ತಸ್ಲೀಮಾ ನಸ್ರೀನ್ 
ದೇಶ

INTERVIEW | ಬಾಂಗ್ಲಾದೇಶದಲ್ಲಿ ಶೀಘ್ರದಲ್ಲೇ ಷರಿಯಾ ಕಾನೂನು, ಮಹಿಳೆಯರಿಗೆ ಯಾವುದೇ ಹಕ್ಕು ಇರುವುದಿಲ್ಲ: ತಸ್ಲೀಮಾ ನಸ್ರಿನ್

Sumana Upadhyaya

ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರನ್ನು ವಜಾಗೊಳಿಸಿದ ನಂತರ ಆಮೂಲಾಗ್ರ ಇಸ್ಲಾಮಿಕ್ ಸಂಘಟನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಪರಿಣಾಮಗಳನ್ನು ಬಾಂಗ್ಲಾದೇಶದ ಮಹಿಳೆಯರು ಎದುರಿಸಲಿದ್ದಾರೆ ಎಂದು ಬಾಂಗ್ಲಾದೇಶದ ಖ್ಯಾತ ಲೇಖಕಿ, ಸಾಮಾಜಿಕ ಕಾರ್ಯಕರ್ತೆ, ಬಾಂಗ್ಲಾದೇಶದಿಂದ ಬಹಿಷ್ಕಾರಗೊಂಡು ಭಾರದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ತಸ್ಲೀಮಾ ನಸ್ರೀನ್ ಹೇಳಿದ್ದಾರೆ. ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಯೆಶಿ ಸೆಲಿ ಅವರಿಗೆ ನೀಡಿರುವ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಸದ್ಯ ಪ್ರಕ್ಷುಬ್ಧ ವಾತಾವರಣವಿದ್ದು ಅನಿಶ್ಚಿತತೆ ಮುಂದುವರಿದಿದೆ. ಇದನ್ನು ಮಹಿಳೆಯರು ಹೇಗೆ ನಿಭಾಯಿಸುತ್ತಾರೆ?

ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಯಿಂದ ಮಹಿಳೆಯರು ಹೆಚ್ಚು ಅದರ ಪರಿಣಾಮ ಎದುರಿಸುವ ಸಾಧ್ಯತೆಯಿದೆ. ತೀವ್ರಗಾಮಿ ಇಸ್ಲಾಮಿಸ್ಟ್ ಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯು ಷರಿಯಾ ಕಾನೂನಿನ ಅಡಿಯಲ್ಲಿ ನಿರ್ಬಂಧಗಳನ್ನು ಹೇರುವ ಮತ್ತು ನಿಯಂತ್ರಿಸುವ ಮೂಲಕ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ವಿಶ್ವವಿದ್ಯಾಲಯಗಳು ಈಗಾಗಲೇ ಇಸ್ಲಾಮಿಕ್ ಡ್ರೆಸ್ ಕೋಡ್ ಕುರಿತು ಆದೇಶಗಳನ್ನು ಹೊರಡಿಸಲು ಪ್ರಾರಂಭಿಸಿವೆ.

ಶೇಖ್ ಹಸೀನಾ ಅವರನ್ನು ಪ್ರಧಾನ ಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಿದ ನಂತರ ಮತ್ತು ಮಧ್ಯಂತರ ಸರ್ಕಾರದ ನಂತರ ಮಹಿಳೆಯರ ಬಗೆಗಿನ ಧೋರಣೆಯಲ್ಲಿ ಯಾವುದೇ ಬದಲಾವಣೆಯನ್ನು ನೀವು ಗಮನಿಸಿದ್ದೀರಾ?

ಹೌದು, ಖಂಡಿತವಾಗಿಯೂ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಹೆಣ್ಣುಮಕ್ಕಳು ಡ್ರೆಸ್ ಕೋಡ್ ನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಹಿಜಾಬ್/ನಕಾಬ್/ಬುರ್ಖಾ ಧರಿಸುವುದನ್ನು ಡ್ರೆಸ್ ಕೋಡ್ ಆಗಿ ಪರಿಚಯಿಸಲಾಗಿದ್ದು, ಶೀಘ್ರದಲ್ಲೇ ಅದು ರೂಢಿಗೆ ಬರಲಿದೆ. ಷರಿಯಾ ಕಾನೂನು ಜಾರಿಗೆ ಬಂದರೆ, ಮಹಿಳೆಯರಿಗೆ ಯಾವುದೇ ಹಕ್ಕುಗಳಿರುವುದಿಲ್ಲ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳು ಇರುತ್ತವೆ ಎಂದರ್ಥವೇ?

ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಷರಿಯಾ ಕಾನೂನನ್ನು ಹೇರಿದ ನಂತರ ಮಹಿಳೆಯರಿಗೆ ಯಾವುದೇ ಹಕ್ಕುಗಳಿಲ್ಲ. ಹಿಜ್ಬ್ ಉತ್-ತಹ್ರೀರ್, ಜಮಾತ್-ಐ-ಇಸ್ಲಾಮಿ ಮತ್ತು ಮೂಲಭೂತವಾದಿ ವಿದ್ಯಾರ್ಥಿಗಳು ಪ್ರತಿ ದಿನವೂ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದಾರೆ. ಹಸೀನಾ ಆಳ್ವಿಕೆಯಲ್ಲಿ ಹಿಜ್ಬ್ ಉತ್-ತಹ್ರೀರ್, ಜಮಾತ್-ಐ-ಇಸ್ಲಾಮಿಯನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸಲಾಗಿತ್ತು. ಬ್ಲಾಗರ್‌ಗಳು/ಬರಹಗಾರರನ್ನು ಕೊಂದಿದ್ದಕ್ಕಾಗಿ ಆ ಸಂಘಟನೆಗಳ ಅನೇಕ ಸದಸ್ಯರನ್ನು ಜೈಲುಗಳಿಗೆ ಕಳುಹಿಸಲಾಯಿತು. ಅವರು ಈಗ ಬಂಧ ಮುಕ್ತರಾಗುತ್ತಿದ್ದಾರೆ, ದೇಶದ ಭವಿಷ್ಯ ಏನೆಂದು ಸೂಚಿಸುತ್ತದೆ.

ಇಸ್ಲಾಮಿಕ್ ಮೂಲಭೂತವಾದಿಗಳ ಉದಯವು ಹಠಾತ್ ಆಯಿದೇ?

ಇಲ್ಲ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಆಳ್ವಿಕೆಯಲ್ಲಿ ಮೂಲಭೂತವಾದಿಗಳನ್ನು ಪ್ರೋತ್ಸಾಹಿಸಿದ್ದರು, ಆದ್ದರಿಂದ ಮದರಸಾಗಳು ದೇಶಾದ್ಯಂತ ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಯುವ ಪೀಳಿಗೆ ಇಸ್ಲಾಮಿಕ್ ಪರಿಸರದಲ್ಲಿ ಬೆಳೆದಿದೆ. ಯುವಕರನ್ನು ತರ್ಕಬದ್ಧವಾಗಿ ಯೋಚಿಸಲು ಮತ್ತು ವಿಜ್ಞಾನವನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುವ ಬದಲು, ಅವರ ಕ್ಷಿತಿಜವನ್ನು ವಿಸ್ತರಿಸಲು ಸಾಧ್ಯವಾಗುವಂತೆ, ಶೇಖ್ ಹಸೀನಾ ಮೂಲಭೂತ ಅಂಶಗಳನ್ನು ಪ್ರೋತ್ಸಾಹಿಸಿದರು, ಅದು ಅಂತಿಮವಾಗಿ ಫ್ರಾಂಕೆನ್‌ಸ್ಟೈನ್ ಆಗಿ ಮಾರ್ಪಟ್ಟು ಅವರ ಉಚ್ಛಾಟನೆಗೆ ಕಾರಣವಾಯಿತು. ಪ್ರಸ್ತುತ ಸರ್ಕಾರವು ಶೇಖ್ ಹಸೀನಾ ಅವರ "ನಿರಂಕುಶ ಆಡಳಿತ" ಕ್ಕಿಂತ ಕೆಟ್ಟದಾಗಿದೆ.

ಶಿಕ್ಷಕರ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ, ಪತ್ರಕರ್ತರು, ಸಚಿವರು ಮತ್ತು ಹಿಂದಿನ ಸರ್ಕಾರದ ಅಧಿಕಾರಿಗಳಲ್ಲಿ ಕೆಲವರು ಹತ್ಯೆಗೀಡಾದರೆ ಕೆಲವರಿಗೆ ಕಿರುಕುಳ ನೀಡಿ ಜೈಲು ಪಾಲಾಗುತ್ತಿದ್ದಾರೆ. ಆದರೆ, ಎಂಡಿ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಇಂತಹ ದುಷ್ಕೃತ್ಯಗಳ ವಿರುದ್ಧ ಒಂದು ಮಾತನ್ನೂ ಹೇಳುತ್ತಿಲ್ಲ.

ಮಧ್ಯಂತರ ಸರ್ಕಾರದ ಮೇಲೆ ನಿಮಗೆ ಭರವಸೆ ಇದೆಯೇ?

ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಶೇಖ್ ಹಸೀನಾರನ್ನು ಪದಚ್ಯುತಗೊಳಿಸಿದ ನಂತರದ ಹಿಂಸಾಚಾರವನ್ನು ಸಂಭ್ರಮಾಚರಣೆ ಎಂದು ಉಲ್ಲೇಖಿಸುವುದರಿಂದ ವಿಷಯಗಳನ್ನು ಇನ್ನಷ್ಟು ಹದಗೆಡಿಸಿದೆ, ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು, ವಸ್ತು ಸಂಗ್ರಹಾಲಯಗಳು ಮತ್ತು ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಗಳನ್ನು ಒಡೆಯಲಾಯಿತು. ಹಿಂದೂಗಳಂತಹ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಯಿತು. ಇದು ಹೊಸ ಸರ್ಕಾರದ ವಿಜಯೋತ್ಸವದ ಸಂಭ್ರಮದಲ್ಲಿರುವ ವಿದ್ಯಾರ್ಥಿಗಳ ಪ್ರತಿಕ್ರಿಯೆ ಎಂದು ಮಧ್ಯಂತರ ಸರ್ಕಾರ ಹೇಳಿದೆ. ಅಲ್ಲಿನ ವಾಸ್ತವ ಭಾವನೆ ಭಾರತ ವಿರೋಧಿ, ಮಹಿಳಾ ವಿರೋಧಿ ಮತ್ತು ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ದೇಶದಲ್ಲಿ ಆಮೂಲಾಗ್ರೀಕರಣ ಹಲವು ಪಟ್ಟು ಹೆಚ್ಚಾಗಿದೆ. ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಇಸ್ಲಾಮಿಗಳು ಜನರನ್ನು ಕೇಳಿಕೊಂಡಿದ್ದಾರೆ.

ನೀವು ಹಲವಾರು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೀರಿ. ನಿಮ್ಮ ನಿವಾಸ ಪರವಾನಗಿಯನ್ನು ನವೀಕರಿಸದಿರುವ ಬಗ್ಗೆ ನೀವು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದೀರಿ.

ನಾನು ಸುಮಾರು ಎರಡು ದಶಕಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೇನೆ. 2005 ರಿಂದ 2010 ರವರೆಗೆ, ನನಗೆ ದೀರ್ಘಕಾಲದವರೆಗೆ ಇರಲು ಅವಕಾಶ ನೀಡದಿದ್ದುದರಿಂದ ನನ್ನ ವಾಸ್ತವ್ಯ ಸೀಮಿತ ಸಮಯವಾಗಿತ್ತು. 2011 ರಿಂದ ಭಾರತವು ನನ್ನ ಮನೆಯಾಗಿದೆ. ಜುಲೈ 27 ರಂದು ನನ್ನ ನಿವಾಸ ಪರವಾನಗಿ ಮುಗಿದಿದೆ. ಅದರ ನವೀಕರಣದ ಬಗ್ಗೆ ನನಗೆ ಅಧಿಕೃತವಾಗಿ ಯಾವುದೇ ಸೂಚನೆ ಬಂದಿಲ್ಲ. ಆನ್‌ಲೈನ್ ಸ್ಥಿತಿಯು ಪ್ರಕ್ರಿಯೆಯಲ್ಲಿದೆ ಎಂದು ತೋರಿಸುತ್ತದೆ. ಹಾಗಾಗಿ ನವೀಕರಣಗೊಳ್ಳುವ ಆಶಾವಾದ ನನಗಿದೆ. ನಾನು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದೇನೆ, ವಾಸ್ತವ್ಯ ವಿಸ್ತರಣೆ ಪರವಾನಗಿಯನ್ನು ಶೀಘ್ರದಲ್ಲೇ ಪಡೆಯುತ್ತೇನೆ ಎಂಬ ವಿಶ್ವಾಸವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT