ಮಮತಾ ಬ್ಯಾನರ್ಜಿ online desk
ದೇಶ

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಪ್ರಕರಣ: ಮೂರು ಸುದ್ದಿ ವಾಹಿನಿಗಳಿಗೆ TMC ಬಹಿಷ್ಕಾರ

ದೆಹಲಿ ಮೂಲದ “ಜಮೀನ್‌ದಾರರ” ಆಜ್ಞೆಯ ಮೇರೆಗೆ ಈ ಚಾನೆಲ್‌ಗಳು ರಾಜ್ಯದ ವಿರುದ್ಧ ಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದೆ.

ಕೋಲ್ಕತಾ: ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದು, ಈ ನಡುವಲ್ಲೇ ಬಂಗಾಳ ವಿರೋಧಿ ಪ್ರಚಾರ ನಡೆಸಿದ್ದಾರೆಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮೂರು ಸುದ್ದಿವಾಹಿನಗಳನ್ನು ಬಹಿಷ್ಕರಿಸುವುದಾಗಿ ಸೋಮವಾರ ಘೋಷಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ಪಕ್ಷ, ಎಬಿಪಿ ಆನಂದ, ರಿಪಬ್ಲಿಕ್ ಟಿವಿ ಮತ್ತು ಟಿವಿ 9 ಅನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.

ದೆಹಲಿ ಮೂಲದ “ಜಮೀನ್‌ದಾರರ” ಆಜ್ಞೆಯ ಮೇರೆಗೆ ಈ ಚಾನೆಲ್‌ಗಳು ರಾಜ್ಯದ ವಿರುದ್ಧ ಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದೆ. ಅಲ್ಲದೆ, ಈ ಮೂರು ವಾಹಿನಿಗಳ ನೋಡದಂತೆ ಹಾಗೂ ಚರ್ಚೆಗಳಲ್ಲಿ ಭಾಗಿಯಾಗದಂತೆಯೂ ಬೆಂಬಲಿಗರು, ಪಕ್ಷದ ನಾಯಕರು ಹಾಗೂ ಜನತೆಗೆ ಮನವಿ ಮಾಡಿಕೊಂಡಿದೆ.

ರಾಜ್ಯದ ಜನರು ಈ ಅಪವಿತ್ರ ಬಂಗಾಳ ವಿರೋಧಿ ಅಪಪ್ರಚಾರವನ್ನು ನಿರಂತರವಾಗಿ ತಿರಸ್ಕರಿಸಿದ್ದಾರೆ ಮತ್ತು ಯಾವಾಗಲೂ ಪ್ರಚಾರಕ್ಕಿಂತ ಸತ್ಯವನ್ನೇ ಆರಿಸಿಕೊಂಡಿದ್ದಾರೆಂದು ತಿಳಿಸಿದೆ.

ಎಬಿಪಿ ಆನಂದ ಟಿವಿ ಚರ್ಚೆಯಲ್ಲಿ ತೃಣಮೂಲದ ಹಿರಿಯ ನಾಯಕ ಮತ್ತು ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್ ನಡುವಿನ ಜಟಾಪಟಿ ಕೆಲವು ದಿನಗಳ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಲೋಕಸಭೆಯಲ್ಲಿ ತೃಣಮೂಲ ಪಕ್ಷದ ಉಪನಾಯಕ ಎಂಎಸ್ ದಸ್ತಿದಾರ್ ಅವರು ಪ್ರಮುಖ ಫ್ಯಾಷನ್ ಡಿಸೈನರ್ ಎಂಎಸ್ ಪಾಲ್ ಅವರನ್ನು “ಸೀರೆ ಮೇಕರ್” ಎಂದು ಕರೆದಿದ್ದರು. ತನ್ನ ವೃತ್ತಿಯ ಬಗ್ಗೆ ನನಗೆ ಅಪಾರವಾದ ಹೆಮ್ಮೆ ಇದೆ ಎಂದು ಎಮ್‌ಎಸ್ ಪಾಲ್ ಪ್ರತಿಕ್ರಿಯಿಸಿದ್ದರು,

ಇದೇ ಕಾರ್ಯಕ್ರಮದಲ್ಲಿ ಎಂಎಸ್ ದಸ್ತಿದಾರ್ ಅವರ ಇನ್ನೊಂದು ಮಾತು ಗದ್ದಲಕ್ಕೆ ಕಾರಣವಾಗಿತ್ತು. ಬಂಗಾಳದಲ್ಲಿ ಸಿಪಿಎಂ ಯುಗದಲ್ಲಿ ಪಾಸ್ ಅಂಕಗಳಿಗಾಗಿ ವೈದ್ಯಕೀಯ ವಿದ್ಯಾರ್ಥಿಗಳನ್ನು “ಮಂಡಿಗಳ ಮೇಲೆ ಕುಳಿತುಕೊಳ್ಳುವಂತೆ ಮಾಡಲಾಯಿತು” ಎಂದು ಅವರು ಹೇಳಿದ್ದರು. ಈ ಹೇಳಿಕೆಗೆ ಮಹಿಳಾ ವೈದ್ಯರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ತೃಣಮೂಲ ಸಂಸದರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ದಸ್ತಿದಾರ್ ಅವರು, ಎಬಿಪಿ ಕಾರ್ಯಕ್ರಮದಲ್ಲಿ ನೀಡಿದ ಯಾವುದೇ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ ಮತ್ತು ನನ್ನ ಇತ್ತೀಚಿನ ಮಾತುಗಳು ಯಾರಿಗಾದರೂ ಭಾವನೆಗಳನ್ನು ನೋಯಿಸಿದರೆ ಕ್ಷಮೆಯಾಚಿಸುತ್ತೇನೆ. ನಾನು ನನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತೇನೆ. ನನ್ನ ಉದ್ದೇಶವು ಯಾವಾಗಲೂ ಮಹಿಳೆಯರ ಯೋಗಕ್ಷೇಮ ಮತ್ತು ಹಕ್ಕುಗಳ ಉದ್ದೇಶವಾಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT