ಹಿಮಾಚಲ ಪ್ರದೇಶದ ಬಿರ್-ಬಿಲ್ಲಿಂಗ್‌ನಲ್ಲಿ ಬೆಲ್ಜಿಯಂನ ಪ್ಯಾರಾಗ್ಲೈಡರ್ ಸಾವನ್ನಪ್ಪಿದ್ದಾನೆ. ಗಾಳಿಯಲ್ಲಿ ಮತ್ತೊಂದು ಪ್ಯಾರಾಗ್ಲೈಡರ್‌ಗೆ ಡಿಕ್ಕಿ ಹೊಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎರಡೂ ಪ್ಯಾರಾಗ್ಲೈಡರ್‌ಗಳು ಪ್ರತ್ಯೇಕವಾಗಿ ಗಾಳಿಯಲ್ಲಿ ಹಾರುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಗಾಯಗೊಂಡಿರುವ ಮತ್ತೊಬ್ಬ ಪ್ಯಾರಾಗ್ಲೈಡರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಪ್ರಾಣಕ್ಕೆ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಡಿಕ್ಕಿಯ ನಂತರ ಬೀಳುವ ಸಂದರ್ಭದಲ್ಲಿ ಪ್ಯಾರಾಗ್ಲೈಡರ್ ಮರಗಳಿಗೆ ಸಿಕ್ಕಿಹಾಕಿಕೊಂಡಿದೆ. ಫೆಯರೆಟ್ಸ್‌ನ ಮೃತದೇಹವನ್ನು ಗುರುತಿಸಲಾಗಿದೆ. ಆದರೆ ಇನ್ನೂ ಅರಣ್ಯದಿಂದ ವಶಪಡಿಸಿಕೊಳ್ಳಲಾಗಿಲ್ಲ.
ಗಾಯಗೊಂಡಿರುವ ಪ್ಯಾರಾಗ್ಲೈಡರ್ ಯಾವ ದೇಶದವರು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಿರ್-ಬಿಲ್ಲಿಂಗ್ ಕಣಿವೆಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೋಲಿಷ್ ಪ್ಯಾರಾಗ್ಲೈಡರ್ ಆಂಡ್ರೆಜ್ ಅವರು ಬಿರ್-ಬಿಲ್ಲಿಂಗ್‌ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಸಾವನ್ನಪ್ಪಿದ್ದರು ಎಂದು ಕಾಂಗ್ರಾ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.
ಮನಾಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಅಂಡ್ ಅಲೈಡ್ ಸ್ಪೋರ್ಟ್ಸ್ (ಎಬಿವಿಮಾಸ್) ನಿರ್ದೇಶಕ ಅವಿನಾಶ್ ನೇಗಿ ಮಾತನಾಡಿ, 'ಅಪಘಾತದ ಸ್ಥಳಗಳನ್ನು ಗುರುತಿಸಲು ಎತ್ತರದ ಪರ್ವತಗಳಲ್ಲಿ ವಿಶೇಷ ಟವರ್‌ಗಳನ್ನು ಅಳವಡಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಹೇಳಿದರು. ನವೆಂಬರ್ 2 ರಿಂದ 9 ರವರೆಗೆ ಇಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ 50 ದೇಶಗಳ 130 ಪ್ಯಾರಾಗ್ಲೈಡರ್‌ಗಳು ಭಾಗವಹಿಸಲಿದ್ದಾರೆ.