ಹಿಮಂತ್ ಬಿಸ್ವಾ ಶರ್ಮಾ 
ದೇಶ

NRCಗೆ ಅರ್ಜಿ ಸಲ್ಲಿಸದಿದ್ರೆ ಆಧಾರ್‌ ಕಾರ್ಡ್‌ ಇಲ್ಲ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಣೆ

ರಾಜ್ಯದಲ್ಲಿ ಆಧಾರ್ ಕಾರ್ಡ್‌ಗಾಗಿ ಹೊಸ ಅರ್ಜಿದಾರರು ತಮ್ಮ ರಾಷ್ಟ್ರೀಯ ನಾಗರಿಕರ ನೋಂದಣಿ ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸಬೇಕು. ಆಧಾರ್ ಕಾರ್ಡ್‌ಗಾಗಿ ಅರ್ಜಿಗಳು ಜನಸಂಖ್ಯೆಗಿಂತ ಹೆಚ್ಚಿವೆ. ಅನುಮಾನಾಸ್ಪದ ನಾಗರಿಕರಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ.

ಗುವಾಹಟಿ: 2014 ರಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಭಾಗವಾಗಲು ಅರ್ಜಿ ಸಲ್ಲಿಸದ ಜನರಿಗೆ ಆಧಾರ್ ಕಾರ್ಡ್‌ಗಳನ್ನು ನೀಡದಿರುವ ಸರ್ಕಾರದ ನಿರ್ಧಾರವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ಆಧಾರ್ ಕಾರ್ಡ್‌ಗಾಗಿ ಹೊಸ ಅರ್ಜಿದಾರರು ತಮ್ಮ ರಾಷ್ಟ್ರೀಯ ನಾಗರಿಕರ ನೋಂದಣಿ ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸಬೇಕು. ಆಧಾರ್ ಕಾರ್ಡ್‌ಗಾಗಿ ಅರ್ಜಿಗಳು ಜನಸಂಖ್ಯೆಗಿಂತ ಹೆಚ್ಚಿವೆ. ಅನುಮಾನಾಸ್ಪದ ನಾಗರಿಕರಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಹೊಸ ಅರ್ಜಿದಾರರು ತಮ್ಮ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ” ಎಂದು ಶರ್ಮಾ ಹೇಳಿದ್ದಾರೆ.

ಧುಬ್ರಿ, ಬಾರ್ಪೇಟಾ, ಮೊರಿಗಾಂವ್‌ ಜಿಲ್ಲೆಗಳಲ್ಲಿ ಒಟ್ಟು ಆಧಾರ್‌ ಕಾರ್ಡ್‌ಗಳ ಸಂಖ್ಯೆ ಅಲ್ಲಿನ ಜನಸಂಖ್ಯೆಯನ್ನೂ ಮೀರಿದೆ. ಈ ಮೂರು ಜಿಲ್ಲೆಗಳಲ್ಲಿ ಮುಸ್ಲಿಂ ಬಹುಸಂಖ್ಯಾತರು, ಯೋಜಿತ ಜನಸಂಖ್ಯೆಯ ಅಂಕಿಅಂಶಗಳಿಗೆ ವಿರುದ್ಧವಾಗಿ ನೀಡಲಾದ ಆಧಾರ್ ಕಾರ್ಡ್‌ಗಳ ಶೇಕಡಾವಾರು ಪ್ರಮಾಣವು ಕ್ರಮವಾಗಿ ಧುಬ್ರಿ, ಬಾರ್ಪೇಟಾ ಮತ್ತು ಮೊರಿಗಾಂವ್‌ಗೆ 103%, 103% ಮತ್ತು 101% ಆಗಿದೆ. ಆದ್ದರಿಂದ, ಈ ಜಿಲ್ಲೆಗಳಲ್ಲಿ ಶಂಕಿತ ವಿದೇಶಿಗರು ಸಹ ಆಧಾರ್ ಕಾರ್ಡ್‌ಗಳನ್ನು ಪಡೆದು ಪ್ರವೇಶಿಸಿದ್ದಾರೆ ಎಂದು ತೀರ್ಮಾನಿಸಬಹುದೆಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಆಧಾರ್ ಕಾರ್ಡ್‌ಗಳ ವಿತರಣೆಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಟೋಕಾಲ್ ಅನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದು 2015 ರಲ್ಲಿ ಅರ್ಜಿ ಸಲ್ಲಿಸುವಾಗ ಅವರಿಗೆ ಒದಗಿಸಲಾದ ತಮ್ಮ ಎನ್‌ಆರ್‌ಸಿ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ಒದಗಿಸುವಂತೆ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ. 3.3 ಕೋಟಿ ಜನರ ಪಟ್ಟಿಯಲ್ಲಿಲ್ಲದ ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸಿದವರಿಗೆ ಆಧಾರ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ ಎಂದು ಶರ್ಮಾ ಸೂಚಿಸಿದ್ದಾರೆ.

ಈ ಕ್ರಮವು “ಅಕ್ರಮ ವಿದೇಶಿಗರ ಒಳಹರಿವನ್ನು ತಡೆಯುತ್ತದೆ ಮತ್ತು ಆಧಾರ್ ಕಾರ್ಡ್‌ಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರವು “ಅತ್ಯಂತ ಕಟ್ಟುನಿಟ್ಟಾಗಿ” ಇರುತ್ತದೆ. ಅಸ್ಸಾಂನಲ್ಲಿ ಆಧಾರ್ ಪಡೆಯುವುದು ಸುಲಭವಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

“ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ಸ್ ಲಾಕ್ ಆಗಿರುವ 9.55 ಲಕ್ಷ ಜನರಿಗೆ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸುವುದು ಅನ್ವಯಿಸುವುದಿಲ್ಲ ಮತ್ತು ಅವರು ತಮ್ಮ ಕಾರ್ಡ್‌ಗಳನ್ನು ಪಡೆಯುತ್ತಾರೆ ಎಂದಿದ್ದಾರೆ ಶರ್ಮಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT