ಸಾಂದರ್ಭಿಕ ಚಿತ್ರ 
ದೇಶ

ಪಂಜಾಬ್: ಕಳ್ಳಸಾಗಾಣಿಕೆದಾರರಿಗೆ ನೆರವು; ಡ್ರಗ್ ಇನ್ಸ್‌ಪೆಕ್ಟರ್‌ ಬಂಧನ; 1.49 ಕೋಟಿ ರೂ ನಗದು, ಚಿನ್ನ, ವಿದೇಶಿ ಕರೆನ್ಸಿ ವಶ!

ಗಂಭೀರ ಆರ್ಥಿಕ ಅವ್ಯವಹಾರಗಳನ್ನು ಗಮನಿಸಲಾಗಿದ್ದು, ANTF 7.09 ಕೋಟಿ ರೂ. ಹಣವಿರುವ 24 ಬ್ಯಾಂಕ್ ಖಾತೆಗಳನ್ನು ಗುರುತಿಸಿ ಅವುಗಳನ್ನು ಸ್ಥಗಿತಗೊಳಿಸಿದೆ.

ಚಂಡೀಗಢ: ಅಕ್ರಮವಾದ ಔಷಧ ಕಂಪನಿಗಳು ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ಸಂಬಂಧಿಸಿದ ಮಾದಕವಸ್ತು ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪಂಜಾಬ್ ಪೊಲೀಸ್‌ನ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) ಡ್ರಗ್ ಇನ್‌ಸ್ಪೆಕ್ಟರ್ ಶಿಶನ್ ಮಿತ್ತಲ್ ಅವರನ್ನು ಬಂಧಿಸಿದ್ದು, ರೂ. 1.49 ಕೋಟಿ ನಗದು, 260 ಗ್ರಾಂ ಚಿನ್ನ ಮತ್ತು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದೆ. ಜೊತೆಗೆ 7.09 ಕೋಟಿ ರೂ. ನಗದು ಹೊಂದಿರುವ ಹೊಂದಿರುವ 24 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮಿತ್ತಲ್ ಮಾದಕವಸ್ತು ಕಾರ್ಯಾಚರಣೆಗಳನ್ನು ಸುಗಮಗೊಳಿಸಿದರು ಮತ್ತು ಜೈಲಿನೊಳಗಿರುವ ಕಳ್ಳಸಾಗಣೆದಾರರೊಂದಿಗೆ ಸಮನ್ವಯದಿಂದ ಮಾದಕವಸ್ತು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹೊರಗಡೆ ಅವರ ಜಾಲ ಸಕ್ರಿಯವಾಗುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಜ್ಯ ಪೊಲೀಸರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗಂಭೀರ ಆರ್ಥಿಕ ಅವ್ಯವಹಾರಗಳನ್ನು ಗಮನಿಸಲಾಗಿದ್ದು, ANTF 7.09 ಕೋಟಿ ರೂ. ಹಣವಿರುವ 24 ಬ್ಯಾಂಕ್ ಖಾತೆಗಳನ್ನು ಗುರುತಿಸಿ ಅವುಗಳನ್ನು ಸ್ಥಗಿತಗೊಳಿಸಿದೆ. ಇದರ ಜೊತೆಗೆ ಎರಡು ಬ್ಯಾಂಕ್ ಲಾಕರ್‌ಗಳನ್ನು ವಶಪಡಿಸಿಕೊಂಡಿದ್ದು, 1.49 ಕೋಟಿ ರೂ. ನಗದು, 260 ಗ್ರಾಂ ಚಿನ್ನ ಮತ್ತು ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದೆ.

ಅಲ್ಲದೇ, ಜಿರಾಕ್‌ಪುರ ಮತ್ತು ದಬ್ವಾಲಿಯಲ್ಲಿ 2.40 ಕೋಟಿ ಮೌಲ್ಯದ ರಿಯಲ್ ಎಸ್ಟೇಟ್ ಸೇರಿದಂತೆ ಅಕ್ರಮ ಚಟುವಟಿಕೆಗಳ ಆದಾಯದ ಮೂಲಕ ಗಳಿಸಿದ ಗಣನೀಯ ಆಸ್ತಿಯನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಗಸ್ಟ್ 8 ರಂದು ಪಂಜಾಬ್, ಹರಿಯಾಣ ಮತ್ತು ಚಂಡೀಘಡದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಆ ಸಂದರ್ಭದಲ್ಲಿ ಮಿತ್ತಲ್ ವೈದ್ಯಕೀಯ ರಜೆಯಲ್ಲಿದ್ದರು. ಅದು ಆಗಸ್ಟ್ 31 ರಂದು ಅಂತ್ಯವಾಗಿದ್ದು, ವಿಸ್ತರಣೆಗೆ ಅವರು ಮನವಿ ಮಾಡಿದ್ದರು. ಆದರೆ, ಅದನ್ನು ಅವರ ಇಲಾಖೆ ತಿರಸ್ಕರಿಸಿದ್ದು, ಮುಕ್ತಾಸರ್-1 ಔಷಧ ನಿಯಂತ್ರಣಾಧಿಕಾರಿಯಾಗಿ ವರ್ಗಾವಣೆ ಮಾಡಿದೆ. ಆದರೆ ಈ ಹಿಂದೆ ಅವರು ಫಾಜಿಕಾ-2 ನಲ್ಲಿ ಔಷಧ ನಿಯಂತ್ರಣಾಧಿಕಾರಿಯಾಗಿ ಅವರು ಕೆಲಸ ಮಾಡಿರುವುದರಿಂದ ಹೊಸ ಹುದ್ದೆಗೆ ಅವರು ಸೇರಿಲ್ಲ.

ಕಳೆದ ತಿಂಗಳು NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ, ಮಿತ್ತಲ್ ಅವರನ್ನು ಆರಂಭದಲ್ಲಿ ಬಂಧನ ಅಥವಾ ಅಮಾನತುಗೊಳಿಸಿರಲಿಲ್ಲ. ಆದಾಗ್ಯೂ, ಕಳೆದ ಎರಡು ವಾರಗಳಿಂದ ಹಲವು ಸುತ್ತಿನ ವಿಚಾರಣೆಯ ನಂತರ ಶುಕ್ರವಾರ ಮೊಹಾಲಿಯಲ್ಲಿ ಅವರನ್ನು ಬಂಧಿಸಲಾಯಿತು. ಮಾದಕ ವಸ್ತು ಕಳ್ಳಸಾಗಣೆದಾರರಿಗೆ ನೆರವು ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಆರೋಪ ಅವರ ಮೇಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT