆಯಲು ಸಾಧ್ಯ? ಯಾವುದೇ ಆರೋಪಗಳಿಲ್ಲದೆ ನನ್ನನ್ನು ಜೈಲಿಗೆ ಕಳುಹಿಸಲಾಯಿತು. ನಾವು ದ್ರೋಹ ಮಾಡುವವರಲ್ಲ, ಶಿವಸೇನೆ (ಯುಬಿಟಿ) ಸ್ವಾಭಿಮಾನಿ ಜನರ ಪಕ್ಷವಾಗಿದೆ. ನಾವು ಏನನ್ನಾದರೂ ಮಾಡಲು ಬಯಸಿದರೆ, ನಾವು ಅದನ್ನು ಬಹಿರಂಗವಾಗಿ ಮಾಡುತ್ತೇವೆ ರಾವುತ್ ಹೇಳಿದರು. ನಮ್ಮ ಪಕ್ಷವನ್ನು ದೂಷಿಸಲು ಮತ್ತು ಎಂವಿಎ ಮೈತ್ರಿ ಪಾಲುದಾರರ ನಡುವಿನ ಅಂತರವನ್ನು ಹೆಚ್ಚಿಸಲು ಜನರು ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಸ್ವಾಭಿಮಾನದ ವಿಷಯದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಾವುತ್ ಹೇಳಿದ್ದಾರೆ. ಎಂವಿಎ ಪಾಲುದಾರರು 210 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸೀಟು ಹಂಚಿಕೆಯನ್ನು ಪರಿಹರಿಸಿದ್ದಾರೆ ಮತ್ತು ಉಳಿದವುಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಅವರು ಹೇಳಿದರು. ಪಕ್ಷವು ತನ್ನ 96 ಸ್ಥಾನಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಎಂಪಿಸಿಸಿ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ. “ಬಿಜೆಪಿ ಎಂವಿಎಯಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಆದರೆ ಅವರು ಇದನ್ನು ಮಾಡಲು ಬಿಡುವುದಿಲ್ಲ. ಬಿಜೆಪಿಗೆ ಚುನಾವಣೆಯಲ್ಲಿ ಸೋಲುವ ಭಯವಿದೆ. ಅದಕ್ಕಾಗಿಯೇ ಅವರು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಪಟೋಲೆ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT