ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶದ ಚಿತ್ತೂರು ತಾಲೂಕಿನ ಚಂದ್ರಗಿರಿ ಬಳಿ ಲಾರಿ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕಬಳ್ಳಾಪುರ ಮೂಲದ ಮೂವರು ಮೃತಪಟ್ಟಿದ್ದಾರೆ.
ಮತ್ತೊರ್ವನಿಗೆ ಗಂಭೀರ ಗಾಯವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಹರಿಸ್ಥಳ ನಿವಾಸಿಗಳಾದ ಮುನಿವೆಂಕಟ ರೆಡ್ಡಿ, ಚಾಲಕ ರಮೇಶ, ಮಂಜುನಾಥ್ ಮೃತ ದುರ್ದೈವಿಗಳು. ತಿರುಪತಿಗೆ ಹೋಗಿ, ಗುರುವಾರ ಸಂಜೆ ಚಿಕ್ಕಬಳ್ಳಾಪುರಕ್ಕೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.