ಮುಖ್ಯಮಂತ್ರಿ ಏಕನಾಥ್ ಶಿಂಧೆ  
ದೇಶ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: 45 ಶಿವಸೇನೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಜೂನ್ 2022 ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ಅವರು ಬಂಡಾಯವನ್ನು ಮುನ್ನಡೆಸಿದಾಗ ಅವರನ್ನು ಬೆಂಬಲಿಸಿದ ಬಹುತೇಕ ಎಲ್ಲಾ ಶಾಸಕರಿಗೆ ಆಡಳಿತ ಪಕ್ಷವು ಈ ಬಾರಿ ಟಿಕೆಟ್ ನೀಡಿದೆ. ಶಿಂಧೆ ಅವರು ಪಕ್ಕದ ಥಾಣೆ ನಗರದ ಕೊಪ್ರಿ-ಪಂಚಪಾಖಾಡಿಯಿಂದ ಮರು ಚುನಾವಣೆಗೆ ನಿಲ್ಲುತ್ತಿದ್ದಾರೆ.

ಮುಂಬೈ: ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಶಿವಸೇನೆ ನಿನ್ನೆ ಮಂಗಳವಾರ ತಡರಾತ್ರಿ ತನ್ನ 45 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಥಾಣೆ ನಗರದ ಕೊಪ್ರಿ-ಪಂಚ್‌ಪಖಾಡಿಯಿಂದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ತಮ್ಮ ಈಗಿರುವ ಕ್ಷೇತ್ರಗಳಿಂದ ಅರ್ಧ ಡಜನ್‌ಗೂ ಹೆಚ್ಚು ಸಂಪುಟ ಸಚಿವರು ಪುನರಾಯ್ಕೆ ಬಯಸಿ ಸ್ಪರ್ಧಿಸುತ್ತಿದ್ದಾರೆ.

ಜೂನ್ 2022 ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ಅವರು ಬಂಡಾಯವನ್ನು ಮುನ್ನಡೆಸಿದಾಗ ಅವರನ್ನು ಬೆಂಬಲಿಸಿದ ಬಹುತೇಕ ಎಲ್ಲಾ ಶಾಸಕರಿಗೆ ಆಡಳಿತ ಪಕ್ಷವು ಈ ಬಾರಿ ಟಿಕೆಟ್ ನೀಡಿದೆ. ಶಿಂಧೆ ಅವರು ಪಕ್ಕದ ಥಾಣೆ ನಗರದ ಕೊಪ್ರಿ-ಪಂಚಪಾಖಾಡಿಯಿಂದ ಮರು ಚುನಾವಣೆಗೆ ನಿಲ್ಲುತ್ತಿದ್ದಾರೆ.

ಪಕ್ಷವು ಸಚಿವರಾದ ಗುಲಾಬ್ರಾವ್ ಪಾಟೀಲ್, ದೀಪಕ್ ಕೇಸರಕರ್, ಅಬ್ದುಲ್ ಸತ್ತಾರ್ ಮತ್ತು ಶಂಬುರಾಜ್ ದೇಸಾಯಿ ಅವರನ್ನು ಕ್ರಮವಾಗಿ ಜಲಗಾಂವ್ ಗ್ರಾಮಾಂತರ, ಸಾವಂತವಾಡಿ, ಸಿಲ್ಲೋಡ್ ಮತ್ತು ಪಟಾನ್‌ನಿಂದ ಕಣಕ್ಕಿಳಿಸಿದೆ.

ಮತ್ತೊಬ್ಬ ಸಂಪುಟ ಸದಸ್ಯ ದಾದಾ ಭೂಸೆ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಹೊರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸಚಿವರಾದ ಉದಯ್ ಸಾಮಂತ್ ಮತ್ತು ತಾನಾಜಿ ಸಾವಂತ್ ಅವರು ಕ್ರಮವಾಗಿ ರತ್ನಗಿರಿ ಮತ್ತು ಪರಂದಾದಿಂದ ಕಣಕ್ಕಿಳಿದಿದ್ದಾರೆ. ಮತ್ತೊಬ್ಬ ಪ್ರಮುಖ ನಾಯಕ ಸದಾ ಸರ್ವಂಕರ್ ಮುಂಬೈನ ಮಾಹಿಮ್‌ನಿಂದ ಚುನಾವಣೆ ಎದುರಿಸಲಿದ್ದಾರೆ. ಪಕ್ಷವು ಹಲವು ಶಾಸಕರ ಸಂಬಂಧಿಕರನ್ನು ಸಹ ಕಣಕ್ಕಿಳಿಸಿದೆ.

ರಾಜಾಪುರದಿಂದ ಸಚಿವ ಉದಯ್ ಸಾಮಂತ್ ಸಹೋದರ ಕಿರಣ್ ಸಾಮಂತ್ ಗೆ ಟಿಕೆಟ್ ನೀಡಿದೆ. ದಿವಂಗತ ಶಾಸಕ ಅನಿಲ್ ಬಾಬರ್ ಅವರ ಪುತ್ರ ಸುಹಾಸ್ ಬಾಬರ್ ಸಾಂಗ್ಲಿ ಜಿಲ್ಲೆಯ ಖಾನಾಪುರದಿಂದ ಸ್ಪರ್ಧಿಸಲಿದ್ದಾರೆ.

ಮುಂಬೈ ವಾಯವ್ಯದಿಂದ ಶಿವಸೇನೆಯ ಲೋಕಸಭಾ ಸಂಸದ ರವೀಂದ್ರ ವೈಕರ್ ಅವರ ಪತ್ನಿ ಮನಿಶಾ ವೈಕರ್ ಅವರು ಜೋಗೇಶ್ವರಿ (ಪೂರ್ವ) ಕ್ಷೇತ್ರದಿಂದ ಕಣಕ್ಕಿಳಿದಿದ್ದರೆ, ಶಿವಸೇನಾ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆನಂದ್ ಅಡ್ಸುಲ್ ಅವರ ಪುತ್ರ ಅಭಿಜಿತ್ ಅಡ್ಸುಲ್ ಅವರು ಅಮರಾವತಿ ಜಿಲ್ಲೆಯ ದರ್ಯಾಪುರದಿಂದ ಸ್ಪರ್ಧಿಸಲಿದ್ದಾರೆ. ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಲೋಕಸಭಾ ಸಂಸದ ಸಂದೀಪನ್ ಬುಮ್ರೆ ಅವರ ಪುತ್ರ ವಿಲಾಸ್ ಬುಮ್ರೆ ಪೈಥಾನ್‌ನಿಂದ ಸ್ಪರ್ಧಿಸಲಿದ್ದಾರೆ.

ಇದರೊಂದಿಗೆ ಶಿವಸೇನೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಎರಡನೇ ಪ್ರಮುಖ ರಾಜಕೀಯ ಪಕ್ಷವಾಗಿದೆ. ಅದರ ಮಿತ್ರ ಪಕ್ಷ ಬಿಜೆಪಿ ಕಳೆದ ಭಾನುವಾರ 99 ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು.

ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿಯನ್ನು ಒಳಗೊಂಡಿರುವ ಆಡಳಿತಾರೂಢ ಮಹಾಯುತಿಯು 288 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆಗೆ ತನ್ನ ಸೀಟು ಹಂಚಿಕೆ ಒಪ್ಪಂದವನ್ನು ಇನ್ನೂ ಪ್ರಕಟಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT