ರಕ್ಷಣಾ ಕಾರ್ಯಾಚರಣೆ 
ದೇಶ

ಮಧ್ಯ ಪ್ರದೇಶ: ಭಾರೀ ಮಳೆಗೆ ಗೋಡೆ ಕುಸಿದು ಏಳು ಮಂದಿ ಸಾವು

ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.

ಡಾಟಿಯಾ: ಮಧ್ಯ ಪ್ರದೇಶದ ಡಾಟಿಯಾ ಪಟ್ಟಣದಲ್ಲಿ ಭಾರೀ ಮಳೆಯಿಂದಾಗಿ ಗುರುವಾರ ಮನೆಯ ಪಕ್ಕದ ಹಳೆಯ ಗೋಡೆ ಕುಸಿದು ಏಳು ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಲ್ಕಾಪುರ ಪ್ರದೇಶದಲ್ಲಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯೊಂದರ ಪಕ್ಕದಲ್ಲಿದ್ದ ಗೋಡೆಯು ಅದರ ಮೇಲೆ ಬಿದ್ದಿದ್ದು, ಒಂಬತ್ತು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಆ ಪೈಕಿ ಏಳು ಜನ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರನ್ನು ರಕ್ಷಿಸಲಾಗಿದೆ ಎಂದು ಡಾಟಿಯಾ ಕಲೆಕ್ಟರ್ ಸಂದೀಪ್ ಮಕಿನ್ ಅವರು ಹೇಳಿದ್ದಾರೆ.

ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆ ನಡೆದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತಕ್ಕೆ ಸೇವೆ ನೀಡಲು ಸ್ಟಾರ್‌ಲಿಂಕ್ ಸಿದ್ಧ, ಗ್ರಾಮೀಣ ಸಂಪರ್ಕಕ್ಕೆ ಸಹಾಯ ಮಾಡುತ್ತದೆ': Elon Musk

ತಮಿಳುನಾಡು: ಸರ್ಕಾರಿ ಬಸ್‌ಗಳ ಮುಖಾಮುಖಿ ಡಿಕ್ಕಿ; ಕನಿಷ್ಠ 11 ಮಂದಿ ಸಾವು, 20 ಜನರಿಗೆ ಗಾಯ!

ಮೊದಲ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ಅಬ್ಬರದ ಬ್ಯಾಟಿಂಗ್: ಕೊನೆಯ ಓವರ್ ನಲ್ಲಿ ಭಾರತಕ್ಕೆ ವಿರೋಚಿತ ಜಯ!

'ಆ ಹಸಿವು ಇನ್ನೂ ಇದೆ.. ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ': Virat kohli ಖಡಕ್ ಸಂದೇಶ! ಟೆಸ್ಟ್ ಕ್ರಿಕೆಟ್ ಗೆ ಕೊಹ್ಲಿ ವಾಪಸ್?

Cricket: ಕೇವಲ 11 ರನ್ ಗೆ 3 ವಿಕೆಟ್; ಗೆಲುವಿನ ಸನಿಹ ಬಂದಿದ್ದ ದಕ್ಷಿಣ ಆಫ್ರಿಕಾ ಸೋಲಿನಲ್ಲೂ ದಾಖಲೆಗಳ ಸುರಿಮಳೆ!

SCROLL FOR NEXT