ಸಾಂದರ್ಭಿಕ ಚಿತ್ರ 
ದೇಶ

IAF: ಕಿರಿಯ ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರ, Oral Sex ಗೆ ಒತ್ತಾಯ; ಹಿರಿಯ ಅಧಿಕಾರಿ ವಿರುದ್ಧ ದೂರು

ಕಳೆದ ಎರಡು ವರ್ಷಗಳಿಂದ ತಮ್ಮ ಮೇಲೆ ಲೈಂಗಿಕ ಕಿರುಕುಳವಾಗಿದ್ದು, ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಮಹಿಳಾ ಅಧಿಕಾರಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಶ್ರೀನಗರ: ಭಾರತೀಯ ವಾಯುಪಡೆಯ ಮಹಿಳಾ ಫ್ಲೈಯಿಂಗ್ ಆಫೀಸರ್, ತಮ್ಮದೇ ವಿಭಾಗದ ಹಿರಿಯ ವಿಂಗ್ ಕಮಾಂಡರ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದು, Oral Sexಗೆ ಒತ್ತಾಯಿಸಿದ್ದರು ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವಾಯುಸೇನೆ ಕೂಡ, 'ಪ್ರಕರಣದ ಬಗ್ಗೆ ನಮಗೆ ತಿಳಿದಿದೆ.

ಸ್ಥಳೀಯ ಪೊಲೀಸ್ ಠಾಣೆ ಬುಡ್ಗಾಮ್ ಈ ವಿಚಾರದಲ್ಲಿ ಶ್ರೀನಗರದಲ್ಲಿರುವ ಭಾರತೀಯ ವಾಯುಪಡೆಯನ್ನು ಸಂಪರ್ಕಿಸಿದೆ. ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ" ಎಂದು ತಿಳಿಸಿದೆ.

2 ವರ್ಷಗಳಿಂದ ಅತ್ಯಾಚಾರ, Oral Sexಗೆ ಒತ್ತಾಯ

ಮಹಿಳಾ ಅಧಿಕಾರಿ ನೀಡಿರುವ ದೂರಿನಲ್ಲಿರುವಂತೆ ಕಳೆದ ಎರಡು ವರ್ಷಗಳಿಂದ ತಮ್ಮ ಮೇಲೆ ಲೈಂಗಿಕ ಕಿರುಕುಳವಾಗಿದ್ದು, ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಮಹಿಳಾ ಅಧಿಕಾರಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಗಿಫ್ಟ್ ಇದೆ ಎಂದು ಹೇಳಿ ರೂಮಿನಲ್ಲಿ ಲೈಂಗಿಕ ದೌರ್ಜನ್ಯ

ಕಳೆದ ಹೊಸ ವರ್ಷಾಚರಣೆ ವೇಳೆ ಆಫೀಸರ್ಸ್ ಮೆಸ್ ನಲ್ಲಿ ನಡೆದ ಪಾರ್ಟಿಯಲ್ಲಿ ಮಹಿಳಾ ಫ್ಲೈಯಿಂಗ್ ಆಫೀಸರ್ ಅವರ ಹಿರಿಯ ಅಧಿಕಾರಿಯಾದ ವಿಂಗ್ ಕಮಾಂಡರ್, ನಿಮಗೆ ಗಿಫ್ಟ್ ಸಿಕ್ಕಿದೆಯಾ ಎಂದು ಮಹಿಳಾ ಅಧಿಕಾರಿಯನ್ನು ಕೇಳಿದ್ದಾರೆ. ಮಹಿಳಾ ಅಧಿಕಾರಿ ಇಲ್ಲ ಎಂದಿದ್ದಕ್ಕೆ, ನನ್ನ ರೂಮ್ ನಲ್ಲಿದೆ, ಬಂದು ಪಡೆದುಕೊಳ್ಳಿ ಎಂದು ಹೇಳಿದರು.

ಅದರಂತೆ ಮಹಿಳಾ ಅಧಿಕಾರಿ ವಿಂಗ್ ಕಮಾಂಡರ್ ಮನೆಗೆ ಹೋದಾಗ, ಅಲ್ಲಿ ಹಿರಿಯ ಅಧಿಕಾರಿಯ ಕುಟುಂಬ ಸದಸ್ಯರು ಯಾರು ಇರದಿರುವುದು ಕಂಡು ಅವರಿಗೆ ಸಂಶಯವಾಗಿದೆ. ಕುಟುಂಬ ಸದಸ್ಯರು ಎಲ್ಲಿ ಎಂದು ಮಹಿಳಾ ಅಧಿಕಾರಿ ಪ್ರಶ್ನಿಸಿದಾಗ, ವಿಂಗ್ ಕಮಾಂಡರ್ ಅವರು ಬೇರೆಡೆ ಇದ್ದಾರೆ ಎಂದು ತಿಳಿಸಿದ್ದಾರೆ. ಬಳಿಕ ವಿಂಗ್ ಕಮಾಂಡರ್, ಮಹಿಳಾ ಅಧಿಕಾರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ತಡೆಯುವ ಪ್ರಯತ್ನ ಮಾಡಿದರೂ ಹಿರಿಯ ಅಧಿಕಾರಿಯಾದ ವಿಂಗ್ ಕಮಾಂಡರ್ ನನ್ನನ್ನು ಬಿಡಲಿಲ್ಲ. ಮುಂದಿನ ಶುಕ್ರವಾರವೂ ನನ್ನ ಕುಟುಂಬ ಸದಸ್ಯರು ಇರುವುದಿಲ್ಲ. ಆಗ ಮತ್ತೆ ಭೇಟಿಯಾಗೋಣ ಎಂದು ಹೇಳಿದ್ದರು ಎಂದು ಫ್ಲೈಯಿಂಗ್ ಆಫೀಸರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳಾ ಅಧಿಕಾರಿಯು ಆರಂಭದಲ್ಲಿ ಈ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲು ಹಿಂದೇಟು ಹಾಕಿದ್ದರು. ಅಲ್ಲದೇ ದಿನೇ ದಿನೇ ಇದೇ ವಿಚಾರವಾಗಿ ಚಿಂತೆ ಮಾಡಿ ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ. ಬಳಿಕ ತನ್ನ ಇಬ್ಬರು ಮಹಿಳಾ ಸಹೋದ್ಯೋಗಿಗಳ ಜೊತೆ ಹಂಚಿಕೊಂಡಾಗ ಅವರು ದೂರು ನೀಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಆಂತರಿಕ ಸಮಿತಿಗೆ ಫ್ಲೈಯಿಂಗ್ ಆಫೀಸರ್ ದೂರು ನೀಡಿದ್ದಾರೆ. ಆರಂಭದಲ್ಲಿ ಸರಿಯಾಗಿ ಸ್ಪಂದಿಸದ ಆಂತರಿಕ ಸಮಿತಿ ಬಳಿಕ ಇಬ್ಬರನ್ನೂ ಒಂದೆಡೆ ಕುಳ್ಳಿರಿಸಿ ವಿಚಾರಣೆ ಮಾಡಲು ಮುಂದಾಗಿದೆ. ಆರೋಪಿಯ ಮುಂದೆಯೇ ವಿಚಾರಣೆ ಮಹಿಳಾ ಅಧಿಕಾರಿಗೆ ಸರಿ ಕಂಡು ಬಂದಿಲ್ಲ ಎನ್ನಲಾಗಿದೆ. ಅವರು ಇಬ್ಬರನ್ನು ಪ್ರತ್ಯೇಕ ವಿಚಾರಣೆಗೆ ವಿನಂತಿಸಿದರೂ, ಆ ಬಗ್ಗೆ ಆಂತರಿಕ ಸಮಿತಿಯು ಗಮನಹರಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಖಿನ್ನತೆಗೆ ಜಾರಿದ್ದ ಮಹಿಳಾ ಅಧಿಕಾರಿ

ಇನ್ನೊಮ್ಮೆ ಆಂತರಿಕ ಸಮಿತಿಗೆ ಈ ಬಗ್ಗೆ ದೂರು ನೀಡಿ ಕ್ರಮ ಕೈಗೊಳ್ಳಲು ಹೇಳಿದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಫ್ಲೈಯಿಂಗ್ ಆಫೀಸರ್ ತಿಳಿಸಿದ್ದಾರೆ. ಘಟನೆಯ ಬಳಿಕ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವಳಂತೆ ಮಾನಸಿಕವಾಗಿ ಕುಗ್ಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸಿತ್ತು ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ. ಮಹಿಳಾ ಅಧಿಕಾರಿಯು ಮಾನಸಿಕ ಖಿನ್ನತೆಯಿಂದ ಹೊರ ಬರಲು ಬೇರೆಡೆಗೆ ವರ್ಗಾವಣೆ ಕೇಳಿದರೂ ಅವರನ್ನು ಕಡೆಗಣಿಸಲಾಗಿದೆ ಎನ್ನಲಾಗಿದೆ. ರಜೆ ಕೇಳಿದರೂ ನೀಡದೇ ಹಿರಿಯ ಅಧಿಕಾರಿಗಳು ಸತಾಯಿಸಿದರು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!